ತುಮಕೂರು: ಗುಬ್ಬಿ ಜೆಡಿಎಸ್ ಶಾಸಕ ಶ್ರೀನಿವಾಸ್ ಅವರ ಕುಟುಂಬದ ಮೂವರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಪತ್ನಿ ಭಾರತಿ ಶ್ರೀನಿವಾಸ್, ಮಕ್ಕಳಾದ ದುಶ್ಯಂತ್, ತೇಜಸ್ವಿನಿ ಅವರುಗಳಲ್ಲಿ ಸೋಂಕು ಇರುವುದು ದೃಢವಾಗಿದ್ದು ಶಾಸಕರ ಗಂಟಲು ದ್ರವ ಪರೀಕ್ಷೆಯಲ್ಲಿ ನೆಗೆಟಿವ್ ಬಂದಿದೆ.
‘ಈಟಿವಿ ಭಾರತ’ದ ಜೊತೆ ಮಾತನಾಡಿದ ದುಶ್ಯಂತ್, ಸೋಮಲಾಪುರ, ಬಾಗೂರು, ನಿಟ್ಟೂರು ಕಾಲೋನಿ ಸೇರಿದಂತೆ 12 ಸೀಲ್‌ಡೌನ್ ಪ್ರದೇಶಗಳಿಗೆ ಹೋಗಿ ಪಡಿತರ ವಿತರಣೆ ಮಾಡಿದ್ದೆ. ಅಲ್ಲದೆ, ತಾಯಿ ಭಾರತಿ ಶ್ರೀನಿವಾಸ್ ಅವರು ಕೂಡ 2 ಸೀಲ್ ಡೌನ್ ಪ್ರದೇಶಗಳಿಗೆ ತೆರಳಿ ಕಿಟ್ ವಿತರಣೆ ಮಾಡಿದ್ದರು.
ಸಾಲದೆಂಬಂತೆ ಕಂಟೈನ್‌ಮೆಂಟ್ ಪ್ರದೇಶಗಳಿಗೆ ತೆರಳಿದ್ದರಿಂದ ನಮ್ಮ ತಾಯಿಯವರಲ್ಲಿ ಸೋಂಕಿನ ಗುಣಲಕ್ಷಣಗಳು ಕಾಣಿಸಿಕೊಂಡಿದ್ದವು. ಜ್ವರ, ತಲೆನೋವು, ನೆಗಡಿ, ಕೆಮ್ಮಿನಿಂದ ಬಳಲುತ್ತಿದ್ದರು. ಮುನ್ನೆಚ್ಚರಿಕೆ ಕ್ರಮವಾಗಿ ಕೋವಿಡ್ ಪರೀಕ್ಷೆ ನಡೆಸಿದಾಗ ಸೋಂಕು ಇರುವುದು ದೃಢವಾಗಿದೆ ಎಂದಿದ್ದಾರೆ.
ಮನೆಯಲ್ಲಿಯೇ ಒಂದು ವಾರ ಚಿಕಿತ್ಸೆ ತೆಗೆದುಕೊಳ್ಳಲು ಮೂವರು ನಿರ್ಧರಿಸಿದ್ದಾಗಿ ತಿಳಿಸಿದರು.