ತುಮಕೂರು: ಜಿಲ್ಲಾಡಳಿತದ ಸಹಯೋಗದೊಂದಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕೆಎಸ್ಆರ್ಟಿಸಿ ವತಿಯಿಂದ ನಿರ್ಮಿಸಲಾಗಿರುವ ಕೋವಿಡ್-19 ಮೊಬೈಲ್ ಫೀವರ್ ಕ್ಲಿನಿಕ್ಗೆ ಶಾಸಕ ಜ್ಯೋತಿ ಗಣೇಶ್ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕೆಎಸ್ಆರ್ಟಿಸಿ ಬಸ್ಅನ್ನು ಕೊರೊನಾ ಪರೀಕ್ಷೆಗೆ ಬೇಕಾದ ರೀತಿಯಲ್ಲಿ ಸುಸಜ್ಜಿತವಾಗಿ ಮಾರ್ಪಾಡು ಮಾಡಲಾಗಿದೆ. ಕೊರೊನಾ ಶಂಕಿತರನ್ನು ಜಿಲ್ಲಾಸ್ಪತ್ರೆಯಲ್ಲಿ ಮಾತ್ರ ಇಲ್ಲಿಯವರೆಗೂ ಪರೀಕ್ಷೆ ಮಾಡುವ ಅವಕಾಶವಿತ್ತು. ಆದರೆ ಈಗ ಮೊಬೈಲ್ ಫೀವರ್ ಕ್ಲಿನಿಕ್ ಬಸ್ ಇರುವುದರಿಂದ ಅವಶ್ಯಕತೆ ಹೆಚ್ಚು ಇರುವ ಕಡೆ ಹೋಗಿ ಕೊರೊನಾ ಶಂಕಿತರನ್ನು ಪರೀಕ್ಷೆ ಮಾಡಲಿದೆ ಎಂದು ತಿಳಿಸಿದರು.