ತುಮಕೂರು: ಪೊಲೀಸ್ ಠಾಣೆ ಆವರಣದಲ್ಲೇ ಮದ್ಯಪಾನ ಮಾಡಿ ಜೂಜಾಟ ಆಡಿ ಪರಸ್ಪರ ಕಿತ್ತಾಡಿಕೊಂಡಿದ್ದ ಆರೋಪದ ಮೇಲೆ ನಾಲ್ವರು ಪೊಲೀಸ್ ಸಿಬ್ಬಂದಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಾನತುಗೊಳಿಸಿದ್ದಾರೆ.
ಇವರೆಲ್ಲರೂ ಜಿಲ್ಲೆಯ ಹೆಬ್ಬೂರು ಪೊಲೀಸ್ ಠಾಣೆಯ ಸಿಬ್ಬಂದಿ. ರಾಮಚಂದ್ರಪ್ಪ, ಮಹೇಶ್, ಚಲುವರಾಜು, ಸಂತೋಷ್ ಅಮಾನತುಗೊಂಡವರು.
ಈ ಕಾನ್ಸ್ಟೆಬಲ್ಗಳು ಕಿತ್ತಾಡಿಕೊಂಡ ಬಗ್ಗೆ ಎಸ್ಪಿ ಗಮನಕ್ಕೆ ಪೊಲೀಸ್ ಅಧಿಕಾರಿಗಳು ತಂದಿದ್ದರು. ಪೊಲೀಸ್ ಅಧಿಕಾರಿಗಳು ನೀಡಿದ್ದ ವರದಿಯನ್ನು ಆಧರಿಸಿ ಎಸ್ಪಿ ವಂಶಿಕೃಷ್ಣ ಅವರು ಈ ನಾಲ್ವರನ್ನ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.