ತುಮಕೂರು: ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ ಅರಸು ಅವರ 104ನೇ ಜಯಂತಿಯನ್ನು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸರಳವಾಗಿ ಆಚರಿಸಲಾಯಿತು.
ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಡಾ. ಕೆ.ರಾಕೇಶ್ ಕುಮಾರ್, ಭೂಮಿಯ ಹೋರಾಟಕ್ಕೆ ಸಂಬಂಧಪಟ್ಟಂತೆ ಮೊದಲ ಹೆಸರು ಬರುವುದೇ ಡಿ.ದೇವರಾಜ ಅರಸು ಅವರದ್ದು.
ಜೊತೆಗೆ ಹಿಂದುಳಿದ ವರ್ಗಗಳ ಏಳಿಗೆಗೆ ಹೆಸರು ಮಾಡಿದವರು. ಎಲ್ಲರಿಗೂ ಸಮಾನತೆ ಎಂಬುದನ್ನು ತೋರಿಸಿ ಕೊಟ್ಟವರು. ಭೂಮಿ ಹಕ್ಕು ದೊರೆತಂತೆ ಪ್ರತಿಯೊಬ್ಬರು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಬೆಳೆಯಲು ಅವಕಾಶ ಮಾಡಿ, ಉತ್ತಮ ಯೋಜನೆಗಳನ್ನು ರೂಪಿಸಿಕೊಟ್ಟವರು ಡಿ.ದೇವರಾಜ ಅರಸು. ಇವರಲ್ಲಿನ ಚಿಂತನೆಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಅವರ ಜನ್ಮದಿನವನ್ನು ಎಲ್ಲರೂ ಸ್ಮರಿಸೋಣ ಎಂದರು.