ತುಮಕೂರು: ಜಿಲ್ಲೆಯಲ್ಲಿ ಕಳೆದ 10 ದಿನಗಳಿಂದ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಇದು ಜಿಲ್ಲಾಡಳಿತ ಮತ್ತು ಸಾರ್ವಜನಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಸರ್ಕಾರ ತುಮಕೂರನ್ನು ಕೊರೊನಾ ಹೆಚ್ಚಾಗುತ್ತಿರುವ ಜಿಲ್ಲೆ ಎಂದು ಗುರುತಿಸಿದ್ದು, ಕಳೆದ ಹತ್ತು ದಿನಗಳಲ್ಲಿ 250ಕ್ಕೂ ಅಧಿಕ ಕೊರೊನಾ ಪ್ರಕರಣ ಪತ್ತೆಯಾಗಿವೆ. 10 ದಿನಗಳ ಅಂಕಿ ಅಂಶ ನೋಡುವುದಾದರೆ,
ಮಾ.10 ರಂದು 33 ಮಂದಿ,
ಮಾ.11 - 32 ಕೇಸ್
ಮಾ.12 - 41ಕೇಸ್
ಮಾ.13 -38 ಕೇಸ್
ಮಾ.14 -18 ಕೇಸ್
ಮಾ.15 -37 ಕೇಸ್
ಮಾ.16 -33 ಕೇಸ್
ಮಾ.17 -36 ಕೇಸ್
ಮಾ.18 -32 ಕೇಸ್
ಮಾ.19 -39 ಕೇಸ್
ಈ ಹಿಂದಿನ ನಾಲ್ಕು ತಿಂಗಳಲ್ಲಿ ಪ್ರತಿನಿತ್ಯ ಸರಾಸರಿ 10 ಮಂದಿ ಸೋಂಕಿತರು ಪತ್ತೆಯಾಗುತ್ತಿದ್ದರು. ಆದರೆ 10 ದಿನಗಳ ಈಚೆಗೆ ಅದರ ಪ್ರಮಾಣ ಮೂರು ಪಟ್ಟು ಹೆಚ್ಚಳವಾಗುತ್ತಿದ್ದು, ಸೋಂಕಿತರ ಪ್ರಮಾಣ ಏರಿಕೆಯಾಗುತ್ತಿದೆ. ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸೋಂಕನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಚಿಂತನೆ ನಡೆಸಿದೆ.