ತುಮಕೂರು : ಹಿಜಾಬ್ ವಿಚಾರದಲ್ಲಿ ಹೈಕೋರ್ಟ್ ಸುದೀರ್ಘವಾದ ಚರ್ಚೆ, ವಾದ-ವಿವಾದಗಳನ್ನು ಆಲಿಸಿ, ಎಲ್ಲವನ್ನೂ ಕೂಲಂಕಷವಾಗಿ ಅಧ್ಯಯನ ಮಾಡಿ ತೀರ್ಪು ಪ್ರಕಟ ಮಾಡಿದೆ ಎಂದು ತುಮಕೂರಿನ ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ತಿಳಿಸಿದ್ದಾರೆ.
ಸರ್ಕಾರ ಏನು ಆದೇಶ ಹೊರಡಿಸುತ್ತೋ, ಆ ಕಾನೂನನ್ನ ಪಾಲನೆ ಮಾಡಬೇಕು. ಸಮವಸ್ತ್ರವನ್ನು ಕಡ್ಡಾಯವಾಗಿ ಎಲ್ಲರೂ ಕೂಡ ಧರಿಸಿಕೊಳ್ಳಬೇಕು. ಅದು ಬಿಟ್ಟು ಬೇರೆ ಯಾವುದಕ್ಕೂ ಅವಕಾಶ ಇಲ್ಲ ಎಂದು ಕೋರ್ಟ್ ತೀರ್ಪು ನೀಡಿದೆ. ಪ್ರತಿಯೊಬ್ಬರು ಅದನ್ನು ಪಾಲನೆ ಮಾಡಬೇಕು ಎಂದರು.
ಇದನ್ನೂ ಓದಿ: ಹಿಜಾಬ್ ತೀರ್ಪು : ಪರೀಕ್ಷೆ ಧಿಕ್ಕರಿಸಿ ಮನೆಯತ್ತ ಸಾಗಿದ ಮುಸ್ಲಿಂ ವಿದ್ಯಾರ್ಥಿನಿಯರು
ನ್ಯಾಯಾಲಯದ ತೀರ್ಪು ಏನು ಬರುತ್ತೋ, ಅದನ್ನು ಯಾರೇ ಆಗಿರಲಿ ಪಾಲನೆ ಮಾಡಬೇಕಿರುವುದು ಪ್ರತಿಯೊಬ್ಬರ ಕರ್ತವ್ಯ. ಇಂದು ತ್ರಿಸದಸ್ಯ ಪೀಠ ಈ ಆದೇಶ ಮಾಡಿದೆ. ಎಲ್ಲರೂ ಇದನ್ನು ಪಾಲಿಸೋಣ.
ಮಕ್ಕಳ ಕಲಿಕೆ ಎಂದೂ ಹಿಂದುಳಿಯಬಾರದು. ಎಲ್ಲರೂ ಕೂಡ ಪ್ರೀತಿ,ವಿಶ್ವಾಸ ಸಮಾನ ಭಾವದಿಂದ ಬದುಕಬೇಕಾಗಿದೆ. ಇಂದಿನ ತೀರ್ಪು ಎಲ್ಲರೂ ಕೂಡ ಪಾಲನೆ ಮಾಡಿ. ಈ ಮೂಲಕ ಉತ್ತಮ ವಾತಾವರಣ ನಿರ್ಮಾಣವಾಗಲಿ ಎಂದು ಹೇಳಿದರು.