ETV Bharat / state

ನಾನು ಸಿಎಂ ಆಗ್ಬೇಕು ಎಂದು ಕೂಗಿದ್ರೆ, ನಂಗೆ ಅಲ್ಲಿ ಹೊಡೆತ ಬೀಳಲಿದೆ: ಜಿ. ಪರಮೇಶ್ವರ್​​ - ಕಾರ್ಯಕರ್ತರಿಗೆ ಮುಂದಿನ ಸಿಎಂ ನಾನೇ ಎಂದು ಹೇಳಬೇಡಿ ಎಂದ ಪರಮೇಶ್ವರ್

ನಾನು ಸಿಎಂ ಆಗಬೇಕು ಎಂದು ಪದೇ ಪದೇ ಹೇಳಬೇಡಿ. ಅದರಿಂದ ಬಹಳ ಕಷ್ಟ ಆಗುತ್ತದೆ. ಏನಾದ್ರೂ ಭಗವಂತನ ಆಶೀರ್ವಾದದಿಂದ ಮುಖ್ಯಮಂತ್ರಿ ಆದ್ರೆ, ಒಳ್ಳೆಯದೆ. ಅದನ್ನು ದೇವರಿಗೆ ಬಿಡೋಣ. ನೀವು ಆಶೀರ್ವಾದ ಮಾಡಿ ಸಾಕು ಎಂದು ಮಾಜಿ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಹೇಳಿದ್ದಾರೆ.

Dr G Parameshwar…
ಡಾ. ಜಿ. ಪರಮೇಶ್ವರ್​​
author img

By

Published : Jan 23, 2022, 3:37 PM IST

ತುಮಕೂರು: ಮುಂದಿನ ಮುಖ್ಯಮಂತ್ರಿ ನೀವೇ ಎಂದು ಬಹಿರಂಗವಾಗಿ ಪದೇ ಪದೇ ಹೇಳಬೇಡಿ. ಅದರಿಂದ ನನಗೆ ಬಹಳ ಕಷ್ಟ ಆಗುತ್ತದೆ. ಯಾಕಂದ್ರೆ ನೀವು ಇಲ್ಲಿ ಹೀಗೆ ಹೇಳಿದ್ರೆ, ನನಗೆ ಅಲ್ಲಿ ಹೊಡೆತ ಬೀಳಲಿದೆ ಎಂದು ಮಾಜಿ ಡಿಸಿಎಂ ಜಿ. ಪರಮೇಶ್ವರ್ ಹೇಳಿದ್ದಾರೆ.

ಮಾಜಿ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್

ಕೊರಟಗೆರೆ ತಾಲೂಕಿನ ಚಿಕ್ಕಗುಂಡುಗಲ್ಲು ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ ನಡೆದ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಿ ನಂತರ ಮಾತನಾಡಿದ ಅವರು, ಏನಾದ್ರೂ ಭಗವಂತನ ಆಶೀರ್ವಾದದಿಂದ ಮುಖ್ಯಮಂತ್ರಿ ಆದ್ರೆ, ಒಳ್ಳೆಯದೆ. ಅದನ್ನು ದೇವರಿಗೆ ಬಿಡೋಣ. ನೀವು ಆಶೀರ್ವಾದ ಮಾಡಿ ಸಾಕು ಎಂದರು.

ಇದನ್ನೂ ಓದಿ: ತುಮಕೂರಿನಲ್ಲಿ ಕೆಎಸ್‌ಆರ್‌ಟಿಸಿ​ ಬಸ್‌ ಅಪಘಾತಕ್ಕೀಡು.. ಇಬ್ಬರು ಸಾವು, 10 ಮಂದಿಗೆ ಗಾಯ

ಮನಸ್ಸಿನಲ್ಲೇ ಮುಖ್ಯಮಂತ್ರಿ ಎಂದು ಹೇಳಿಕೊಳ್ಳಿ. ನಮ್ಮ ಪಕ್ಷದಲ್ಲಿ ತೀರ್ಮಾನ ಮಾಡೋರು ಮೇಲಿದ್ದಾರೆ. ಇದನ್ನು ಇಲ್ಲಿಗೆ ಬಿಟ್ಟುಬಿಡೋಣ ಎಂದು ಕಾರ್ಯಕರ್ತರಿಗೆ ಪರಮೇಶ್ವರ್​​ ಹೇಳಿದ್ದಾರೆ.

ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.