ತುಮಕೂರು: ಆರು ಮಂದಿ ಸಚಿವರು ಕೋರ್ಟ್ ಮೊರೆ ಹೋಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದು, 'ಅವರಿಗೆ ಏನು ಸಮಸ್ಯೆ ಇದೆಯೋ ಎಂಬುದು ಅವರಿಗೆ ಗೊತ್ತು. ನನಗೆ ಏನ್ ಸಮಸ್ಯೆ ಇದೆ ಅಂತಾ ನನಗೆ ಮಾತ್ರ ಗೊತ್ತಾಗುತ್ತೆ, ಬೇರೆಯವರಿಗೆ ಏನು ಗೊತ್ತಾಗಲ್ಲ' ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಸ್ಪಷ್ಟಪಡಿಸಿದ್ದಾರೆ.
ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಕಾಡಸಿದ್ದೇಶ್ವರ ಮಠದಲ್ಲಿ ನಡೆಯುತ್ತಿರುವ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸಿದ ವೇಳೆ ಪತ್ರಕರ್ತರೊಂದಿಗೆ ಮಾತನಾಡಿದರು. ಅವರ ಪಕ್ಷ ವಿಚಾರ, ಅವರ ಸರ್ಕಾರದ ವಿಚಾರ, ಅವರ ಮಂತ್ರಿಗಳ ವಿಚಾರ ಅವರಿಗೆ ಗೊತ್ತು. ನಾನು ಏನೂ ಹೇಳೊದಕ್ಕೆ ಆಗಲ್ಲ. ಈ ಬಗ್ಗೆ ಅವರನ್ನೇ ಕೇಳಿ, ನಾನು ಈ ಬಗ್ಗೆ ಟಿವಿಯಲ್ಲಿ ನೋಡಿದ್ದೇನೆ ಎಂದರು.
ಇದನ್ನು ಮಾಧ್ಯಮದವರಾದ ನೀವು ಕೇಳಿ ತಿಳಿದುಕೊಳ್ಳಿ. ಈ ಬಗ್ಗೆ ನಮ್ಮ ಪಕ್ಷದಲ್ಲಿ ಕುಳಿತು ಚರ್ಚೆ ಮಾಡುತ್ತೇವೆ. ಇದು ಸ್ವಂತದ ವಿಚಾರವಲ್ಲ, ಸಾರ್ವಜನಿಕರ ವಿಚಾರವಾಗಿದೆ ಎಂದರು.
ಓದಿ: ಇನ್ನು ಐದಾರು ಸಚಿವರು ಕೋರ್ಟ್ ಮೊರೆ ಹೋಗಲಿದ್ದಾರೆ: ಸಚಿವ ಸುಧಾಕರ್
ಕಾಂಗ್ರೆಸ್ ನಾಯಕರ ಮೇಲೆ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ಸ್ಪಷ್ಟಪಡಿಸಿದ ಅವರು, ನಮ್ಮ ಮೇಲೆ ಆರೋಪ ಮಾಡುತ್ತಿರುವುದು ಬಹಳ ಸಂತೋಷದ ವಿಚಾರ. ಯಾರೋ ಒಬ್ಬರ ಮೇಲೆ ಹೇಳಿ ಖುಷಿಯಾಗಿರಬೇಕಲ್ವಾ ಎಂದರು. ಸದ್ಯ ಆರು ಜನರು ಕೋರ್ಟ್ ಹೋಗಿರುವ ಬಗ್ಗೆ ನೀವೇ ಅನಾಲಿಸಿಸ್ ಮಾಡಿ ಎಂದರು.