ETV Bharat / state

ಸಿರಾದಲ್ಲಿ ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡಬೇಡಿ: ಶಾಸಕ ಸತ್ಯನಾರಾಯಣ್​​

author img

By

Published : May 30, 2020, 3:54 PM IST

ತುಮಕೂರು ಜಿಲ್ಲೆಯ ಸಿರಾ ತಾಲೂಕಿಗೆ ಕೊರೊನಾ ರೋಗಿಗಳನ್ನು ತಂದು ಚಿಕಿತ್ಸೆ ಕೊಡಬೇಡಿ ಎಂದು ಸಿರಾ ಶಾಸಕ ಸತ್ಯನಾರಾಯಣ್ ಕೆಡಿಪಿ ಸಭೆಯಲ್ಲಿ ಆಗ್ರಹಿಸಿದ್ದಾರೆ.

ds
ಸಿರಾದಲ್ಲಿ ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡಬೇಡಿ: ಶಾಸಕ ಸತ್ಯನಾರಾಯಣ್

ತುಮಕೂರು: ಸಿರಾ ತಾಲೂಕು ಆಸ್ಪತ್ರೆಯಲ್ಲಿ ಕೊರೊನಾ ಪೀಡಿತರಿಗೆ ಚಿಕಿತ್ಸೆ ನೀಡಬೇಡಿ. ಇದರಿಂದ ತಾಲೂಕಿನ ಜನರು ಭಯ ಪಡುವಂತಾಗಿದೆ ಎಂದು ಶಾಸಕ ಸತ್ಯನಾರಾಯಣ್ ಹೇಳಿದ್ದಾರೆ.

ಜಿಲ್ಲಾ ಪಂಚಾಯತ್​ನಲ್ಲಿ ಇಂದು ನಡೆದ ನಾಲ್ಕನೇ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ಕೋವಿಡ್​-19 ವರದಿಗೆ ಸಂಬಂಧಪಟ್ಟಂತೆ ಸುದೀರ್ಘ ಮಾಹಿತಿ ನೀಡುತ್ತಿದ್ದರು. ಈ ನಡುವೆ ಸಿರಾ ನಗರದಲ್ಲಿ ಒಂದು ಕಂಟೇನ್ಮೆಂಟ್ ಝೋನ್ ಮಾಡಲಾಗಿದೆ ಎಂದು ವಿವರಿಸುತ್ತಿದ್ದರು. ಮಧ್ಯ ಪ್ರವೇಶಿಸಿದ ಸಿರಾ ಶಾಸಕ ಸತ್ಯನಾರಾಯಣ್, ತಾಲೂಕು ಆಸ್ಪತ್ರೆಗೆ ಕೊರೊನಾ ರೋಗಿಗಳನ್ನು ತರಬೇಡಿ. ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್​ ಪೀಡಿತರಿಗೆ ಚಿಕಿತ್ಸೆ ನೀಡಿ ಎಂದರು.

ಈ ವೇಳೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ, ಕೋವಿಡ್-19 ವರದಿಗೆ ಸಂಬಂಧಿಸಿದಂತೆ ಯಾವುದೇ ಆಸ್ಪತ್ರೆ ಮೇಲೆ ಒತ್ತಡ ಹೇರುವ ಉದ್ದೇಶವಿಲ್ಲ. ಜಿಲ್ಲೆಗೆ ಮಹಾರಾಷ್ಟ್ರ ಕಡೆಯಿಂದ ಬರುವಂತಹ ವ್ಯಕ್ತಿಗಳನ್ನು ಸಿರಾ ಸಮೀಪ ತಡೆದು ಕ್ವಾರಂಟೈನ್ ಮಾಡಲಾಗುತ್ತಿದೆ. ಅದೇ ರೀತಿ ಬೆಂಗಳೂರು ಕಡೆಯಿಂದ ಬರುವವರನ್ನು ಜಿಲ್ಲಾ ಕೇಂದ್ರದಲ್ಲಿ ಕ್ವಾರಂಟೈನ್ ಮಾಡಲಾಗುತ್ತಿತ್ತು. ಕೇಂದ್ರ ಸರ್ಕಾರದ ನಿಯಮಾನುಸಾರವೇ ಕೊರೊನಾ ರೋಗ ನಿಯಂತ್ರಣದ ಕಾರ್ಯಯೋಜನೆ ಪಾಲಿಸಲಾಗುತ್ತಿದೆ ಎಂದರು.

ಕುಣಿಗಲ್ ಶಾಸಕ ರಂಗನಾಥ್ ಮಾತನಾಡಿ, ಕುಣಿಗಲ್ ತಾಲೂಕು ಆಸ್ಪತ್ರೆಯಲ್ಲಿ ಕೊರೊನಾ ನಿಯಂತ್ರಣಕ್ಕೆ ಯಾವುದೇ ರೀತಿಯ ಮುಂಜಾಗ್ರತಾ ಕ್ರಮ ಮತ್ತು ಸಿಬ್ಬಂದಿ ಇಲ್ಲ. ಐಸಿಯು ವ್ಯವಸ್ಥೆ ಇಲ್ಲ. ಓರ್ವ ಅನಸ್ತೇಶಿಯಾ ವೈದ್ಯರಿದ್ದಾರೆ. ತಕ್ಷಣವೇ ಈ ಬಗ್ಗೆ ಗಮನ ಹರಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಮಾಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.