ತುಮಕೂರು: ರಾಜ್ಯಸರ್ಕಾರ ಸುಗ್ರೀವಾಜ್ಞೆಯ ಮೂಲಕ ಹೊರಡಿಸಿರುವ ವಿವಿಧ ಕಾನೂನು ತಿದ್ದುಪಡಿಯನ್ನು ವಿರೋಧಿಸಿ ಶಾಸಕ ಜ್ಯೋತಿಗಣೇಶ್ ಕಚೇರಿ ಮುಂದೆ ಭಾರತ ಕಮ್ಯುನಿಸ್ಟ್ ಪಕ್ಷ ಪ್ರತಿಭಟನೆ ನಡೆಸಿತು.
ಕೋವಿಡ್-19 ಹಿನ್ನೆಲೆ ರಾಜ್ಯಸರ್ಕಾರ ಸುಗ್ರೀವಾಜ್ಞೆಯ ಮೂಲಕ ಕರ್ನಾಟಕ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ , ಎಪಿಎಂಸಿ ಕಾಯ್ದೆ ತಿದ್ದುಪಡಿ , ಕೈಗಾರಿಕಾ ರಾಜ್ಯಗಳು ಮತ್ತು ಇತರೆ ಕಾಯ್ದೆ ತಿದ್ದುಪಡಿಗೆ ಹೊರಟಿದೆ. ರಾಜ್ಯದ ರೈತರು ಹಾಗೂ ಕೂಲಿ ಕಾರ್ಮಿಕರ ಮೇಲೆ ಈ ಕಾಯ್ದೆಗಳು ದುಷ್ಪರಿಣಾಮ ಬೀರಲಿವೆ. ಅಷ್ಟೇ ಅಲ್ಲದೇ ದಲಿತ, ಅಲ್ಪಸಂಖ್ಯಾತ ಜನಸಮೂಹಗಳಲ್ಲಿ ಹೆಚ್ಚಿನ ಮಟ್ಟದಲ್ಲಿ ಅಸಮಾನತೆಯುಂಟಾಗುತ್ತದೆ. ಹಾಗಾಗಿ ಈ ಕಾಯ್ದೆಗಳು ವಿಧಾನಸಭೆಯ ಅಂಗೀಕಾರಕ್ಕೆ ಚರ್ಚೆಗೆ ಬಂದಂತಹ ಸಂದರ್ಭದಲ್ಲಿ ಕಾಯ್ದೆಗಳನ್ನು ವಿರೋಧಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು.
ರಾಜ್ಯಸರ್ಕಾರದ ಕಾನೂನುಗಳ ವಿರುದ್ಧ ತುಮಕೂರಿನಲ್ಲಿ ಸಿ.ಪಿ.ಐ. ಪ್ರತಿಭಟನೆ
ರಾಜ್ಯಸರ್ಕಾರ ಸುಗ್ರೀವಾಜ್ಞೆ ಮೂಲಕ ವಿವಿಧ ಕಾಯ್ದೆಗಳ ತಿದ್ದುಪಡಿ ವಿರೋಧಿಸಿ ತುಮಕೂರಿನಲ್ಲಿ ಸಿ.ಪಿ.ಐ. ಪಕ್ಷ ಪ್ರತಿಭಟನೆ ನಡೆಸಿತು.