ETV Bharat / state

ಅಭಿವೃದ್ಧಿಗಾಗಿ ಹೆಚ್​ಡಿಡಿ ಜಿಲ್ಲಾ ಪ್ರವಾಸ ಮಾಡಿದ್ರೆ ಅವರ ಜತೆ ಹೋಗುವೆ:  ಸಂಸದ ಬಸವರಾಜ್ - ದೇವೇಗೌಡರು ತುಮಕೂರು ಪ್ರವಾಸ ಮಾಡಿದ್ರೆ, ಜೊತೆಗೆ ಹೋಗುವೆ

ಮಾಜಿ ಪ್ರಧಾನಿ ದೇವೇಗೌಡರು ತುಮಕೂರು ಜಿಲ್ಲೆಯಲ್ಲಿ ಪ್ರವಾಸ ಮಾಡಿದರೆ ನಾನೂ ಸಹ ಅವರೊಂದಿಗೆ ಹೋಗುತ್ತೇನೆ ಎಂದು ತುಮಕೂರು ಸಂಸದ ಜಿ.ಎಸ್. ಬಸವರಾಜ್ ಹೇಳಿದ್ದಾರೆ.

MP Basavaraj
ತುಮಕೂರು ಸಂಸದ ಜಿ.ಎಸ್. ಬಸವರಾಜ್
author img

By

Published : Feb 14, 2020, 1:11 PM IST

ತುಮಕೂರು: ಪಕ್ಷಾತೀತವಾಗಿ ಅಭಿವೃದ್ಧಿ ವಿಷಯದಲ್ಲಿ ಮಾಜಿ ಪ್ರಧಾನಿ ದೇವೇಗೌಡರು ತುಮಕೂರು ಜಿಲ್ಲೆಯಲ್ಲಿ ಪ್ರವಾಸ ಮಾಡಿದ್ರೆ, ನಾನು ಸಹ ಅವರೊಂದಿಗೆ ಹೋಗುತ್ತೇನೆ ಎಂದು ತುಮಕೂರು ಸಂಸದ ಜಿ.ಎಸ್. ಬಸವರಾಜ್ ಹೇಳಿದ್ದಾರೆ.

ತುಮಕೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರು ತಮ್ಮ ಲೋಕಸಭಾ ಕ್ಷೇತ್ರದಲ್ಲಿ ಪ್ರವಾಸ ಕೈಗೊಂಡರೆ ಅದಕ್ಕೆ ಸ್ವಾಗತಿಸುತ್ತೇನೆ. ಅಭಿವೃದ್ಧಿ ವಿಷಯದಲ್ಲಿ ದೇವೇಗೌಡರು ಹಿರಿಯರು ಅವರು ಕಮಿಟೆಡ್ ಪರ್ಸನ್, ನಾನು ಅವರ ವಿರುದ್ಧ ಗೆದ್ದಿರಬಹುದಷ್ಟೇ ಎಂದಿದ್ದಾರೆ.

ಜಿ.ಎಸ್. ಬಸವರಾಜ್, ತುಮಕೂರು ಸಂಸದ

ಅವರ ವಯಸ್ಸಿಗೆ, ಅವರು ಮಾಡಿರುವಂತಹ ಕೆಲಸಗಳಿಗೂ ನನಗೂ ಸಾಕಷ್ಟು ವ್ಯತ್ಯಾಸಗಳಿವೆ. ನನಗೂ ನನ್ನದೇ ಆದಂತಹ ನಿಷ್ಠೆಯಿದೆ. ತುಮಕೂರು ಲೋಕಸಭಾ ಕ್ಷೇತ್ರದ ವಿಷಯ ಬಂದಾಗ ದೇವೇಗೌಡರಿಗೆ ನಾನು ಮಾತನಾಡಿದ್ದೆ, ಅದಕ್ಕೆ ಮತದಾರರು ಈಗಾಗಲೇ ಉತ್ತರ ನೀಡಿದ್ದಾರೆ ಎಂದರು. ಇದೇ ವೇಳೆ, ವೈಯಕ್ತಿಕವಾಗಿ, ಪ್ರಾಮಾಣಿಕವಾಗಿ ದೇವೇಗೌಡರ ಬಗ್ಗೆ ಕಿಂಚಿತ್ತು ಅಸಮಾಧಾನವಿಲ್ಲ ಎಂದು ಸಂಸದ ಬಸವರಾಜ್​​ ಸ್ಪಷ್ಟಪಡಿಸಿದ್ದಾರೆ.

ಇತ್ತೀಚೆಗೆ ದೇವೇಗೌಡರು ತುಮಕೂರಿಗೆ ಬಂದಾಗ ಮುಂದಿನ ದಿನಗಳಲ್ಲಿ ತುಮಕೂರಿನ ಎಂಟು ವಿಧಾನಸಭಾ ಕ್ಷೇತ್ರದಲ್ಲಿ ಪ್ರವಾಸ ಮಾಡೋದು ಶತಸಿದ್ಧ ಎಂದು ಹೇಳಿಕೆ ನೀಡಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.