ತುಮಕೂರು: ಅನಾರೋಗ್ಯದಿಂದ ಇತ್ತೀಚೆಗೆ ನಿಧನರಾದ ಶಿರಾ ಶಾಸಕ ಸತ್ಯನಾರಾಯಣ ಅವರ ಮನೆಗೆ ಡಿಸಿಎಂ ಅಶ್ವತ್ಥ ನಾರಾಯಣ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು.
ತುಮಕೂರಿನಲ್ಲಿರುವ ಶಿರಾ ಶಾಸಕ ಸತ್ಯನಾರಾಯಣ ಮನೆಗೆ ಭೇಟಿ ನೀಡಿ, ಅವರ ಮಗ ಪ್ರಕಾಶ್ ಮತ್ತು ಅವರ ಪತ್ನಿಗೆ ಸಾಂತ್ವನದ ಮಾತುಗಳನ್ನು ಹೇಳಿದರು.
ಇದೇ ವೇಳೆ ಸಚಿವ ಮಾಧುಸ್ವಾಮಿ ಹಾಗೂ ಶಾಸಕ ಜ್ಯೋತಿ ಗಣೇಶ್ ಹಾಜರಿದ್ದರು.