ETV Bharat / state

'ಸಿದ್ದರಾಮಯ್ಯ ಇದ್ದಾಗ ಸಿಎಂ ಬದಲಾವಣೆ ಕೂಗಿತ್ತು, ಎಸ್.ಎಂ.ಕೃಷ್ಣ ಇದ್ದಾಗ ವಿಪಕ್ಷದವ್ರೂ ಸಹ ಚಕಾರವೆತ್ತಲಿಲ್ಲ' - ವಿಪಕ್ಷ ನಾಯಕ ಸಿದ್ದರಾಮಯ್ಯ

ಸಿಎಂ ಬಿ.ಎಸ್. ಯಡಿಯೂರಪ್ಪ ಸ್ವಂತ ಕ್ವಾಲಿಟಿ ಹೊಂದಿದ್ದಾರೆ. ಅವರು ಪಕ್ಷದಲ್ಲಿ ಹಿಡಿತ ಸಾಧಿಸಿದ್ದಾರೆ. ಜೊತೆಗೆ ಪ್ರಬಲ ಸಮುದಾಯವನ್ನು ಪ್ರತಿನಿಧಿಸುತ್ತಿದ್ದಾರೆ. ಆದ್ರೆ, ಸಿದ್ದರಾಮಯ್ಯ ಅವರು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಹಾಗಾಗಿ ಯಡಿಯೂರಪ್ಪರ ಬಗ್ಗೆ ಏಕವಚನದಲ್ಲಿ ಮಾತನಾಡುತ್ತಾರೆ ಎಂದು ಸಂಸದ ಜಿ.ಎಸ್.ಬಸವರಾಜ್ ಟೀಕಿಸಿದ್ದಾರೆ.

g s basavaraj
ಸಂಸದ ಜಿ.ಎಸ್. ಬಸವರಾಜ್
author img

By

Published : Jul 8, 2021, 3:02 PM IST

ತುಮಕೂರು: ವಿಪಕ್ಷ ನಾಯಕ ಸಿದ್ದರಾಮಯ್ಯ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಹಾಗಾಗಿ ಸಿಎಂ ಯಡಿಯೂರಪ್ಪನವರ ಬಗ್ಗೆ ಏಕವಚನದಲ್ಲಿ ಮಾತನಾಡುತ್ತಾರೆ ಎಂದು ಸಂಸದ ಜಿ.ಎಸ್.ಬಸವರಾಜ್ ವಾಗ್ದಾಳಿ ಮಾಡಿದರು.

ತುಮಕೂರು ಸಂಸದ ಜಿ.ಎಸ್. ಬಸವರಾಜ್

ಸಿದ್ದರಾಮಯ್ಯ ಸೋನಿಯಾ ಗಾಂಧಿ ಮುಂದೆ ಹೋಗಿ ರೋಪ್ ಹಾಕ್ತಾರಾ?, ಸೋನಿಯಾ ಗಾಂಧಿಗೆ ಕೈ ಮುಗೀತಾರೆ‌ಯೇ ಹೊರತು ಏನೂ ಮಾಡಲ್ಲ. ಹಾಗೆಯೇ ಯಡಿಯೂರಪ್ಪ ಹೋಗಿ ಮೋದಿ ಅವರನ್ನು ಬೈಯೋಕಾಗುತ್ತಾ ಎಂದು ಪ್ರಶ್ನಿಸಿದರು. ಬಿ.ಎಸ್.ಯಡಿಯೂರಪ್ಪ ಸ್ವಂತ ಕ್ವಾಲಿಟಿ ಹೊಂದಿದ್ದಾರೆ. ಪಕ್ಷದಲ್ಲಿ ಹಿಡಿತ ಹೊಂದಿರುವ ಅವರು ಪ್ರಬಲ ಸಮುದಾಯವನ್ನು ಪ್ರತಿನಿಧಿಸುತ್ತಿದ್ದಾರೆ ಎಂದರು.

'ಸಿದ್ದರಾಮಯ್ಯ ಆಡಳಿತಾವಧಿಯಲ್ಲಿಯೂ ಸಿಎಂ ಬದಲಾವಣೆ ಕೂಗಿತ್ತು'

ಯಡಿಯೂರಪ್ಪರನ್ನು ಬಿಟ್ಟರೆ ಪರ್ಯಾಯ ನಾಯಕರು ಬಿಜೆಪಿಯಲ್ಲಿಲ್ಲ. ಸಿದ್ದರಾಮಯ್ಯ ಸಿಎಂ ಆದಾಗಲೂ ಬದಲಾವಣೆ ಕೂಗು ಕೇಳಿ ಬಂದಿತ್ತು. ಸಿದ್ದರಾಮಯ್ಯರನ್ನು ಬದಲಿಸಿ ದಲಿತ ಸಿಎಂ ಮಾಡಬೇಕು ಎಂಬ ಆಗ್ರಹವಿತ್ತು ಎಂದು ಅವರು ನೆನಪಿಸಿದರು.

ಎಸ್.ಎಂ ಕೃಷ್ಣ ಸಿಎಂ ಆದಾಗ ಮಾತ್ರ ಯಾರೂ ಸಿಎಂ ಬದಲಾವಣೆ ಮಾಡಬೇಕು ಅಂದಿರಲಿಲ್ಲ. ಸ್ವತಃ ವಿರೋಧ ಪಕ್ಷದವರೂ ಸಹ ಚಕಾರ ಎತ್ತಿರಲಿಲ್ಲ ಎಂದರು.

ಹೈಕಮಾಂಡರ್ ಒಪ್ಪಿದ್ರೆ ಡಿಕೆಶಿನೂ ಸಿಎಂ ಆಗಬಹುದು. ಆದರೆ ಜಿ.ಪರಮೇಶ್ವರ ಕೇವಲ ಡಿಸಿಎಂ ಆದಾಗಲೇ ಝಿರೋ ಟ್ರಾಫಿಕ್ ಮಾಡಿಕೊಂಡು ಓಡಾಡುತ್ತಿದ್ದರು. ಸಿಎಂ ಆಗಿಬಿಟ್ಟರಂತೂ ಇಡೀ ತುಮಕೂರು ಜಿಲ್ಲೆಯನ್ನೇ‌ ಝಿರೋ ಮಾಡಿಬಿಡ್ತಾರೆ ಎಂದು ವ್ಯಂಗ್ಯವಾಡಿದರು.

'ಸುಮಲತಾ ಹೈಲಿ ಡಿಗ್ನಿಫೈಡ್ ಮಹಿಳಾ ಸಂಸದೆ'

ಸುಮಲತಾ ಒಬ್ಬ ಹೈಲಿ ಡಿಗ್ನಿಫೈಡ್ ಸಂಸದೆ. ಅವರು ಸಂಸತ್ತಿನಲ್ಲಿ ಮಾತನಾಡುವ ಗಾಂಭೀರ್ಯತೆ ನೋಡಿದರೆ ನಾವು ಹೆಮ್ಮೆ ಪಡಬೇಕು. ಆದರೆ ಕುಮಾರಸ್ವಾಮಿ ಆ ಹೆಣ್ಣುಮಗಳ ಬಗ್ಗೆ ಹಾಗೆ ಹೇಳಬಾರದಿತ್ತು ಎಂದರು.

'ಪ್ರಜ್ವಲ್ ರೇವಣ್ಣಗೆ ಉತ್ತಮ ರಾಜಕೀಯ ಭವಿಷ್ಯವಿದೆ'

ಸಂಸದ ಪ್ರಜ್ವಲ್ ರೇವಣ್ಣರನ್ನು ಸುಮಲತಾ ಮಾತ್ರ ಹೊಗಳಲಿಲ್ಲ, ನಾನೂ ಹೊಗಳಿದ್ದೇನೆ. ಆತ ಸಂಸತ್ತಿನಲ್ಲಿ ಮಾತಾಡಿದ್ದನ್ನು ನೋಡಿ ನಾನು ಬೆನ್ನು ತಟ್ಟಿ ಬಂದಿದ್ದೇನೆ. ಇದನ್ನೇ ಮುಂದುವರಿಸು ಎಂದಿದ್ದೆ. ಪ್ರಜ್ವಲ್​ಗೆ ಉತ್ತಮ ರಾಜಕೀಯ ಭವಿಷ್ಯ ಇದೆ ಎಂದು ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.