ತುಮಕೂರು : ಜಿಲ್ಲೆಯ ಮಧುಗಿರಿ ತಾಲೂಕು ಕಚೇರಿ ಎದುರು ನಡೆಯುತ್ತಿದ್ದ ರೈತರ ಪ್ರತಿಭಟನೆ ವೇಳೆ ಅಡ್ಡಿಪಡಿಸಿದ ಮಾನಸಿಕ ಅಸ್ವಸ್ಥನನ್ನು ಸೆರೆಹಿಡಿಯಲು ಯತ್ನಿಸಿದ ಪೊಲೀಸರ ಮೇಲೆ ಆತ ಹಲ್ಲೆಗೆ ಮುಂದಾಗಿದ್ದು, ಬಳಿಕ ಆತನನ್ನು ಹಿಡಿದಿರುವ ಘಟನೆ ನಡೆದಿದೆ.
ಮಧುಗಿರಿಯ ತುಂಗೋಟಿ ಗ್ರಾಮದ ರಂಗರಾಜು ಎಂಬಾತನನ್ನು ಪೊಲೀಸರು ಬಂಧಿಸಿ, ಆ್ಯಂಬುಲೆನ್ಸ್ನಲ್ಲಿ ಬೆಂಗಳೂರಿನ ನಿಮ್ಹಾನ್ಸ್ಗೆ ಕರೆದುಕೊಂಡು ಹೋಗಿದ್ದಾರೆ.
ಪ್ರತಿಭಟನೆ ನಡೆಸುತ್ತಿದ್ದ ರೈತರ ಬಳಿ ತೆರಳಿದ ರಂಗರಾಜು ಅವರಿಂದ, ಮೈಕನ್ನು ಕಿತ್ತುಕೊಳ್ಳಲು ಯತ್ನಿಸುತ್ತಿದ್ದ ವೇಳೆ ಪೊಲೀಸರು ಮಧ್ಯಪ್ರವೇಶಿಸಿ ಆತನನ್ನು ಹಿಡಿಯಲು ಪ್ರಯತ್ನಿಸಿದರು.
ಇದನ್ನೂ ಓದಿ: ಅಶ್ಲೀಲ ಸಂದೇಶ ರವಾನಿಸುತ್ತಿದ್ದವನಿಗೆ ಯುವತಿಯಿಂದ ಬಿಸಿ ಬಿಸಿ ಕಜ್ಜಾಯ.. ವಿಡಿಯೋ
ಆದರೆ, ಆತನ ಕಾಲಲ್ಲಿದ್ದ ಶೂ ತೆಗೆದು ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ನಂತರ ಸುತ್ತುವರಿದ 5ಮಂದಿ ಪೊಲೀಸರು ಆತನನ್ನು ಸೆರೆ ಹಿಡಿದರು.