ತುಮಕೂರು: ಉಪ ಚುನಾವಣೆಯಲ್ಲಿ ಗೆದ್ದು ಬಂದಿರು ಬಿಜೆಪಿ ಶಾಸಕರು ಮಂತ್ರಿಯಾಗಿ ಅಧಿಕಾರ ಸ್ವೀಕರಿಸಲೇಬೇಕು. ಇಲ್ಲದಿದ್ದರೆ ಅವರು ಉಳಿಯುವುದೇ ಇಲ್ಲ, ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು ಮಾಜಿ ಸಚಿವ ಎಸ್.ಆರ್.ಶ್ರೀನಿವಾಸ್ ಹೇಳಿದ್ದಾರೆ.
ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವರಾಗಬೇಕು ಎಂಬ ಉದ್ದೇಶದಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಪಕ್ಷವನ್ನು ಬಿಟ್ಟು ಹೊರ ಬಂದಿದ್ದಾರೆ. ಸಚಿವರಾಗಬೇಕು ಎಂಬ ಕಾತರ ಅವರಲ್ಲಿದೆ. ಸಚಿವರಾಗದಿದ್ದರೆ ಅವರು ಉಳಿದುಕೊಳ್ಳುವುದು ಕಷ್ಟವಿದೆ ಎಂದರು.
ಸಚಿವರಾಗಲೇಬೇಕು ಎಂಬ ಉದ್ದೇಶದಿಂದಲೇ ಪಕ್ಷ ಬಿಟ್ಟು ಹೋಗಿದ್ದಾರೆ. ಬಿಜೆಪಿ ಪಕ್ಷದಲ್ಲಿಯೂ ಅದರದೇ ಆದ ಹೈಕಮಾಂಡ್ ಇದೆ. ಅಲ್ಲಿಯೂ ಐದರಿಂದ ಆರು ಸಲ ಗೆದ್ದಂತಹ ಶಾಸಕರಿದ್ದಾರೆ. ಯಡಿಯೂರಪ್ಪನವರು ಕೊಟ್ಟಂತ ಭರವಸೆ ಈಡೇರಿಸಬೇಕಾಗಿದೆ ಎಂದು ಹೇಳಿದರು.