ತುಮಕೂರು: ಮಾಜಿ ಉಪಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್ ಅವರಿಗೆ ಕೊರೊನಾ ಸೋಂಕು ತಗುಲಿದ್ದು, ಹೋಂ ಐಸೋಲೇಶನ್ ಆಗಿದ್ದಾರೆ.
ಓದಿ: ಶಕ್ತಿಧಾಮದ ಮಕ್ಕಳ ಜತೆ 73ನೇ ಗಣರಾಜ್ಯೋತ್ಸವ.. ಡ್ರೈವ್ ಮಾಡಿ ಮಕ್ಕಳ ಆಸೆ ಪೂರೈಸಿದ ಸಿಂಪ್ಲಿಸಿಟಿ ಶಿವಣ್ಣ..
ಡಾ. ಜಿ. ಪರಮೇಶ್ವರ್ ಕಳೆದ ಎರಡು ದಿನಗಳಿಂದ ಸ್ವಲ್ಪಮಟ್ಟಿನ ಆಯಾಸ, ತಲೆಬಾರ, ಜ್ವರ ಕಂಡು ಬಂದಿತ್ತಂತೆ. ಈ ಹಿನ್ನೆಲೆ ಅವರ ಸಿದ್ದಾರ್ಥ ಆಸ್ಪತ್ರೆಯಲ್ಲಿ ಕೊರೊನಾ ಟೆಸ್ಟ್ ಮಾಡಿಸಿದ್ದರು. ಈಗ ವರದಿ ಬಂದಿದ್ದು, ಅವರಿಗೆ ಕೊರೊನಾ ಸೋಂಕು ತಗುಲಿದ್ದು ದೃಢಪಟ್ಟಿದೆ.
ಓದಿ: Republic Day: ಗಣರಾಜ್ಯೋತ್ಸವ ಪರೇಡ್ನಲ್ಲಿ ಗಮನಸೆಳೆದ ಕರ್ನಾಟಕದ ಸ್ತಬ್ಧಚಿತ್ರ
ಇಂದು ಗಣರಾಜ್ಯೋತ್ಸವ ಇರುವ ಕಾರಣ ಸ್ವಕ್ಷೇತ್ರ ಕೊರಟಗೆರೆಯಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಗೈರು ಹಾಜರಾಗಿದ್ದರು. ಅವರು 7 ದಿನಗಳ ಕಾಲ ತುಮಕೂರಿನ ಹೆಗ್ಗೆರೆ ಮನೆಯಲ್ಲೇ ಚಿಕಿತ್ಸೆ ಪಡೆಯಲಿದ್ದಾರೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ