ತುಮಕೂರು : ಲಾಕ್ ಡೌನ್ ಅಂತ್ಯಗೊಂಡಿರುವ ಹಿನ್ನೆಲೆ ಇಂದು ಬೆಳಗ್ಗೆಯಿಂದ ಜಿಲ್ಲೆಯಲ್ಲಿ ಕೆಎಸ್ಆರ್ಟಿಸಿ ಮತ್ತು ಖಾಸಗಿ ಬಸ್ಗಳ ಸಂಚಾರ ಪುನರಾರಂಭವಾಗಿದೆ. ತುಮಕೂರು ಕೆಎಸ್ಆರ್ಟಿಸಿ ಡಿಪೋದಿಂದ 50 ಬಸ್ಗಳು ಸಂಚಾರ ನಡೆಸುತ್ತಿವೆ. ಬೆಂಗಳೂರು-ತುಮಕೂರು ನಡುವೆ ಬೆಳಗ್ಗೆ 6 ಗಂಟೆಯಿಂದಲೇ ಬಸ್ ಸಂಚಾರ ಆರಂಭವಾಗಿದೆ.
ಮೊದಲ ದಿನವೇ ನಿರೀಕ್ಷಿತ ಸಂಖ್ಯೆಯಲ್ಲಿ ಪ್ರಯಾಣಿಕರು ಬಸ್ಗಳಲ್ಲಿ ಸಂಚರಿಸುತ್ತಿದ್ದಾರೆ. ಶೇ 50 ರಷ್ಟು ಪ್ರಯಾಣಿಕರ ಸಂಚಾರಕ್ಕೆ ಮಾತ್ರ ಅವಕಾಶವಿರುವುದರಿಂದ ಬೆಂಗಳೂರಿನ ಕಡೆಗೆ ಸಂಚರಿಸುತ್ತಿರುವ ಬಸ್ಗಳಲ್ಲಿ ಕೇವಲ 20 ಮಂದಿಯನ್ನು ಮಾತ್ರ ಹತ್ತಿಸಿಕೊಳ್ಳಲಾಗ್ತಿದೆ.
ಕೆಲ ಬಸ್ಗಳಲ್ಲಿ ಮಾತ್ರ ಬೆರಳೆಣಿಕೆಯ ಪ್ರಯಾಣಿಕರು ಸಂಚರಿಸುತ್ತಿರುವುದು ಕಂಡು ಬಂತು. ಖಾಸಗಿ ಬಸ್ಗಳಲ್ಲಿಯೂ ಪ್ರಯಾಣಿಕರ ಸಂಖ್ಯೆ ಕಡಿಮೆಯಿತ್ತು.
ಮೊದಲ ದಿನ 150 ಬಸ್ಗಳನ್ನು ಬಿಡಲು ತುಮಕೂರು ಕೆಎಸ್ಆರ್ಟಿಸಿ ವಿಭಾಗ ಸಿದ್ದತೆ ಮಾಡಿಕೊಂಡಿದೆ. ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಿಂದಲೂ ತಲಾ ಐದು ಬಸ್ಗಳು ಬೆಂಗಳೂರಿನ ಕಡೆಗೆ ಸಂಚರಿಸಲಿವೆ.