ತುಮಕೂರು: ನಗರದಲ್ಲಿ ಮತ್ತೊಂದು ಕೊರೊನಾ ಪ್ರಕರಣ ಪತ್ತೆಯಾಗಿದ್ದು, 32 ವರ್ಷದ ವ್ಯಕ್ತಿಗೆ ಸೋಂಕು ತಗುಲಿರುವುದು ದೃಢವಾಗಿದೆ.
ಜಿಲ್ಲೆಯಲ್ಲಿ ಈವರೆಗೆ ಮೂವರಲ್ಲಿ ಸೋಂಕು ಪತ್ತೆಯಾಗಿದ್ದು, ಓರ್ವ ಮೃತಪಟ್ಟಿದ್ದಾನೆ. 13 ವರ್ಷದ ಬಾಲಕ ಕೊರೊನಾದಿಂದ ಗುಣಮುಖನಾಗಿದ್ದಾನೆ. ಸೋಂಕು ಪತ್ತೆಯಾದ ವ್ಯಕ್ತಿಯನ್ನು ರೋಗಿ ನಂ.447 ಎಂದು ಗುರುತಿಸಲಾಗಿದೆ.
ಈತ ಗುಜರಾತ್ನ ಸೂರತ್ಗೆ ಭೇಟಿ ನೀಡಿರುವ ಮಾಹಿತಿಯನ್ನು ಜಿಲ್ಲಾಡಳಿತ ಕಲೆಹಾಕಿದೆ. ಹಲವು ದಿನಗಳಿಂದ P ನಂ.447 ಸೇರಿದಂತೆ ಹಲವು ಮಂದಿಯನ್ನು ನಗರದಲ್ಲಿ ಹೋಮ್ ಕ್ವಾರಂಟೈನ್ನಲ್ಲಿ ಇರಿಸಲಾಗಿತ್ತು. ಸೋಂಕಿತ ವ್ಯಕ್ತಿ ಇದ್ದ ಪ್ರದೇಶದಲ್ಲಿ ರಾತ್ರಿಯಿಂದ ಪೊಲೀಸರು ಮೊಕ್ಕಾಂ ಹೂಡಿದ್ದು, ಕಟ್ಟೆಚ್ಚರ ವಹಿಸಿದ್ದಾರೆ.