ತುಮಕೂರು/ಪಾವಗಡ: ಪಟ್ಟಣದ ಗಂಗಮ್ಮಗುಡಿ ಬಂಡೆಯ ಪ್ರದೇಶವಾಗಿರುವ ಕಾರಣ ರಾಜಪ್ಪ ಮತ್ತು ಹನುಮಂತರಾಯಪ್ಪರವರಿಗೆ ಸ್ವಚ್ಛ ಭಾರತ ಅಭಿಯಾನದಡಿ ವೈಯಕ್ತಿಕ ಶೌಚಾಲಯಕ್ಕೆ ಹೊಸ ತಂತ್ರಜ್ಞಾನದಿಂದ ಕೂಡಿರುವ ಬಯೋಡೈಜೆಸ್ಟರ್ ಇಂಗು ಗುಂಡಿಗಳನ್ನು ನಿರ್ಮಾಣ ಮಾಡಲಾಗಿದೆ.
ಇದೇ ಪ್ರದೇಶದಲ್ಲಿ ಸುಮಾರು 5 ಸಾವಿರ ಲೀಟರ್ ಶೇಖರಣೆಯ ಬಯೋಡೈಜೆಸ್ಟರ್ ಇಂಗು ಗುಂಡಿ ಕಾಮಗಾರಿ ನಡೆಯುತ್ತಿದ್ದು, 12 ಕುಟುಂಗಳಿಗೆ ಪ್ರಯೋಜನ ಸಿಗಲಿದೆ. ಅಲ್ಲದೇ ಸುಮಾರು 20 ವರ್ಷಗಳ ಕಾಲ ಉಪಯೋಗವಿರುತ್ತದೆ. ಇದು ಯಾವುದೇ ವಾಸನೆ ಬಾರದಂತೆ ನೀರಾಗಿ ಪರಿವರ್ತನೆಗೊಂಡು ಇಂಗು ಗುಂಡಿಗೆ ಸೇರುತ್ತದೆ.
ಇನ್ನೂ ಗುಟ್ಟೆಹಳ್ಳಿಯಲ್ಲಿಯೂ ಕೂಡ ಹೊಸ ತಂತ್ರಜ್ಞಾನದ ಇಂಗು ಗುಂಡಿಗಳನ್ನು ನಿರ್ಮಾಣ ಮಾಡುತ್ತಿದ್ದು, ಅವಶ್ಯಕತೆ ಇರುವ ಕಡೆ ನಿರ್ಮಾಣ ಮಾಡಲಾಗುತ್ತದೆ.