ತುಮಕೂರು: ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ.ಜಯಚಂದ್ರ ಪರ ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತಬೇಟೆ ನಡೆಸಿದರು.
ಕಾಡಜ್ಜನ ಪಾಳ್ಯ, ಹುಣಸೆಹಳ್ಳಿ ಗ್ರಾಮ ಪಂಚಾಯತ್, ಯರವರಹಳ್ಳಿ, ಹೊಸೂರು ಗ್ರಾ. ಪಂಚಾಯತ್, ಬೇವಿನಹಳ್ಳಿ, ಚಂಗಾವರ ಗ್ರಾ.ಪಂಚಾಯತ್, ದ್ವಾರನಕುಂಟೆ ಗ್ರಾ.ಪಂಚಾಯತ್, ವಾಜರಹಳ್ಳಿ, ನೇಜಂತಿ ಗ್ರಾಮ, ಹುಲಿಕುಂಟೆ ಗ್ರಾ.ಪಂಚಾಯತ್ ವ್ಯಾಪ್ತಿಯಲ್ಲಿ ಸಿದ್ದರಾಮಯ್ಯ ಚುನಾವಣಾ ಪ್ರಚಾರ ನಡೆಸಿದರು.
ಈ ಪ್ರಚಾರ ಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಯಚಂದ್ರ, ಕಾಂಗ್ರೆಸ್ ಮುಖಂಡ ಕೆ.ಎನ್.ರಾಜಣ್ಣಇದ್ದರು.