ETV Bharat / state

ಅಂತರ್ಜಲ ಕುಸಿತದಿಂದ ಕುಡಿಯುವ ನೀರಿನ ಸಮಸ್ಯೆ: ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ - tumkur Drinking water problem news

ರಾಜ್ಯದ 41 ತಾಲೂಕುಗಳಲ್ಲಿ ಅಂತರ್ಜಲ ಮಟ್ಟ ಕ್ಷೀಣಿಸುತ್ತಿದೆ. ಅಂತರ್ಜಲ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಅನೇಕ ಕಾರ್ಯಕ್ರಮಗಳನ್ನು ರೂಪಿಸಿದೆ. ಅವುಗಳ ನಿರ್ವಹಣೆಗೆ ಎಲ್ಲರೂ ಬದ್ಧರಾಗಬೇಕು. ಅಂತರ್ಜಲ ಕುಸಿತದಿಂದಲೇ ಕುಡಿಯುವ ನೀರಿನ ಸಮಸ್ಯೆಯಾಗುತ್ತಿರುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದ್ದಾರೆ.

J.C. Madhuswamy
ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ
author img

By

Published : Apr 2, 2021, 1:43 PM IST

ತುಮಕೂರು: ಅಂತರ್ಜಲ ಮಟ್ಟ ಕುಸಿತದಿಂದ ಕುಡಿಯುವ ನೀರಿನ ಸಮಸ್ಯೆ ಉಂಟಾಗುತ್ತಿರುವ ಹಿನ್ನೆಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜನರಿಗೆ ನೀರಿನ ಸದ್ಭಳಕೆಗೆ ಬಗ್ಗೆ ಅರಿವು ಮೂಡಿಸಲು, ಅನೇಕ ಕಾರ್ಯಕ್ರಮಗಳನ್ನು ರೂಪಿಸಬೇಕೆಂದು ಸಣ್ಣ ನೀರಾವರಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ಸೂಚಿಸಿದ್ದಾರೆ.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಕೇಂದ್ರ ಸರ್ಕಾರದ ಜಲಶಕ್ತಿ ಮಂತ್ರಾಲಯ, ಜಲ ಸಂಪನ್ಮೂಲ, ನದಿ ಅಭಿವೃದ್ಧಿ ಮತ್ತು ಗಂಗಾ ಪುನಶ್ಚೇತನ ಇಲಾಖೆ, ಕೇಂದ್ರೀಯ ಅಂತರ್ಜಲ ಮಂಡಳಿ, ಜಿಲ್ಲಾ ಪಂಚಾಯತ್ ಇವರ ಸಹಯೋಗದೊಂದಿಗೆ ನಡೆದ ಭಾರತದ 75ನೇ ವರ್ಷದ ಸ್ವಾತಂತ್ರೋತ್ಸವ ವರ್ಷಾಚರಣೆಯ ನೆನಪಿಗಾಗಿ ಜಿಲ್ಲಾ ಮಟ್ಟದ ಜಲಧರಗಳ ನಕಾಶೆ ಮತ್ತು ಅಂತರ್ಜಲ ನಿರ್ವಹಣೆ ಬಗ್ಗೆ ಏರ್ಪಡಿಸಿದ್ದ ಸಂವಹನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಓದಿ:ಹೈನುಗಾರಿಕೆಯಲ್ಲಿ ತೊಡಗಿದ ಜಿಲ್ಲೆಯ ರೈತಾಪಿ ವರ್ಗ: ಹೆಚ್ಚಾದ ಹಾಲು ಉತ್ಪಾದನಾ ಪ್ರಮಾಣ

ರಾಜ್ಯದ 41 ತಾಲೂಕುಗಳಲ್ಲಿ ಅಂತರ್ಜಲ ಮಟ್ಟ ಕ್ಷೀಣಿಸುತ್ತಿದೆ. ಅಂತರ್ಜಲ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಅನೇಕ ಕಾರ್ಯಕ್ರಮಗಳನ್ನು ರೂಪಿಸಿದೆ. ಅವುಗಳ ನಿರ್ವಹಣೆಗೆ ಎಲ್ಲರೂ ಬದ್ಧರಾಗಬೇಕು ಎಂದರು. ಪ್ರಧಾನಿ ಮೋದಿಯವರು ಈ ವರ್ಷ 75ನೇ ವರ್ಷದ ಸ್ವಾತಂತ್ರೋತ್ಸವ ನಿಮಿತ್ತ ಎಲ್ಲಾ ಭಾಗದಲ್ಲಿ ಅಂತರ್ಜಲದ ಉಳಿವಿಗಾಗಿ ಎಲ್ಲಾ ಇಲಾಖೆಗಳನ್ನು ಸಂಯೋಜನೆಗೊಳಿಸಿ ಈ ಕಾರ್ಯಕ್ರಮ ರೂಪಿಸಿದ್ದಾರೆ. ಕೇಂದ್ರ ಹಾಗೂ ರಾಜ್ಯ ಅಂತರ್ಜಲ ಮಂಡಳಿ, ಅಟಲ್ ಭೂ ಜಲ ಪ್ರಾಧಿಕಾರದ ಈ ಕಾರ್ಯಕ್ರಮವನ್ನು ನಾನು ಹರ್ಷದಿಂದ ಉದ್ಘಾಟಿಸುತ್ತಿದ್ದೇನೆ. ಅಂತರ್ಜಲ ಅಭಿವೃದ್ಧಿ ಇಲಾಖೆಯು ಭೂಮಿಯ ಮೇಲಿನ ನೀರು ಉಳಿಸುವುದು, ಬಳಸುವುದು, ಹರಿಯುವ ನೀರನ್ನು ತಡೆದು ನಿಲ್ಲಿಸುವ ಕೆಲಸವನ್ನು ಮಾಡುತ್ತಾ ಬಂದಿದೆ. ಭೂಮಿಯ ಮೇಲೆ ಮುಕ್ಕಾಲು ಪಟ್ಟು ಅನುಪಯುಕ್ತ ನೀರು ಇದೆ. ಶೇ.2 ರಿಂದ 3 ರಷ್ಟು ನೀರು ನಮಗೆ ಲಭ್ಯವಿದೆ. 1962-63 ರಿಂದಲೂ ಅಂತರ್ಜಲದ ಬಗ್ಗೆ ಕಾಳಜಿ ವಹಿಸಿ ನೀರಿನ ಮೂಲಗಳನ್ನು ರಕ್ಷಿಸುವ ಕೆಲಸವಾಗುತ್ತಿದೆ ಎಂದು ಅವರು ತಿಳಿಸಿದರು.

ಗಂಗರ ಆಳ್ವಿಕೆಯಲ್ಲೆ ಕೆರೆಗಳನ್ನು ಕಟ್ಟಿದ್ದಾರೆ. ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಭೂಮಿ ಮೇಲಿನ ನೀರು ಬೇರೆಡೆಗೆ ಹರಿದು ಹೋಗದಂತೆ ಕೆರೆ, ಕಟ್ಟೆ, ಅಣೆಕಟ್ಟುಗಳನ್ನ ಕಟ್ಟಿ ನೀರನ್ನು ಭದ್ರಪಡಿಸಿದರು. ಹಾಗೆಯೇ ಮಾರ್ಕೋನಹಳ್ಳಿ ಡ್ಯಾಂ, ವಾಣಿ ವಿಲಾಸ, ಬೋರನ ಕಣಿವೆ ಡ್ಯಾಂಗಳನ್ನು ಅಭಿವೃದ್ಧಿ ಪಡಿಸಿ ನೀರನ್ನು ಉಳಿಸಿದ್ದಾರೆ. ನಾವುಗಳು ಇದರ ಬಳಕೆಯನ್ನ ಸಮರ್ಪಕವಾಗಿ ಸರಿಯಾದ ರೀತಿಯಲ್ಲಿ ಬಳಸಬೇಕಾಗಿದೆ ಎಂದರು.

41 ತಾಲೂಕುಗಳಲ್ಲಿ ಅಂತರ್ಜಲ ಮಟ್ಟ ಕ್ಷೀಣ:

ರಾಜ್ಯದಲ್ಲಿ 41 ತಾಲೂಕುಗಳಲ್ಲಿ ಅಂತರ್ಜಲ ಮಟ್ಟ ಕ್ಷೀಣಿಸುತ್ತಿರುವುದನ್ನ ಕೇಂದ್ರ ಸರ್ಕಾರ ಗುರ್ತಿಸಿದೆ. ನಮ್ಮ ಜಿಲ್ಲೆಯಲ್ಲಿ 6 ತಾಲೂಕುಗಳಲ್ಲಿ ಅಂತರ್ಜಲ ಮಟ್ಟ ಕುಸಿತ ಕಂಡಿವೆ. ನೀರನ್ನ ಉಳಿಸುವುದು, ಜಲಮೂಲಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಈ ಯೋಜನೆಯನ್ನ ರೂಪಿಸಲಾಗಿದೆ. ಅಯಾ ಕಟ್ಟಿನ ಪ್ರದೇಶಗಲ್ಲಿ ಕೆರೆ, ಕಟ್ಟೆಗಳಿಗೆ ನೀರು ತುಂಬಿಸಿ, ಅಂತರ್ಜಲ ಮಟ್ಟವನ್ನ ಹೆಚ್ಚಿಸುವ ಕೆಲಸ ಮಾಡಬೇಕಿದೆ. ನಮಗೆ ಹೇಮಾವತಿ, ಭದ್ರಾ ಮೇಲ್ದಂಡೆ, ಎತ್ತಿನಹೂಳೆಯಂತಹ ನೀರಿನ ಯೋಜನೆಗಳು ಅಭಿವೃದ್ಧಿ ಕಾಣುತ್ತಿವೆ. ಬೆಂಗಳೂರು ನಗರದ ನಾಯಂಡಹಳ್ಳಿ, ವೃಷಭಾವತಿಯಿಂದ ಟ್ರಿಟೇಡ್ ನೀರು ತುಮಕೂರಿನ ಗ್ರಾಮಾಂತರ ಭಾಗಗಳಿಗೆ ಬರಲಿದೆ. ಕೆಲವು ಎನ್.ಜಿ.ಓ ಸಂಸ್ಥೆಗಳು ನೀರಿನ ಮೂಲಗಳ ಬಗ್ಗೆ ಅಂಕಿ - ಅಂಶ ಮತ್ತು ಅಂತರ್ಜಲದ ವಿಸೃತ ಮಾಹಿತಿಯನ್ನು ಒದಗಿಸಬೇಕು ಎಂದು ತಿಳಿಸಿದರು.

ಅಟಲ್ ಭೂ ಯೋಜನೆಯಿಂದ ರೈತರಿಗೆ ಮೈಕ್ರೋ ಇರಿಗೇಷನ್ ಮಾಡಲು ಅನುಕೂಲವಾಗಲಿದೆ, ಸ್ಥಳೀಯ ಸಂಸ್ಥೆಗಳು, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ನೀರಿನ ಸದ್ಭಳಕೆಯನ್ನ ಜನ ಸಮೂಹಗಳಲ್ಲಿ ಅರಿವು ಮೂಡಿಸಬೇಕು. ಸಾರ್ವಜನಿಕರಲ್ಲಿ ನೀರಿನ ಬಳಕೆ ಕುರಿತು ಸರಿಯಾದ ಮಾಹಿತಿ ಕೊಡಬೇಕು. ಜಿಲ್ಲೆಗೆ ಉತ್ತಮವಾದ ಯೋಜನೆ ಬಂದಿದೆ. ರೈತರಿಗೆ ನೀರು, ವಿದ್ಯುತ್, ಋತುಮಾನಗಳ ಬಗ್ಗೆ ಗಮನಹರಿಸಿ ಸೂಕ್ತವಾದ ಬೆಳೆಗೆ ಬೇಕಾಗುವಷ್ಟು ನೀರಿನ ಬಳಕೆ ಬಗ್ಗೆ ಅರಿವು ಮೂಡಿಸಿ ಸುಸ್ಥಿರತೆ ಕಾಪಾಡಬೇಕಾಗಿದೆ ಎಂದರು.

ಜಿಲ್ಲೆಗೆ ಒಂದು ಉತ್ಪನ್ನ, ಒಂದು ಬೆಳೆ ಯೋಜನೆಯಡಿ ತೆಂಗು ಬೆಳೆ ಆಯ್ಕೆಯಾಗಿದೆ. ಈಗಾಗಲೇ ಸಂಬಂಧ ಪಟ್ಟ ಇಲಾಖೆಯೊಡನೆ ಚರ್ಚಿಸಿದ್ದೇನೆ. ಇದರ ಸದುಪಯೋಗ ತೆಂಗು ಬೆಳೆಗಾರರಿಗೆ ಆಗಲಿದೆ. ಕೆರೆಗಳಲ್ಲಿ ಊಳು ತೆಗೆಯುವುದು ಸಮರ್ಪಕವಾಗಿ ನಡೆಯಬೇಕು, ಕೆರೆಯಿಂದ ಹರಿದು ಹೋಗುವ ನದಿಗಳ ಬಗ್ಗೆ ಸರ್ವೆ ಮಾಡಲಾಗುವುದು. ಅಲ್ಲದೇ ಇಂತಹ ನೀರಿನ ಮೂಲಗಳ ರಕ್ಷಣೆಯಾದರೆ ಗ್ರಾಮೀಣ ಭಾಗದ ರೈತರ ಬದುಕು ಚೇತರಿಕೆ ಕಾಣುವುದು. ಆ ದಿಕ್ಕಿನಲ್ಲಿ ನಾವೆಲ್ಲರೂ ಯೋಚಿಸಬೇಕಾಗಿದೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.