ETV Bharat / state

ಜಮೀನು ವಿವಾದ: ಅಂತ್ಯಕ್ರಿಯೆ ವೇಳೆ ಗೊಂದಲ, ಸಮಸ್ಯೆ ಪರಿಹರಿಸಿದ ಪೊಲೀಸರು - ಜಮೀನು ವಿವಾದದಿಂದ ಮೃತದೇಹದ ಅಂತ್ಯಸಂಸ್ಕಾರ ತಡ

ತುಮಕೂರು ಹೊರವಲಯದ ಭೀಮಸಂದ್ರದಲ್ಲಿ ಜಮೀನು ವಿವಾದ ಹಿನ್ನೆಲೆಯಲ್ಲಿ ಮೃತದೇಹದ ಅಂತ್ಯ ಸಂಸ್ಕಾರವೊಂದರ ವೇಳೆ ಎರಡು ಕುಟುಂಬಗಳು ಪರಸ್ಪರ ಗೊಂದಲಕ್ಕೆ ಈಡಾದ ಘಟನೆ ನಡೆದಿದೆ.

cremation-of-dead-body-in-dispute-land-leads-to-brattle-between-two-family-in-tumkur
ಜಮೀನು ವಿವಾದ: ಅಂತ್ಯಕ್ರಿಯೆ ವೇಳೆ ಗೊಂದಲ, ಸಮಸ್ಯೆ ಪರಿಹರಿಸಿದ ಪೊಲೀಸರು
author img

By

Published : Jan 25, 2022, 11:16 AM IST

Updated : Jan 25, 2022, 11:31 AM IST

ತುಮಕೂರು: ಜಮೀನು ವಿವಾದದ ಹಿನ್ನೆಲೆಯಲ್ಲಿ ಮೃತದೇಹವೊಂದಕ್ಕೆ ಶವಸಂಸ್ಕಾರ ಮಾಡಲು ಕೆಲಕಾಲ ಬೇರೊಂದು ಕುಟುಂಬದವರು ಆಕ್ಷೇಪ ವ್ಯಕ್ತಪಡಿಸಿದ ಘಟನೆ ತುಮಕೂರು ಹೊರವಲಯದ ಭೀಮಸಂದ್ರದಲ್ಲಿ ನಡೆದಿದೆ.

ಮಂಜುನಾಥ್(50) ಎಂಬುವರು ಮೃತಪಟ್ಟಿದ್ದು, ಮೃತದೇಹವನ್ನು ಭೀಮಸಂದ್ರದ ಸರ್ವೆ ನಂಬರ್ 16ರಲ್ಲಿ ಇದ್ದ ಸ್ಥಳದಲ್ಲಿ ಅಂತ್ಯಸಂಸ್ಕಾರ ಮಾಡಲು ಸಂಬಂಧಿಕರು ಶವ ಹೊತ್ತು ತಂದಿದ್ದು, ಗುಂಡಿಯನ್ನೂ ತೋಡಿದ್ದರು. ಆದರೆ, ಸೌಭಾಗ್ಯ ಎಂಬುವವರು ತಮ್ಮ ಕುಟುಂಬದೊಂದಿಗೆ ಬಂದು, ಜಾಗ ತಮ್ಮದೆಂದು ವಾದಿಸಿದರು. ಈ ವೇಳೆ, ಪರಸ್ಪರ ಗಲಾಟೆಯಾಗಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ.

ಜಮೀನು ವಿವಾದದಿಂದ ಅಂತ್ಯಕ್ರಿಯೆ ವೇಳೆ ಗೊಂದಲ

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಎರಡೂ ಕುಟುಂಬದವರ ಬಳಿ ಇದ್ದ ದಾಖಲೆ ಪತ್ರಗಳನ್ನು ಪರಿಶೀಲಿಸಿದ ಪೊಲೀಸರು, ಮಂಜುನಾಥ್ ಕುಟುಂಬದವರಿಗೆ ತಿಳಿ ಹೇಳಲು ಮುಂದಾದರು. ಆದರೆ ಮಂಜುನಾಥ್ ಕುಟುಂಬದವರು ಸದರಿ ಜಾಗ ದಲಿತರಿಗೆ ಮಣ್ಣು ಮಾಡಲು ಇದ್ದ ಜಾಗ. ಏನೇ ಆದರೂ ನಾವು ಇದೇ ಜಾಗದಲ್ಲಿ ಮಣ್ಣು ಮಾಡುತ್ತೇವೆ ಎಂದು ಪಟ್ಟು ಹಿಡಿದರು.

ಇನ್ನೊಂದೆಡೆ ಸೌಭಾಗ್ಯ ಕುಟುಂಬದವರು ಮಣ್ಣು ಮಾಡಲು ತೆಗೆಯಲಾಗಿದ್ದ ಗುಂಡಿ ಮುಚ್ಚಿದ್ದು, ಕೊನೆಗೆ ಪೊಲೀಸರು ಇಬ್ಬರನ್ನೂ ಮನವೊಲಿಸಿ ಅಲ್ಲಿಯೇ ಅಂತ್ಯಸಂಸ್ಕಾರ ಮಾಡಲು ವ್ಯವಸ್ಥೆ ಮಾಡಿದರು.

ಇದನ್ನೂ ಓದಿ: ವಿಜಯಪುರದಲ್ಲಿ ರಸ್ತೆ ದಾಟಲು ಹೋದ ವ್ಯಕ್ತಿಗೆ ವಾಹನ ಡಿಕ್ಕಿ- ಸ್ಥಳದಲ್ಲೇ ಸಾವು!

Last Updated : Jan 25, 2022, 11:31 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.