ETV Bharat / state

ವಿಧಾನ ಪರಿಷತ್​ನಲ್ಲಿ ಹೆಚ್ ಹೊನ್ನಪ್ಪ ನಿಧನಕ್ಕೆ ಸಂತಾಪ ಸೂಚನೆ - ಈಟಿವಿ ಭಾರತ್ ಕನ್ನಡ ಸುದ್ದಿ

ವಿಧಾನ ಪರಿಷತ್ ಮಾಜಿ ಸದಸ್ಯ ಹೆಚ್ ಹೊನ್ನಪ್ಪ ಕುರಿತು ಸಭಾಪತಿ ಬಸವರಾಜ ಹೊರಟ್ಟಿ ಸಂತಾಪ ಸಂದೇಶವನ್ನು ಸದನದಲ್ಲಿ ಓದಿದರು.

ಸಭಾಪತಿ ಬಸವರಾಜ ಹೊರಟ್ಟಿ
ಸಭಾಪತಿ ಬಸವರಾಜ ಹೊರಟ್ಟಿ
author img

By

Published : Feb 15, 2023, 4:20 PM IST

ವಿಧಾನ ಪರಿಷತ್​ನಲ್ಲಿ ಹೆಚ್ ಹೊನ್ನಪ್ಪ ನಿಧನಕ್ಕೆ ಸಂತಾಪ ಸೂಚನೆ

ಬೆಂಗಳೂರು: ವಿಧಾನ ಪರಿಷತ್ ಮಾಜಿ ಸದಸ್ಯ ಹೆಚ್ ಹೊನ್ನಪ್ಪಗೆ ವಿಧಾನ ಪರಿಷತ್​ನಲ್ಲಿ ಸಂತಾಪ ಸೂಚಿಸಲಾಯಿತು. ಸಭಾಪತಿ ಬಸವರಾಜ ಹೊರಟ್ಟಿ ಸಂತಾಪ ಸಂದೇಶವನ್ನು ಸದನದಲ್ಲಿ ಓದಿದರು. 1948ರ ಮೇ 15 ರಂದು ಮಂಡ್ಯದ ಇಂಡವಾಳುನಲ್ಲಿ ಜನಿಸಿದ ಹೊನ್ನಪ್ಪನವರು ಬಿ.ಎ. ಪದವೀಧರರಾಗಿದ್ದರು. ವೃತ್ತಿಯಲ್ಲಿ ಕೃಷಿಕರಾಗಿದ್ದ ಅವರು 1998 ರಿಂದ 2004 ರ ಅವಧಿಗೆ ಸ್ಥಳೀಯ ಸಂಸ್ಥೆಯಿಂದ ಆಯ್ಕೆಯಾಗಿದ್ದರು. ಮಂಡ್ಯ ಸಕ್ಕರೆ ಕಾರ್ಖಾನೆ ಅಧ್ಯಕ್ಷರಾಗಿ, ಪಿಇಟಿ ಶಿಕ್ಷಣ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಆಗಿ, ಮಂಡ್ಯದ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಇವರ ಅಗಲಿಕೆಯಿಂದ ಒಬ್ಬ ಸಜ್ಜನ ಹಾಗೂ ಹಿರಿಯ ರಾಜಕಾರಣಿಯನ್ನು ಕಳೆದುಕೊಂಡಿದ್ದೇವೆ ಎಂಬ ಮಾಹಿತಿ ನೀಡಿದರು.

ಸಚಿವ ವಿ. ಸೋಮಣ್ಣ ಮಾತನಾಡಿ, ಸರಳ ಸಜ್ಜನಿಕೆಗೆ ಹೆಸರಾಗಿದ್ದರು. ಮಾಜಿ ಪ್ರಧಾನಿ ದೇವೇಗೌಡರ ಜತೆ ಕಾರ್ಯ ನಿರ್ವಹಿಸಿದ್ದರು. ಮಂಡ್ಯ ಭಾಗದಲ್ಲಿ ಉತ್ತಮ ಕೆಲಸ ಮಾಡಿದ್ದರು. ಮೃಧು ಭಾಷಿ, ಬಡವರ ಬಗ್ಗೆ ಉತ್ತಮ ಭಾವನೆ ಹೊಂದಿದ್ದರು. ಉತ್ತಮ ಜನಪ್ರತಿನಿಧಿ ಆಗಿದ್ದರು ಎಂದರು. ಕಾಂಗ್ರೆಸ್ ಪಕ್ಷದ ಉಪನಾಯಕ ಗೋವಿಂದರಾಜು ಮಾತನಾಡಿ, ಮಂಡ್ಯ ಜಿಲ್ಲೆಯಲ್ಲಿ ತಮ್ಮದೇ ಛಾಪು ಮೂಡಿಸಿದ್ದರು. ಅವರಂತ ಜನಪ್ರಿಯ ರಾಜಕಾರಣಿ ಅಗಲಿಕೆ ತುಂಬಲಾರದ ನಷ್ಟ. ಅಗಲಿಕೆ ನೋವು ಭರಿಸುವ ಶಕ್ತಿಯನ್ನು ಕುಟುಂಬಕ್ಕೆ ಭಗವಂತ ನೀಡಲಿ ಎಂದು ಆಶಿಸಿದರು. ಮೃತರ ಕುಟುಂಬಕ್ಕೆ ಸದನದ ಸಂತಾಪ ವಿವರಣೆ ಕಳುಹಿಸಿಕೊಡುವುದಾಗಿ ತಿಳಿಸಲಾಯಿತು. ಒಂದು ನಿಮಿಷ ಮೌನ ಸಲ್ಲಿಸಲಾಯಿತು.

ಮಾಂಸ ವಿಚಾರ ಪ್ರಸ್ತಾಪ : ರಾಜ್ಯದಿಂದ ಮಾಂಸ ರಫ್ತು ಕುರಿತು ಕಾಂಗ್ರೆಸ್ ಸದಸ್ಯ ಹರೀಶ್ ಕುಮಾರ್ ಕೇಳಿದ ಪ್ರಶ್ನೆಗೆ ಸಚಿವರು ಕಾಲಾವಕಾಶ ಕೋರಿದರು. ಇದರಿಂದ ಸದನದಲ್ಲಿದ್ದ ಸಚಿವ ಪ್ರಭು ಚೌಹಾಣ್ ವಿರುದ್ಧ ಪ್ರತಿಪಕ್ಷ ಕಾಂಗ್ರೆಸ್, ಜೆಡಿಎಸ್ ಸದಸ್ಯರು ಮುಗಿಬಿದ್ದರು. ಪ್ರಶ್ನೆ ನೀಡಿ 15 ದಿನ ಕಳೆದಿದೆ. ಒಂದು ಉತ್ತರ ತರಿಸಿಕೊಳ್ಳಲು ಆಗಲಿಲ್ಲವೇ ಎಂದು ಭೋಜೇಗೌಡರೂ ಸೇರಿದಂತೆ ಹಲವರು ಆಕ್ಷೇಪ ವ್ಯಕ್ತಪಡಿಸಿದರು. ಸಚಿವರು ಮಾತನಾಡಿ, ಮಾಹಿತಿ ಕಂದಾಯ ಇಲಾಖೆಯಿಂದ ಉತ್ತರ ತರಿಸಿಕೊಳ್ಳಬೇಕು ಎಂದರು.

ಅದಕ್ಕೆ ಆಕ್ಷೇಪ ವ್ಯಕ್ತವಾಯಿತು. ಬಿಜೆಪಿ ಸಚಿವರಾದ ಸಿ.ಸಿ. ಪಾಟೀಲ್, ಸೋಮಣ್ಣ ಸಮಾಧಾನಿಸುವ ಯತ್ನ ಮಾಡಿದರು. ಸದನವನ್ನು ನಿಯಂತ್ರಿಸಿದ ಸಭಾಪತಿ ಬಸವರಾಜ ಹೊರಟ್ಟಿ ಸಚಿವ ಸೋಮಣ್ಣ ಮಧ್ಯಪ್ರವೇಶಕ್ಕೆ ಸೂಚಿಸಿದರು. ಸೋಮಣ್ಣ ಮಾತನಾಡಿ, ಸಾಕಷ್ಟು ಸಂಯಮದಿಂದ ಸದಸ್ಯರು ನಡೆದುಕೊಳ್ಳಬೇಕು. ಆದಷ್ಟು ಬೇಗ ಉತ್ತರ ತರಿಸಿ ಕೊಡುತ್ತೇವೆ ಎಂದರು. ಸಭಾಪತಿಗಳು ಮುಂದಿನ ವಾರದಲ್ಲಿ ಉತ್ತರ ಒದಗಿಸುವಂತೆ ಸೂಚಿಸಿದರು. ಉತ್ತರ ನೀಡಿಕೆಯಲ್ಲಿ ವಿಳಂಬ ಆಗುವುದು ಬೇಡ ಎಂದರು. ಸಚಿವರು ಸಮ್ಮತಿ ಸೂಚಿಸಿದರು.

ನೈಸ್ ರಸ್ತೆ ವಿಚಾರ ಪ್ರಸ್ತಾಪ: ನಾನು ಸಚಿವನಾದ ನಂತರ ಎರಡು ಸಭೆ ನಡೆಸಿದ್ದೇನೆ. ಸಚಿವ ಸಂಪುಟದಲ್ಲಿ ಇನ್ನೂ ಮೂರ್ನಾಲ್ಕು ಸಭೆ ನಡೆಸಿ ನೈಸ್ ರಸ್ತೆ ಕಾಮಗಾರಿ ಕುರಿತು ಸರ್ಕಾರದ ನಿರ್ದೇಶನ ತಿಳಿಸಲಾಗುವುದು ಎಂದು ಸಚಿವ ಸಿ. ಸಿ ಪಾಟೀಲ್ ತಿಳಿಸಿದ್ದಾರೆ. ವಿಧಾನ ಪರಿಷತ್​ನಲ್ಲಿ ಹೆಚ್ ಎಸ್ ಗೋಪಿನಾಥ್ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿ, ತಮ್ಮ ಅಧ್ಯಕ್ಷತೆಯಲ್ಲಿ 2020 ಹಾಗೂ 2021 ರಲ್ಲಿ ಎರಡು ಸಭೆ ನಡೆದಿದೆ. ಸಮಿತಿಯ ಸಭೆಗಳು ನಡೆಯುತ್ತಿದ್ದು, ಸರ್ಕಾರಕ್ಕೆ ಅಂತಿಮ ಶಿಫಾರಸು ಸಲ್ಲಿಸಬೇಕಿದೆ. ಸಚಿವ ಸಂಪುಟ ಉಪ ಸಮಿತಿಯು ಈಗಾಗಲೇ ನಾಲ್ಕು ಸಭೆ ನಡೆಸಿದೆ. ಅಂತಿಮ ನಿರ್ಧಾರ ತೆಗೆದುಕೊಳ್ಳುವುದು ಬಾಕಿ ಇದೆ ಎಂದರು.

ಗುಂಡಿ ಮುಚ್ಚಲು ಕ್ರಮ: ಮಲೆನಾಡು ಭಾಗದಲ್ಲಿ ಮಳೆಯಿಂದ ಉಂಟಾಗಿರುವ ರಸ್ತೆ ಗುಂಡಿ ಮುಚ್ಚಲು ಕ್ರಮ ಕೈಗೊಳ್ಳುತ್ತೇವೆ ಎಂದು ಸಚಿವ ಸಿ.ಸಿ. ಪಾಟೀಲ್ ಭರವಸೆ ನೀಡಿದರು. ವಿಧಾನ ಪರಿಷತ್​ನಲ್ಲಿ ಬಿಜೆಪಿ ಸದಸ್ಯ ಡಿ. ಎಸ್ ಅರುಣ್ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿ, ರಾಜ್ಯದಲ್ಲಿ ಕಳೆದ ಎರಡು ವರ್ಷ ಅತಿವೃಷ್ಟಿ, ನೆರೆಹಾವಳಿಯಿಂದ ರಸ್ತೆಗಳು ಹಾಳಾಗಿರುವುದು ಗಮನಕ್ಕೆ ಬಂದಿದೆ. ಆದಷ್ಟು ತ್ವರಿತವಾಗಿ ಗುಂಡಿ ಮುಚ್ಚುವ ಕಾರ್ಯ ಮಾಡುತ್ತೇವೆ. 2020-21 ರಲ್ಲಿ 60,000 ಲಕ್ಷ ರೂ ಹಾಗೂ 2021-22 ರಲ್ಲಿ 61,000 ಲಕ್ಷ ರೂ. ಸೇರಿದಂತೆ 1,21,000 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ ಎಂದು ವಿವರಿಸಿದರು.

ಶಾಶ್ವತ ಕಡಲು ಕೊರೆತ ನಿಯಂತ್ರಣ ಸಾಧ್ಯ: ಕರಾವಳಿ ಭಾಗದಲ್ಲಿ ಕಡಲು ಕೊರೆತ ಸಾಮಾನ್ಯ ಶಾಶ್ವತ ಪರಿಹಾರಕ್ಕೆ ಅವಕಾಶ ಇದೆ. ಯೋಜನೆಗೆ ಪ್ರತಿ ಕಿ.ಮಿ ಗೆ 25 ಕೋಟಿ ರೂ. ವ್ಯಯವಾಗಲಿದೆ. ಇದಕ್ಕೆ ಸರ್ಕಾರದ ಮಟ್ಟದಲ್ಲಿ ಪ್ರಯತ್ನ ನಡೆಯುತ್ತಿದೆ ಎಂದು ಬಂದರು ಸಚಿವ ಎಸ್ ಅಂಗಾರ ಭರವಸೆ ಕೊಟ್ಟಿದ್ದಾರೆ. ವಿಧಾನ ಪರಿಷತ್​​ನಲ್ಲಿ ಬಿಜೆಪಿ ಸದಸ್ಯೆ ಭಾರತಿ ಶೆಟ್ಟಿ ಕೇಳಿದ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿ, ಸದ್ಯ ಪ್ರತಿ ಕಿ.ಮಿ.ಗೆ 5 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಆಗುತ್ತಿದೆ. ಇದು ಶಾಶ್ವತ ಪರಿಹಾರವಲ್ಲ.

ಆದಷ್ಟು ಶಾಶ್ವತ ಪರಿಹಾರಕ್ಕೆ ಯತ್ನಿಸುತ್ತೇವೆ ಎಂದು ಭರವಸೆ ಕೊಟ್ಟರು.ಪ್ರತಿವರ್ಷ ಕಡಲು ಕೊರೆತ ಆಗುತ್ತೆ. ಸರ್ಕಾರ ತಾತ್ಕಾಲಿಕ ಪರಿಹಾರ ಕಲ್ಪಿಸುತ್ತದೆ. ಮೀನುಗಾರರ ಹಿತದೃಷ್ಟಿಯಿಂದ ಶಾಶ್ವತ ಪರಿಹಾರ ಹುಡುಕಬೇಕು. ತೌಕ್ತೆ ಚಂಡಮಾರುತದಿಂದ ದೊಡ್ಡ ಮಟ್ಟದ ಕಡಲು ಕೊರೆತ ಆಗಿದೆ. ಅದಕ್ಕೆ ಸರ್ಕಾರ ಪರಿಹಾರ ಕಲ್ಪಿಸಬೇಕೆಂದು ಭಾರತಿ ಶೆಟ್ಟಿ ಒತ್ತಾಯಿಸಿದರು.

ಗೊಲ್ಲರ ಹಟ್ಟಿ ಮಾಹಿತಿ: ನಾನು ಸಚಿವನಾದ ಬಳಿಕ ಗೊಲ್ಲರ ಹಟ್ಟಿಗಳಿಗೆ‌ ಕಂದಾಯ ಹಕ್ಕು ಪತ್ರ ನೀಡುತ್ತಿದ್ದೇನೆ. ದಾವಣಗೆರೆಯಲ್ಲಿ ಮುಂದಿನ ವಾರ 50 ಸಾವಿರ ಕುಟುಂಬಕ್ಕೆ ಹಕ್ಕುಪತ್ರ ನೀಡುತ್ತೇವೆ. ಸಮಸ್ಯೆ ಇರುವವರಿಗೆ ಸಹಾಯ ಮಾಡುವುದು ನಮ್ಮ ಕರ್ತವ್ಯ ಎಂದು ಕಂದಾಯ ಸಚಿವ ಆರ್ ಅಶೋಕ್ ತಿಳಿಸಿದ್ದಾರೆ. ವಿಧಾನ ಪರಿಷತ್ ಕಾಂಗ್ರೆಸ್ ಸದಸ್ಯ ಎಂ. ನಾಗರಾಜು ಕೇಳಿದ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿ, ಗೊಲ್ಲರಹಟ್ಟಿಗಳಿಗೆ ಸಬ್ ರಿಜಿಸ್ಟ್ರಾರ್ ಕಚೇರಿ ಮೂಲಕ ಹಕ್ಕು ಪತ್ರ ವಿತರಿಸುತ್ತೇವೆ. ಕಂದಾಯ ಗ್ರಾಮ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುತ್ತೇವೆ. ಕಂದಾಯ ಗ್ರಾಮ ಮಾಡುವುದು ನನ್ನ ವ್ಯಾಪ್ತಿ. ಉಳಿದದ್ದು ಬೇರೆ ಇಲಾಖೆ ವ್ಯಾಪ್ತಿಗೆ ಬರಲಿದೆ ಎಂಬ ಮಾಹಿತಿ ನೀಡಿದ್ದಾರೆ.

ಎಂ. ನಾಗರಾಜು ಮಾತನಾಡಿ, ರಾಜ್ಯದಲ್ಲಿ ಕೇವಲ 197 ಗೊಲ್ಲರ ಹಟ್ಟಿ ಇದೆ ಎಂದು ಸರ್ಕಾರ ತಪ್ಪು ಮಾಹಿತಿ ನೀಡಿದೆ. ಪ್ರತಿ ತಾಲ್ಲೂಕಿನಲ್ಲಿ ಕೆಲವೆಡೆ 300 ಕ್ಕೂ ಹೆಚ್ಚು ಗೊಲ್ಲರ ಹಟ್ಟಿ ಇದೆ. ವಾಸ್ತವವನ್ನು ಸರ್ಕಾರ ಮರೆ ಮಾಚುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಇದನ್ನೂ ಓದಿ : ಬಿಜೆಪಿ ಸರ್ಕಾರದ ಅವಧಿಯಲ್ಲಿ ಬರೀ ವಸೂಲಿ ಬಾಜಿ ನಡೆಯುತ್ತಿದೆ: ಡಿಕೆಶಿ ಆರೋಪ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.