ತುಮಕೂರು : ನಾಲ್ಕೈದು ತಿಂಗಳಿನಿಂದ ಮೃತಪಟ್ಟವರ ಅಸ್ಥಿ ತೆಗೆದುಕೊಂಡು ಹೋಗುವಂತೆ ಪರಿಪರಿಯಾಗಿ ಕೇಳಿದರೂ ಸಂಬಂಧಿಕರು ಸ್ಮಶಾನದತ್ತ ಸುಳಿಯದ ಘಟನೆ ನಗರದಲ್ಲಿ ನಡೆದಿದೆ.
ಕೋವಿಡ್ 2ನೇ ಅಲೆ ವೇಳೆ ಸೋಂಕಿಗೆ ಒಳಗಾಗಿ ಮೃತಪಟ್ಟಿದ್ದ 22 ಮಂದಿಯ ಅಸ್ಥಿಯನ್ನು ಸಂಬಂಧಿಕರು ಯಾರೂ ಬಂದು ತೆಗೆದುಕೊಂಡು ಹೋಗದ ಹಿನ್ನೆಲೆಯಲ್ಲಿ ಜಿಲ್ಲಾಡಳಿತವೇ ಮುಂದೆ ನಿಂತು ಅಂತಿಮ ವಿಧಿ-ವಿಧಾನಗಳನ್ನು ನೆರವೇರಿಸಿದೆ.
ಕೋಲ್ಕತ್ತಾ ಸೇರಿದಂತೆ ದೂರದಲ್ಲಿರುವ ಮೃತಪಟ್ಟವರ ಸಂಬಂಧಿಕರು ಅಸ್ಥಿಯನ್ನು ತೆಗೆದುಕೊಂಡು ಹೋಗಲಿಲ್ಲ. ತುಮಕೂರಿನ ಶವಾಗಾರದಿಂದ ಅಸ್ಥಿ ತೆಗೆದುಕೊಂಡು ಹೋಗಿ, ಬೆಳಗ್ಗೆ 11 ಗಂಟೆ ಒಳಗೆ ಶ್ರೀರಂಗಪಟ್ಟಣದ ಸಂಗಮದಲ್ಲಿ ತಹಶೀಲ್ದಾರ್ ಮೋಹನ್ ನೇತೃತ್ವದಲ್ಲಿ ವಿಧಿ-ವಿಧಾನಗಳನ್ನು ನೆರವೇರಿಸಲಾಯಿತು.
ಸಂಬಂಧಿಕರ ಮೊಬೈಲ್ ನಂಬರ್ಗಳನ್ನು ಜಿಲ್ಲಾಡಳಿತ ಸಂಪರ್ಕಿಸಲು ಯತ್ನಿಸಿದರೇ ಅವೆಲ್ಲವೂ ಸ್ವಿಚ್ ಆಫ್, ನಾಟ್ ರೀಚೆಬಲ್ ಎಂದು ಬರುತ್ತಿವೆ. ನಾಲ್ಕೈದು ತಿಂಗಳಿನಿಂದ ನಿರಂತರವಾಗಿ ಸಂಪರ್ಕಿಸಲು ಯತ್ನಿಸಿದಾಗ ಅಕಸ್ಮಾತ್ ಕನೆಕ್ಟ್ ಆದರೂ ಕೂಡ ಅಸ್ಥಿ ತೆಗೆದುಕೊಂಡು ಹೋಗಲು ಬರುತ್ತೇವೆ ಎಂದು ಹೇಳಿ ಬಂದಿಲ್ಲ. ಹೀಗಾಗಿ, ಸರರ್ಕಾರದ ನಿರ್ದೇಶನದಂತೆ ವಿಧಿ-ವಿಧಾನ ನೆರವೇರಿಸಲಾಗಿದೆ ಎಂದು ತಹಶೀಲ್ದಾರ್ ಮೋಹನ್ ತಿಳಿದ್ದಾರೆ.