ತುಮಕೂರು: ರಾಜ್ಯದಲ್ಲಿ ಐದು ದಿನಗಳ ಕಾಲ ಭಾರತ್ ಜೋಡೋ ಪಾದಯಾತ್ರೆ ನಡೆಯಲಿದ್ದು ಯಾರೂ ಕೂಡಾ ರಾಹುಲ್ ಗಾಂಧಿಯವರಿಗೆ ಹೂವಿನ ಹಾರ ಹಾಕಬೇಡಿ. ಬದಲಾಗಿ ಅವರೊಂದಿಗೆ ಹೆಜ್ಜೆ ಹಾಕಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮನವಿ ಮಾಡಿದ್ದಾರೆ.
ಪಾದಯಾತ್ರೆ ಸಾಗುವ ಮಾರ್ಗ ಈಗಾಗಲೇ ನಿಗದಿಯಾಗಿದೆ. ಆ ಮಾರ್ಗದ ಎಲ್ಲೆಡೆ ಪರಿಶೀಲನೆ ನಡೆಸಲಾಗುತ್ತಿದೆ. ರೈತರ ಸಮಸ್ಯೆ ಸೇರಿದಂತೆ ದೇಶದಲ್ಲಿ ಸಮಸ್ಯೆಗಳನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಜನ ಜಾಗೃತಿ ಮೂಡಿಸಲು ಹಾಗೂ ಸಾಮರಸ್ಯದ ತೋಟವಾಗಿ ರೂಪಿಸಲು ಈ ಯಾತ್ರೆ ಕೈಗೊಂಡಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ: ಕೊಲ್ಲಂನಲ್ಲಿ ಸಾಗಿದ ಕಾಂಗ್ರೆಸ್ 'ಭಾರತ್ ಜೋಡೋ ಯಾತ್ರೆ': ರಾಹುಲ್ಗೆ ಬೆಂಬಲಿಗರ ಸಾಥ್