ETV Bharat / state

ತುಮಕೂರು ಹೂವಿನ ಮಾರುಕಟ್ಟೆಗೂ ತಟ್ಟಿದ ಗ್ರಹಣ ಬಿಸಿ

author img

By

Published : Dec 28, 2019, 5:14 PM IST

ಸೂರ್ಯಗ್ರಹಣದ ಮೂಢನಂಬಿಕೆಯಿಂದ ಮಾರುಕಟ್ಟೆಯಲ್ಲಿ ಕುಸಿದ ಕನಕಾಂಬರ ಹೂವಿನ ಆವಕ. ಕೆಲವೇ ರೈತರಿಗೆ ದಿಢೀರ್​ ಬೆಲೆ ಏರಿಕೆಯಿಂದ ಸಂತಸ.

A solar eclipse effect to flower market in tumkur
ತುಮಕೂರು ಹೂವಿನ ಮಾರುಕಟ್ಟೆಗೂ ತಟ್ಟಿದ ಗ್ರಹಣ ಬಿಸಿ

(ತೆಗೆದುಕೊಳ್ಳುಬಹುದು)

ತುಮಕೂರು: ಸೂರ್ಯಗ್ರಹಣದ ವೇಳೆ ಜನರಲ್ಲಿ ಹಲವು ರೀತಿಯ ಮೂಢನಂಬಿಕೆಗಳು ಚಾಲ್ತಿಯಲ್ಲಿವೆ. ಇನ್ನೊಂದೆಡೆ ಪುಷ್ಪೋದ್ಯಮದ ಮೇಲೂ ಗ್ರಹಣದ ಪರಿಣಾಮ ಬೀರಿದೆ. ಬಯಲುಸೀಮೆ ತುಮಕೂರು ಜಿಲ್ಲೆಯ ರೈತರ ಕೈ ಹಿಡಿದಿರುವ ಕನಕಾಂಬರ ಹೂವಿನ ಬೆಳೆ ಮೇಲೂ ಗ್ರಹಣ ತನ್ನ ಪರಿಣಾಮ ಬೀರಿದೆ.

ತುಮಕೂರು ಹೂವಿನ ಮಾರುಕಟ್ಟೆಗೂ ತಟ್ಟಿದ ಗ್ರಹಣ ಬಿಸಿ

ಸೂರ್ಯಗ್ರಹಣದ ದಿನ ಕನಕಾಂಬರ ಹೂವುಗಳನ್ನು ತೋಟಗಳಲ್ಲಿ ರೈತರು ಬಿಡಿಸಲು ಮುಂದಾಗಿಲ್ಲ. ಮಾರುಕಟ್ಟೆಗೆ ಕನಿಷ್ಠ ಪ್ರಮಾಣದ ಹೂವು ಆವಕವಾಗಿದೆ. ಕನಿಷ್ಠ ಆವಕವಾಗಿದ್ದರಿಂದ ಕನಕಾಂಬರ ಹೂ ತಂದಿದ್ದ ಕೆಲವೇ ರೈತರಿಗೆ ಬಂಪರ್ ಬೆಲೆ ಲಭಿಸಿದೆ. ಗುರುವಾರ ಮಾರುಕಟ್ಟೆಯಲ್ಲಿ ಕನಕಾಂಬರ ಹೂಗೆ ಬರೋಬ್ಬರಿ ₹800 ಕೆಜಿಗೆ ಬಿಕರಿಯಾಗಿದೆ. ಉಳಿದ ದಿನಗಳಲ್ಲಿ ₹200ರಿಂದ ₹300 ಬಂದರೆ ಅದೇ ಹೆಚ್ಚು.

ಒಟ್ಟಾರೆ ಸೂರ್ಯ ಗ್ರಹಣದ ಮೂಢನಂಬಿಕೆ ಕನಕಾಂಬರ ಬೆಳೆದ ಹಲವು ರೈತರಿಗೆ ನಷ್ಟ ತಂದರೆ, ಕೆಲವು ರೈತರಿಗೆ ಒಳ್ಳೆಯ ಲಾಭ ಲಭಿಸಿದೆ.

Intro:Body:ತುಮಕೂರು
ಸೂರ್ಯ ಗ್ರಹಣದ ವೇಳೆ ಜನರು ಈಗಾಗಲೇ ಹಲವು ರೀತಿಯ ಮೂಢನಂಬಿಕೆಗಳನ್ನು ಆಚರಣೆ ಮಾಡಿರುವುದು ಈಗಾಗಲೇ ಬೆಳಕಿಗೆ ಬಂದಿದೆ ಇನ್ನೊಂದೆಡೆ ಪುಷ್ಪೋದ್ಯಮದ ಮೇಲೂ ಕೂಡ ಇದು ಪರಿಣಾಮ ಬೀರಿದೆ ಎಂದರೆ ತಪ್ಪಾಗಲಾರದು.
ತುಮಕೂರು ಜಿಲ್ಲೆಯ ಬಯಲುಸೀಮೆ ಪ್ರದೇಶದಲ್ಲಿ ರೈತರ ಕೈ ಹಿಡಿದಿರುವ ಕನಕಾಂಬರ ಹೂವಿನ ಬೆಳೆ ಮೇಲೂ ಇದು ಪರಿಣಾಮ ಬೀರಿದೆ.

ಸೂರ್ಯ ಗ್ರಹಣದ ದಿನ ಕನಕಾಂಬರ ಹೂವುಗಳನ್ನು ತೋಟಗಳಲ್ಲಿ ರೈತರು ಬಿಡಿಸಲು ಮುಂದಾಗಿಲ್ಲ. ಹೀಗಾಗಿ ಸೂರ್ಯ ಗ್ರಹಣದ ದಿನ ಮಾರುಕಟ್ಟೆಗೆ ಕನಿಷ್ಠ ಪ್ರಮಾಣದ ಹೂವು ಆವಕವಾಗಿತ್ತು. ಇದರಿಂದಾಗಿ ಮಾರುಕಟ್ಟೆಗೆ ಕನಕಾಂಬರ ಹೂ ತಂದಿದ್ದ ಕೆಲವೇ ರೈತರಿಗೆ ಬಂಪರ್ ಬೆಲೆ ಲಭಿಸಿದೆ. ಗುರುವಾರ ಮಾರುಕಟ್ಟೆಯಲ್ಲಿ ಕನಕಾಂಬರ ಹೂ ಕೆಜಿಗೆ 900ರೂ ಗಳವರೆಗೂ ಬಿಕರಿಯಾಗಿದೆ.
ಬೈಟ್: ರಘುಪತಿ, ಕನಕಾಂಬರ ಹೂ ಬೆಳೆಗಾರ.(ಕೆಂಪು ಚಕ್ಸ್ ಶರ್ಟ್ ಧರಿಸಿದ್ದಾರೆ....

ಆದರೆ ಸೂರ್ಯಗ್ರಹಣದ ಮಾರನೆ ದಿನ ಶುಕ್ರವಾರ ಸಾಕಷ್ಟು ಪ್ರಮಾಣದಲ್ಲಿ ಕನಕಾಂಬರ ಹೂವು ಮಾರುಕಟ್ಟೆಗೆ ಆವಕವಾಗಿದೆ. ಸಹಜವಾಗಿಯೇ ಕನಕಾಂಬರ ಹೂವಿನ ಬೆಲೆ ಕುಸಿದುಹೋಗಿದೆ. ಸೂರ್ಯ ಗ್ರಹಣದ ದಿನ ಬಂಪರ್ ಬೆಲೆಗೆ ಮಾರಾಟವಾಗಿದ್ದ ಕನಕಾಂಬರ ಶುಕ್ರವಾರ ಕೆಜಿಗೆ ಕೇವಲ 290 ರಿಂದ300 ರೂ ವರೆಗೆ ಬಿಕರಿಯಾಗಿದೆ. ಇನ್ನು ಗ್ರಹಣದ ದಿನ ಹಲವು ರೀತಿಯ ಮೂಢನಂಬಿಕೆಗೆ ಒಳಗಾಗಿ ಕನಕಾಂಬರ ಹೂಗಳನ್ನು ತೋಟಗಳಿಗೆ ತೆರಳಿ ಬಿಡಿಸದೆ ಸುಮ್ಮನಿದ್ದ ರೈತರು ಶುಕ್ರವಾರ ಕೈಕೈ ಹಿಸುಕಿಕೊಳ್ಳುವಂತಾಯಿತು.
ಬೈಟ್: ಮಲ್ಲಿಕಾರ್ಜುನ್, ಕನಕಾಂಬರ ಹೂ ಬೆಳೆಗಾರ(ಕೆಂಪು ಶರ್ಟ್ ಧರಿಸಿದ್ದಾರೆ...)

ಒಟ್ಟಾರೆ ಸೂರ್ಯ ಗ್ರಹಣದ ವೇಳೆ ಮೂಡನಂಬಿಕೆ ಒಳಗಾಗಿದ್ದ ಕೆಲ ಕನಕಾಂಬರ ಹೂವು ಬೆಳೆದ ರೈತರಿಗೆ ಮಾತ್ರ ಸಾಕಷ್ಟು ನಷ್ಟ ಸಂಭವಿಸಿರುವುದು ಸ್ಪಷ್ಟವಾಗಿದೆ ಎಂದು ಹೇಳಬಹುದಾಗಿದೆConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.