ತುಮಕೂರು : ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ನಡೆಸದೇ ಜುಲೈ ಎರಡನೇ ವಾರದಲ್ಲಿ ಫಲಿತಾಂಶ ಪ್ರಕಟಿಸುವುದಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಆದೇಶಕ್ಕೆ ಮಾಜಿ ಡಿಸಿಎಂ ಜಿ ಪರಮೇಶ್ವರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಯಾವುದೇ ರೂಪದಲ್ಲಾದ್ರೂ ಸರಿ, ಪರೀಕ್ಷೆ ಮಾತ್ರ ಆಗಲೇಬೇಕು ಎಂದು ಒತ್ತಾಯಿಸಿದ್ದಾರೆ.
ಜಿಲ್ಲೆಯ ಕುಣಿಗಲ್ ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆನ್ ಲೈನ್ ನಲ್ಲಿ ಅಥವಾ ಆಫ್ ಲೈನ್ ನಲ್ಲಾದ್ರೂ ಸರಿಯೇ ಪರೀಕ್ಷೆ ಆಗಲೇಬೇಕು. ಆನ್ ಲೈನ್ ನಲ್ಲಿ ಮಾಡುವುದು ಕಷ್ಟ. ಗ್ರಾಮೀಣ ಪ್ರದೇಶದಲ್ಲಿ ಇಂಟರ್ನೆಟ್ ಸೌಲಭ್ಯವಿರುವುದಿಲ್ಲ, ಮಕ್ಕಳಿಗೆ ಟ್ಯಾಬ್, ಕಂಪ್ಯೂಟರ್ ಅನುಕೂಲ ಇರಲ್ಲ. ಎಕ್ಸಾಂ ಮಾಡುವುದು ಬಹಳ ಸೂಕ್ತ ಎಂದರು.
ಮುಂಜಾಗ್ರತ ಕ್ರಮ ತೆಗೆದುಕೊಂಡು, ಆರೋಗ್ಯದ ದೃಷ್ಟಿಯಿಂದ ಏನೆಲ್ಲಾ ಕ್ರಮ ಕೈಗೊಳ್ಳಬೇಕುವೆಂಬುದನ್ನು ಗಮನಹರಿಸಬೇಕಿದೆ. ಪಿಯುಸಿ ಟರ್ನಿಂಗ್ ಪಾಯಿಂಟ್, ಪ್ರೊಪೇಷನಲ್, ಜನರಲ್ ಕೋರ್ಸ್ ಓದಲು ಪಿಯುಸಿ ನಿರ್ಣಾಯಕ. ಮಕ್ಕಳ ಭವಿಷ್ಯದ ದೃಷ್ಟಿಯಿಂದ ದ್ವಿತೀಯ ಪಿಯುಸಿ ತುಂಬಾ ಮಹತ್ವದ್ದು ಎಂದು ಅವರು ಹೇಳಿದರು.
ಎಸ್.ಎಸ್.ಎಲ್.ಸಿ ಎಕ್ಸಾಂ ಮುಗಿದ ಬಳಿಕ ಪಿಯುಸಿ ಪರೀಕ್ಷೆ ಮಾಡಬೇಕು, ಪರೀಕ್ಷೆ ರದ್ದು ಮಾಡಿದ ತಕ್ಷಣ ಮುಗಿದು ಹೋಗಲ್ಲ, ಆದೇಶ ವಾಪಸ್ ತೆಗೆದುಕೊಳ್ಳಬಹುದು. ಪಿಯುಸಿ ಪರೀಕ್ಷೆ ವಿಚಾರದಲ್ಲಿ ದೇಶದಲ್ಲಿ ಪ್ರಧಾನಿಯಿಂದ ಹಿಡಿದು ಎಲ್ಲರದ್ದೂ ಒಂದೇ ನಿರ್ಧಾರವಾಗಿರುವುದು ಸರಿಯಲ್ಲ ಎಂದರು.
ಇದನ್ನೂ ಓದಿ : ನನ್ನೊಂದಿಗೆ ಚರ್ಚಿಸಿಯೇ ಎಸ್ಎಸ್ಎಲ್ಸಿ ಪರೀಕ್ಷಾ ದಿನಾಂಕ ಪ್ರಕಟ: ಸಿಎಂ ಸ್ಪಷ್ಟನೆ