ತುಮಕೂರು: ಫೆಡರೇಷನ್ ಆಫ್ ಕರ್ನಾಟಕ ಆಟೋರಿಕ್ಷಾ ಡ್ರೈವರ್ ಯೂನಿಯನ್ಸ್ ಹಾಗೂ ಸಿಐಟಿಯು ಸಹಯೋಗದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.
ಆಟೋ ಚಾಲಕರಿಗೆ ವಸತಿ ಸೌಲಭ್ಯ, ವೈದ್ಯಕೀಯ ಸೌಲಭ್ಯ, ವೃದ್ಧಾಪ್ಯ ಸಮಯದಲ್ಲಿ ಕನಿಷ್ಠ ಪಿಂಚಣಿ ಸೌಲಭ್ಯ, ಆಟೋಚಾಲಕರ ಮಕ್ಕಳ ವಿದ್ಯಾಭ್ಯಾಸಕ್ಕೆ ವಿದ್ಯಾರ್ಥಿ ವೇತನ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ಸಿಐಟಿಯು ಮುಖಂಡ ಸುಬ್ರಮಣ್ಯ ಮಾತನಾಡಿ, ಕೇಂದ್ರದ ಮೋಟಾರು ವಾಹನ ಕಾಯ್ದೆಯನ್ನು ತಿದ್ದುಪಡಿ ಮಾಡಬೇಕು, ಆಟೋರಿಕ್ಷಾ ಪರವಾನಿಗೆ ನೀಡುವಾಗ ವಿದ್ಯಾರ್ಹತೆ ಕಡ್ಡಾಯ ಎಂಬುದನ್ನು ಕೈಬಿಡಬೇಕು. ಆಟೋ ಚಾಲಕರ ಕುಟುಂಬಕ್ಕೆ ಇಎಸ್ಐ ಸೌಲಭ್ಯ ನೀಡಬೇಕು, 60 ವರ್ಷ ಮೇಲ್ಪಟ್ಟವರಿಗೆ ಪಿಂಚಣಿ ವೇತನ ನೀಡುವಂತಾಗಬೇಕು ಎಂದು ಒತ್ತಾಯಿಸಿದರು.