ETV Bharat / state

ಲಾಕಪ್‌ನಿಂದ ಪರಾರಿಯಾಗಿದ್ದ ಸರಗಳ್ಳನ ಬಂಧನ:10 ಲಕ್ಷ ಮೌಲ್ಯದ ಚಿನ್ನಾಭರಣ ವಶ

ಪೊಲೀಸ್ ಲಾಕಪ್‌ನಿಂದ ಎಸ್ಕೇಪ್​ ಆಗಿದ್ದ ಸರಗಳ್ಳನನ್ನು ಪುನಃ ಬಂಧಿಸುವಲ್ಲಿ ತುಮಕೂರು ಪೊಲೀಸರು ಯಶಸ್ವಿಯಾಗಿದ್ದಾರೆ.

Tumakuru
ಕಳ್ಳನ ಬಂಧನ
author img

By

Published : Aug 18, 2020, 10:43 PM IST

ತುಮಕೂರು: ಪೊಲೀಸ್ ಲಾಕಪ್‌ನಿಂದ ಪರಾರಿಯಾಗಿದ್ದ ಸರಗಳ್ಳನನ್ನು ಪೊಲೀಸರು ಮತ್ತೆ ಬಂಧಿಸಿ, ಆತನಿಂದ 10 ಲಕ್ಷ ಬೆಲೆಬಾಳುವ ಚಿನ್ನಾಭರಣವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಕಳ್ಳನ ಬಂಧನ

ಮೂಲತಃ ಮಧುಗಿರಿ ತಾಲೂಕು ಕಾಡುಗೊಂಡನಹಳ್ಳಿಯ ರಂಗಪ್ಪ ಬಂಧಿತ ಆರೋಪಿ. ಈತ ತುಮಕೂರು ನಗರದ ಅಂತರಸನಹಳ್ಳಿ ಪುಟ್ಟಮ್ಮನ ವಠಾರದಲ್ಲಿ ವಾಸವಿದ್ದ.

ಆಗಸ್ಟ್ 1ರಂದು ರಾತ್ರಿ ತುಮಕೂರು ತಾಲೂಕಿನ ಹಂಚಿಹಳ್ಳಿ ಗ್ರಾಮದ ಗಣೇಶ್ ಎಂಬುವರ ಮನೆಗೆ ನುಗ್ಗಿ ಚೈತ್ರ ಎಂಬುವರ ಕೊರಳಲ್ಲಿದ್ದ ಸರ ಕಿತ್ತುಕೊಳ್ಳಲು ಪ್ರಯತ್ನಿಸಿದ್ದಾನೆ. ಈ ಕುರಿತಂತೆ ಕೋರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೇ ರೀತಿಯ ಸರಗಳ್ಳತನ ಪ್ರಕರಣಗಳು ವಡ್ಡರಹಳ್ಳಿ, ಶಂಭೂನಹಳ್ಳಿ, ಮುದ್ದ ರಾಯನ ಪಾಳ್ಯ, ಡಿ ಕೊರಟಗೆರೆ, ಹಿರೆಗುಂಡಗಲ್, ಹಂಚಿಹಳ್ಳಿ ಗ್ರಾಮಗಳಲ್ಲಿ ನಡೆದಿತ್ತು.

ರಂಗಪ್ಪನಿಂದ 6 ಸುಲಿಗೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು 194 ಗ್ರಾಂ ತೂಕದ ಐದು ಮಾಂಗಲ್ಯ ಸರ, ಎರಡು ಚಿನ್ನದ ಸರಗಳು ಸೇರಿದಂತೆ ಒಟ್ಟು 10 ಲಕ್ಷ ಬೆಲೆಬಾಳುವ ಚಿನ್ನಾಭರಣವನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.

ಆಗಸ್ಟ್ 8ರಂದು ಈತನನ್ನು ಬಂಧಿಸಿ ಕೋರ ಪೊಲೀಸ್ ಠಾಣೆಯಲ್ಲಿ ಇರಿಸಲಾಗಿತ್ತು. ಆದರೆ ರಾತ್ರಿ 10.20ರ ಸಮಯದಲ್ಲಿ ಠಾಣೆಯಿಂದ ಪರಾರಿಯಾಗಿದ್ದ. ನಂತರ ಈತನ ಬಂಧನಕ್ಕೆ ವಿಶೇಷ ಪೊಲೀಸ್ ತಂಡ ರಚಿಸಲಾಗಿತ್ತು. ಆಗಸ್ಟ್ 18ರಂದು ಆರೋಪಿಯನ್ನು ಮಧುಗಿರಿ ತಾಲೂಕಿನ ಮರುವೇಕೆರೆ ಗ್ರಾಮದಲ್ಲಿ ಬಂಧಿಸಲಾಗಿದೆ. ಈತನ ಕೋರಾ ಪೊಲೀಸ್ ಠಾಣೆಯಲ್ಲಿ 7 ಪ್ರಕರಣ ದಾಖಲಾಗಿವೆ. ಬೆಂಗಳೂರಿನ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ 11 ಸುಲಿಗೆ ಪ್ರಕರಣಗಳಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.