ETV Bharat / state

ಸ್ವಾವಲಂಬಿಗಳಾಗಿ ಬದುಕು ಕಟ್ಟಿಕೊಳ್ಳುವ ವಿದ್ಯಾರ್ಥಿಗಳನ್ನು ಸೃಷ್ಟಿಸಿ: ಸಚಿವ ಮಾಧುಸ್ವಾಮಿ

ವಿದ್ಯಾರ್ಥಿಗಳು ಸ್ವಾವಲಂಬಿಗಳಾಗಿ ಬದುಕು ಕಟ್ಟಿಕೊಳ್ಳುವಂತೆ ಶಿಕ್ಷಕರು ಮಾರ್ಗದರ್ಶನ ನೀಡಬೇಕು. ಈ ನಿಟ್ಟಿನಲ್ಲಿ ಪದವಿಪೂರ್ವ ಶಿಕ್ಷಣ ಪ್ರಮುಖವಾದದ್ದು ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ಅಭಿಪ್ರಾಯಪಟ್ಟರು.

ಸಚಿವ ಜೆ.ಸಿ.ಮಾಧುಸ್ವಾಮಿ
author img

By

Published : Sep 28, 2019, 12:48 PM IST

ತುಮಕೂರು: ಬೋಧನೆ ಮಾಡುವವರೆಲ್ಲ ಒಳ್ಳೆಯ ಗುರುಗಳಾಗುವುದಿಲ್ಲ, ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ, ಸ್ಪೂರ್ತಿ ನೀಡಿ ಅವರ ಜೀವನವನ್ನು ರೂಪಿಸಿಕೊಳ್ಳಲು ಯಾರು ಮಾರ್ಗದರ್ಶನ ನೀಡುತ್ತಾರೋ ಅವರೇ ಉತ್ತಮ ಶಿಕ್ಷಕರು ಎಂದು ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ. ಮಾಧುಸ್ವಾಮಿ ಅಭಿಪ್ರಾಯಪಟ್ಟರು.

ಸಚಿವ ಜೆ.ಸಿ.ಮಾಧುಸ್ವಾಮಿ

ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘದ ವತಿಯಿಂದ ನಗರದ ಕನ್ನಡ ಭವನದಲ್ಲಿ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಶಿಕ್ಷಣ ಕ್ಷೇತ್ರದಲ್ಲಿ ವಿದ್ಯಾರ್ಥಿಗಳು ತಮ್ಮ ಹಳೆಯ ಶಿಕ್ಷಕರನ್ನು ಗುರುತಿಸಿ, ಮಾತನಾಡಿಸಿದರೆ ಅದೇ ಗೌರವವಿದ್ದಂತೆ. ಪದವಿಪೂರ್ವ ಶಿಕ್ಷಣ ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟವಾಗಿದ್ದು, ಶಾಲಾ ವ್ಯವಸ್ಥೆಯಿಂದ ಪದವಿ ಮಟ್ಟಕ್ಕೆ ವಿದ್ಯಾರ್ಥಿಗಳನ್ನು ಕೊಂಡೊಯ್ಯಲು ಶಾಲಾ ಹಂತದ ಮಕ್ಕಳನ್ನು ವಿದ್ಯಾರ್ಥಿನಿಲಯದ ಮಕ್ಕಳನ್ನಾಗಿ ಪರಿವರ್ತನೆ ಮಾಡುವ ಹಂತವೇ ಈ ಪದವಿಪೂರ್ವ ಶಿಕ್ಷಣ ಎಂದು ಹೇಳಿದರು.

ಶಿಕ್ಷಕರ ಸಮಸ್ಯೆಯನ್ನು ಬಗೆಹರಿಸಲು ತಜ್ಞರ ಸಮಿತಿ ರಚನೆ ಮಾಡಿ, ಶಿಕ್ಷಕರಿಗೆ ಯಾವುದೇ ತೊಂದರೆಯಾಗದಂತೆ ಶಿಕ್ಷಣದ ನೀತಿಗಳನ್ನು ರೂಪಿಸಲಾಗುವುದು. ಶಿಕ್ಷಕರ ಧ್ವನಿಯಾಗಿ ಕಾರ್ಯನಿರ್ವಹಿಸುವ ಮೂಲಕ ಕುಂದುಕೊರತೆಗಳನ್ನು ಬಗೆಹರಿಸಲು ಸ್ಪಂದಿಸುತ್ತೇನೆ. ಶಿಕ್ಷಕ ಕಣ್ಣಿಗೆ ಕಾಣುವ ದೇವರಿದ್ದಂತೆ ಎಂದು ವಿಧಾನಪರಿಷತ್ ಸದಸ್ಯ ಆರ್. ಚೌಡರೆಡ್ಡಿ ತೂಪಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.

Intro:ತುಮಕೂರು: ಬೋಧನೆ ಮಾಡುವವರೆಲ್ಲ ಒಳ್ಳೆಯ ಗುರುಗಳಾಗುವುದಿಲ್ಲ, ವಿದ್ಯಾರ್ಥಿಗಳಲ್ಲಿ ಅರಿವನ್ನು ಮೂಡಿಸುವವರು ಒಳ್ಳೆಯ ಗುರುಗಳಾಗುತ್ತಾರೆ ವಿದ್ಯಾರ್ಥಿಗಳಿಗೆ ಸ್ಪೂರ್ತಿ ನೀಡುವ ಮೂಲಕ ಅವರ ಜೀವನವನ್ನು ಅವರೇ ರೂಪಿಸಿಕೊಳ್ಳಲು ಯಾರು ಮಾರ್ಗದರ್ಶಕರಾಗುತ್ತಾರೋ ಅವರೇ ಉತ್ತಮ ಶಿಕ್ಷಕ ಎಂದು ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ ಮಾಧುಸ್ವಾಮಿ ಅಭಿಪ್ರಾಯಪಟ್ಟರು.

Body:ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘದ ವತಿಯಿಂದ ನಗರದ ಕನ್ನಡ ಭವನದಲ್ಲಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನಾಚರಣೆಯ ಅಂಗವಾಗಿ ಶಿಕ್ಷಕರ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ ಮಾಧುಸ್ವಾಮಿ, ನಮ್ಮನ್ನು ನಾವು ಗುರುತಿಸುವಂತಹ ಪರಿಸ್ಥಿತಿಯನ್ನು ಮೊದಲು ನಿರ್ಮಾಣ ಮಾಡಿಕೊಳ್ಳಬೇಕು, ಆನಂತರದಲ್ಲಿ ಗೌರವಿಸಿ ಕೊಳ್ಳುವಂತಹ ಕಾರ್ಯ ಆಗಬೇಕು. ಶಿಕ್ಷಣ ಕ್ಷೇತ್ರದಲ್ಲಿ ವಿದ್ಯಾರ್ಥಿಗಳು ತಮ್ಮ ಹಳೆಯ ಶಿಕ್ಷಕರನ್ನು ಗುರುತಿಸಿ ಮಾತನಾಡಿಸಿದರೆ ಅದೇ ಗೌರವವಿದ್ದಂತೆ, ಪದವಿಪೂರ್ವ ಶಿಕ್ಷಣ ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟ. ಶಾಲಾ ವ್ಯವಸ್ಥೆಯಿಂದ ಪದವಿ ಮಟ್ಟಕ್ಕೆ ವಿದ್ಯಾರ್ಥಿಗಳನ್ನು ಕೊಂಡೊಯ್ಯಲು ಶಾಲಾ ಹಂತದ ಮಕ್ಕಳನ್ನು ವಿದ್ಯಾರ್ಥಿನಿಲಯದ ಮಕ್ಕಳನ್ನಾಗಿ ಪರಿವರ್ತನೆ ಮಾಡುವ ಹಂತವೇ ಈ ಪದವಿಪೂರ್ವ ಶಿಕ್ಷಣ.
ವಿದ್ಯಾರ್ಥಿ ಜೀವನದಲ್ಲಿ ಉತ್ತಮ ಶಿಕ್ಷಣವನ್ನು ನೀಡುವ ಮೂಲಕ ಅವರ ಜೀವನದ ಮೊದಲ ಮೆಟ್ಟಿಲಾಗುವ ಮೂಲಕ ಅವರ ಜೀವನದಲ್ಲಿ ಒಳ್ಳೆಯ ಗುರುಗಳಾಗುತ್ತೀರಿ, ವಿದ್ಯಾರ್ಥಿಗಳಿಗೆ ಸ್ಪೂರ್ತಿ ನೀಡುವ ಮೂಲಕ ಅವರ ಜೀವನವನ್ನು ಅವರೇ ರೂಪಿಸಿಕೊಳ್ಳಲು ಯಾರು ಮಾರ್ಗದರ್ಶಕರಗುವರೋ ಅವರೇ ಉತ್ತಮ ಶಿಕ್ಷಕ. ಬೋಧನೆ ಮಾಡುವವರೆಲ್ಲ ಒಳ್ಳೆಯ ಗುರುಗಳಾಗುವುದಿಲ್ಲ. ವಿದ್ಯಾರ್ಥಿಗಳಲ್ಲಿ ಜೀವನದ ಅರಿವನ್ನು ಮೂಡಿಸುವವರು ಒಳ್ಳೆಯ ಗುರುಗಳಾಗುತ್ತಾರೆ, ಗುರುವಿನ ಸ್ಥಾನ ಉದಾರವಾಗಿ, ಪುಕ್ಕಟೆಯಾಗಿ ದೊರೆಯುವುದಿಲ್ಲ ಎಂದರು.
ಬೈಟ್: ಜೆ.ಸಿ ಮಾಧುಸ್ವಾಮಿ, ಕಾನೂನು ಮತ್ತು ಸಂಸದೀಯ ಸಚಿವ
ಶಿಕ್ಷಕರ ಸಮಸ್ಯೆಯನ್ನು ಬಗೆಹರಿಸಲು ತಜ್ಞರ ಸಮಿತಿಯನ್ನು ರಚನೆ ಮಾಡಿ, ಶಿಕ್ಷಕರಿಗೆ ಯಾವುದೇ ತೊಂದರೆಯಾಗದಂತೆ ಶಿಕ್ಷಣದ ನೀತಿಗಳನ್ನು ರೂಪಿಸಲಾಗುವುದು, ಶಿಕ್ಷಕರ ಧ್ವನಿಯಾಗಿ ಕಾರ್ಯನಿರ್ವಹಿಸುವ ಮೂಲಕ ಕುಂದುಕೊರತೆಗಳನ್ನು ಬಗೆಹರಿಸಲು ಸ್ಪಂದಿಸುತ್ತೇನೆ, ಶಿಕ್ಷಕ ಕಣ್ಣಿಗೆ ಕಾಣುವ ದೇವರಿದ್ದಂತೆ ಎಂದು ವಿಧಾನಪರಿಷತ್ ಸದಸ್ಯ ಆರ್. ಚೌಡರೆಡ್ಡಿ ತೂಪಲ್ಲಿ ತಿಳಿಸಿದರು.
ಬೈಟ್: ಆರ್. ಚೌಡರೆಡ್ಡಿ ತೂಪಲ್ಲಿ, ವಿಧಾನಪರಿಷತ್ ಸದಸ್ಯ

Conclusion:ವರದಿ
ಸುಧಾಕರ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.