ತುಮಕೂರು : ಪ್ರೀತಿಸಲು ನಿರಾಕರಿಸಿದ ಯುವತಿಯನ್ನು ಭಗ್ನ ಪ್ರೇಮಿಯೊಬ್ಬ ಚೂರಿಯಿಂದ ಇರಿದು ಕೊಂದಿರುವ ಘಟನೆ ತುಮಕೂರು ಜಿಲ್ಲೆ ಶಿರಾ ತಾಲೂಕಿನ ದೊಡ್ಡಗುಳ್ಳದಲ್ಲಿ ನಡೆದಿದೆ.
ದೊಡ್ಡಗುಳ್ಳ ನಿವಾಸಿ ಈರಣ್ಣ ಚೂರಿಯಿಂದ ಇರಿದ ಭಗ್ನ ಪ್ರೇಮಿ. ಅನೇಕ ದಿನಗಳಿಂದ ಯುವತಿಯನ್ನು ಪ್ರೀತಿಸುವಂತೆ ಪೀಡಿಸುತ್ತಿದ್ದ. ಇದಕ್ಕೆ ಯುವತಿ ನಿರಾಕರಿಸಿದ್ದಳು. ಇದರಿಂದ ಕುಪಿತಗೊಂಡ ಈರಣ್ಣ ಇಂದು ಯುವತಿ ಕಾಲೇಜಿಗೆ ಹೋಗುತ್ತಿದ್ದ ವೇಳೆ ಹಿಂಬಾಲಿಸಿ ಆಕೆಗೆ ತಾಳಿ ಕಟ್ಟಲು ಪ್ರಯತ್ನಿಸಿದ್ದಾನೆ.
ಇದಕ್ಕೆ ಒಪ್ಪದ ಯುವತಿಯನ್ನು ಮಾರಕಾಸ್ತ್ರದಿಂದ ಇರಿದು ಕೊಲೆಗೈದಿದ್ದಾನೆ ಎಂದು ತಿಳಿದು ಬಂದಿದೆ. ಸ್ಥಳೀಯರು ಸಮೀಪ ತೆರಳುತ್ತಿದ್ದಂತೆ ಈರಣ್ಣ ಸ್ಥಳದಿಂದ ಪರಾರಿಯಾಗಿದ್ದಾನೆ. ಈ ಸಂಬಂಧ ಕಳ್ಳಂಬೆಳ್ಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಓದಿ: ಕಲ್ಯಾಣ ಮಂಟಪಕ್ಕೆ ಕಿರಾಣಿ ಸಾಮಾನು ಇರಿಸಿ ಬರುವಾಗ ಅಪಘಾತ: ವಧುವಿನ ಅಣ್ಣನ ದುರ್ಮರಣ!