ETV Bharat / state

ಕಂಟೈನ್​ಮೆಂಟ್​ ಝೋನ್​ನಿಂದ ಮುಕ್ತಿ ಪಡೆದ ಶಿರಾ: ವ್ಯಾಪಾರ ವಹಿವಾಟಿಗೆ ಅವಕಾಶ

author img

By

Published : May 6, 2020, 4:22 PM IST

Updated : May 6, 2020, 8:24 PM IST

ಪಿ. 84 ಸೋಂಕಿತನ ಪ್ರಾಥಮಿಕ ಮತ್ತು ದ್ವಿತಿಯ ಸಂಪರ್ಕಿತರ ಸ್ಯಾಂಪಲ್​ಗಳು ನೆಗೆಟಿವ್ ಬಂದಿರುವುದರಿಂದ ಶಿರಾ ಪಟ್ಟಣದಲ್ಲಿದ್ದ ಕಂಟೈನ್​ಮೆಂಟ್ ತೆಗೆಯಲಾಗಿದೆ. ತುಮಕೂರು ನಗರದಲ್ಲಿ ಇನ್ನೂ ಎರಡು ಕಂಟೈನ್​ಮೆಂಟ್​ ಝೋನ್​ಗಳು ಇರುವುದರಿಂದ ಯಾವುದೇ ವ್ಯಾಪಾರ ವಹಿವಾಟಿಗೆ ಅವಕಾಶ ನೀಡಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದರು.

containment zone open in tumkur shira
ಶಿರಾ ಪಟ್ಟಣದ ಬೇಗಂ ಮೊಹಲ್ಲಾ

ತುಮಕೂರು: ಜಿಲ್ಲೆಯ ಶಿರಾ ಪಟ್ಟಣದ ಬೇಗಂ ಮೊಹಲ್ಲಾದಲ್ಲಿ ಕಂಟೈನ್​ಮೆಂಟ್ ಝೋನ್ ತೆರವುಗೊಳಿಸಿ ಎಲ್ಲಾ ರೀತಿಯ ವ್ಯಾಪಾರ ವಹಿವಾಟಿಗೆ ಜಿಲ್ಲಾಡಳಿತ ಅವಕಾಶ ಕಲ್ಪಿಸಿಕೊಟ್ಟಿದೆ.

ಕಂಟೈನ್​ಮೆಂಟ್​ ಝೋನ್​ನಿಂದ ಮುಕ್ತಿ ಪಡೆದ ಶಿರಾ

ಈ ಸಂಬಂಧ ಮಾತನಾಡಿದ ಜಿಲ್ಲಾಧಿಕಾರಿ ರಾಕೇಶ್​ ಕುಮಾರ್,​ ಈಗಾಗಲೇ ಪರೀಕ್ಷೆಗೆ ಕಳುಹಿಸಿದ್ದ ಪಿ. 84 ಸೋಂಕಿತನ ಪ್ರಾಥಮಿಕ ಮತ್ತು ದ್ವಿತಿಯ ಸಂಪರ್ಕಿತರ ಸ್ಯಾಂಪಲ್​ಗಳು ನೆಗೆಟಿವ್ ಬಂದಿರುವುದರಿಂದ ಶಿರಾ ಪಟ್ಟಣದಲ್ಲಿದ್ದ ಕಂಟೈನ್​ಮೆಂಟ್ ತೆಗೆಯಲಾಗಿದೆ. ತುಮಕೂರು ನಗರದಲ್ಲಿ ಇನ್ನೂ ಎರಡು ಕಂಟೈನ್​ಮೆಂಟ್​ ಝೋನ್​ಗಳು ಇರುವುದರಿಂದ ಯಾವುದೇ ವ್ಯಾಪಾರ ವಹಿವಾಟಿಗೆ ಅವಕಾಶ ನೀಡಿಲ್ಲ. ಈ ಬಗ್ಗೆ ಪರಿಶೀಲನೆ ಮಾಡಲಾಗುತ್ತಿದೆ ಎಂದರು.

ನಗದ ಪಿ. 535, ಪಿ. 591 ಸಂಪರ್ಕಿತರ 98 ಮಂದಿಯ ಸ್ಯಾಂಪಲ್​ಗಳು ನೆಗೆಟಿವ್ ಬಂದಿವೆ. ಕೇಂದ್ರ ಸರ್ಕಾರದ ಮಾರ್ಗಸೂಚಿ ಅನ್ವಯ ಜಿಲ್ಲೆಯನ್ನು ಆರೆಂಜ್ ವಲಯವೆಂದು ಗುರುತಿಸಲಾಗಿದೆ. ಅಲ್ಲದೆ ಪೂರಕ ವ್ಯಾಪಾರ ವಹಿವಾಟಿಗೆ ಅವಕಾಶ ಕಲ್ಪಿಸಿಕೊಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

Last Updated : May 6, 2020, 8:24 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.