ತುಮಕೂರು: ದೇವರ ಪ್ರಸಾದ ಸೇವಿಸಿ 18 ಕ್ಕೂ ಹೆಚ್ಚು ಭಕ್ತರು ಅಸ್ವಸ್ಥರಾಗಿರುವ ಘಟನೆ ಶಿರಾ ತಾಲೂಕಿನ ಚಿನ್ನಪ್ಪನಹಳ್ಳಿಯಲ್ಲಿ ನಡೆದಿದೆ.
ಶನಿವಾರ ಆಂಜನೇಯ ಸ್ವಾಮಿ ಹರಿಸೇವೆ ಕಾರ್ಯಕ್ರಮವಿತ್ತು. ಕಾರ್ಯಕ್ರಮದ ನಂತರ ಅನ್ನ-ಸಾರು, ಪಲ್ಯ ವಿತರಣೆ ಮಾಡಲಾಗಿತ್ತು. ಈ ಪ್ರಸಾದ ಸೇವಿಸಿದ್ದ ಗ್ರಾಮಸ್ಥರು ಇಂದು ಬೆಳಗ್ಗೆಯಿಂದಲೇ ಅಸ್ವಸ್ಥರಾಗಿದ್ದಾರೆ.
ತೀವ್ರ ಸುಸ್ತಾಗಿದ್ದ 18ಕ್ಕೂ ಹೆಚ್ಚು ಜನರನ್ನು ಶಿರಾ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಳ್ಳಂಬೆಳ್ಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.