ತುಮಕೂರು: ಕೊರಟಗೆರೆ ತಾಲೂಕಿನ ರೆಡ್ ಝೋನ್ ಗ್ರಾಮ ತೀತಾ, ಹಾಟ್ ಸ್ಪಾಟ್ ಗ್ರಾಮಗಳಾದ ಜಟ್ಟಿ ಅಗ್ರಹಾರ ಮತ್ತು ಎಲೆರಾಂಪುರ ಗ್ರಾಮಗಳಿಗೆ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರು ಭೇಟಿ ನೀಡಿ ಸೋಂಕಿತರ ಆರೋಗ್ಯ ವಿಚಾರಿಸಿ, ಧೈರ್ಯ ತುಂಬಿದರು.
ಜಿಲ್ಲಾಧಿಕಾರಿಗಳು ಸೋಂಕಿತರ ಮನೆ-ಮನೆಗೆ ಭೇಟಿ ನೀಡಿ ಕೋವಿಡ್ ಕಿಟ್ ನೀಡಿರುವ ಬಗ್ಗೆ ಪರಿಶೀಲನೆ ನಡೆಸಿ, ಆರೋಗ್ಯ ವಿಚಾರಿಸಿ, ಹೋಂ ಐಸೋಲೇಷನ್ ನಲ್ಲಿರುವ ಸೋಂಕಿತರಿಗೆ ಧೈರ್ಯ ತುಂಬಿದರು.
ತೀತಾ ಗ್ರಾಮದಲ್ಲಿ 44 ಕೋವಿಡ್ ಪಾಸಿಟಿವ್ ಪ್ರಕರಣಗಳಿದ್ದು, ರೆಡ್ ಝೋನ್ ಎಂದು ಘೋಷಿಸಲಾಗಿದೆ. ಅದೇ ರೀತಿ 22 ಪ್ರಕರಣಗಳಿದ್ದ ಜಟ್ಟಿ ಅಗ್ರಹಾರ ಗ್ರಾಮವನ್ನು ಹಾಟ್ ಸ್ಪಾಟ್ ಎಂದು ಗುರುತಿಸಲಾಗಿದೆ.