ETV Bharat / state

ಇಸ್ಪೀಟ್ ಆಡುತ್ತಿದ್ದವರನ್ನು ಪ್ರಶ್ನಿಸಲು ಹೋದ ತಹಶೀಲ್ದಾರ್ ಮೇಲೆಯೇ ಹಲ್ಲೆ ಯತ್ನ! - ಇಸ್ಪೀಟ್ ಆಡುತ್ತಿದ್ದವರನ್ನು ಪ್ರಶ್ನಿಸಲು ಹೋದ ತಹಶೀಲ್ದಾರ್ ಮೇಲೆಯೇ ಹಲ್ಲೆ

ಲಾಕ್​ಡೌನ್ ಚೆಕ್ ಪೋಸ್ಟ್ ವೀಕ್ಷಣೆಗೆ ಇಒ ಅವರೊಂದಿಗೆ ತಹಶೀಲ್ದಾರ್ ತೆರೆಳುತ್ತಿದ್ದ ವೇಳೆ ಮಾರ್ಗ ಮಧ್ಯೆ ಕೆಂಕೆರೆ ಗ್ರಾಮದ ಶಾಲಾ ಆವರಣದಲ್ಲಿ ಇಸ್ಪೀಟ್ ಆಡುತ್ತಿದ್ದ ಬಗ್ಗೆ ಗಮನಿಸಿ ಸ್ಥಳಕ್ಕೆ ತೆರಳಿದ್ದರು. ಕೋವಿಡ್ ನಿಯಮಾವಳಿ ಜಾರಿ ನಡುವೆ ಇಸ್ಪೀಟ್ ಆಡುತ್ತಿದ್ದವರನ್ನು ಪ್ರಶ್ನಿಸಲು ಹೋದ ತಹಶೀಲ್ದಾರ್ ಮೇಲೆಯೇ ಪುಂಡರ ಗುಂಪು ಹಲ್ಲೆಗೆ ಯತ್ನಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಪರಾರಿಯಾಗಿದೆ ಎನ್ನಲಾಗಿದೆ.

A group of men attack on Tahsildar
ಇಸ್ಪೀಟ್ ಆಡುತ್ತಿದ್ದವರನ್ನು ಪ್ರಶ್ನಿಸಲು ಹೋದ ತಹಶೀಲ್ದಾರ್ ಮೇಲೆಯೇ ಹಲ್ಲೆ
author img

By

Published : May 26, 2021, 12:56 PM IST

ತುಮಕೂರು: ಕೋವಿಡ್ ನಿಯಮಾವಳಿ ಜಾರಿ ನಡುವೆ ಇಸ್ಪೀಟ್ ಆಡುತ್ತಿದ್ದವರನ್ನು ಪ್ರಶ್ನಿಸಲು ಹೋದ ಚಿಕ್ಕನಾಯಕನಹಳ್ಳಿ ತಹಶೀಲ್ದಾರ್ ಮೇಲೆಯೇ ಪುಂಡರ ಗುಂಪು ಹಲ್ಲೆಗೆ ಯತ್ನಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಪರಾರಿಯಾಗಿರುವ ಘಟನೆ ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕು ಕೆಂಕೆರೆ ಗ್ರಾಮದಲ್ಲಿ ನಡೆದಿದೆ.

ಲಾಕ್​ಡೌನ್ ಚೆಕ್ ಪೋಸ್ಟ್ ವೀಕ್ಷಣೆಗೆ ಇಒ ಅವರೊಂದಿಗೆ ತಹಶೀಲ್ದಾರ್ ತೆರೆಳುತ್ತಿದ್ದ ವೇಳೆ ಮಾರ್ಗ ಮಧ್ಯೆ ಕೆಂಕೆರೆ ಗ್ರಾಮದ ಶಾಲಾ ಆವರಣದಲ್ಲಿ ಇಸ್ಪೀಟ್ ಆಡುತ್ತಿದ್ದ ಬಗ್ಗೆ ಗಮನಿಸಿ ಸ್ಥಳಕ್ಕೆ ತೆರಳಿದ್ದರು. ಸುಮಾರು 10 ಮಂದಿ ಮದ್ಯಪಾನ ಮಾಡಿ ಇಸ್ಪೀಟ್ ಆಡುತ್ತಿದ್ದರು. ಲಾಕ್​ಡೌನ್ ಇದೆ, ಮನೆಗೆ ಹೋಗಿ ಎಂದು ಸೂಚನೆ ನೀಡಿದ್ದರು. ಆದರೆ ಈ ವೇಳೆ ಪುಂಡರು ತಹಶೀಲ್ದಾರ್ ಅವರನ್ನೇ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅವರ ಮೇಲೆ ಪ್ಲಾಸ್ಟಿಕ್ ಬಾಟಲ್​ಗಳನ್ನು ಎಸೆದು ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಇಸ್ಪೀಟ್ ಆಡುತ್ತಿದ್ದವರನ್ನು ಪ್ರಶ್ನಿಸಲು ಹೋದ ತಹಶೀಲ್ದಾರ್ ಮೇಲೆಯೇ ಹಲ್ಲೆ ಯತ್ನ

ಸ್ವತಃ ತಹಶೀಲ್ದಾರ್ ತೇಜಸ್ವಿನಿ ಅವರೇ ಘಟನೆಯನ್ನು ಹುಳಿಯಾರು ಶಾಲಾ ಆವರಣದಲ್ಲಿ ನಡೆದ ಕೋವಿಡ್ ಟಾಸ್ಕ್ ಫೋರ್ಸ್​ ಸಭೆಯಲ್ಲಿ ಸಚಿವ ಮಾಧುಸ್ವಾಮಿ ಅವರಿಗೆ ವಿವರಿಸಿದರು. ಈ ಬಗ್ಗೆ ತಾಪಂ ಇಒ ಹಾಗೂ ಪೊಲೀಸರಿಗೆ ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ ಎಂದು ಸಚಿವ ಮಾಧುಸ್ವಾಮಿ ಎದುರು ತಹಶೀಲ್ದಾರ್ ಅಸಹಾಯಕತೆ ವ್ಯಕ್ತಪಡಿಸಿದರು.

ತಕ್ಷಣ ಸಚಿವರು, ‘ಪೊಲೀಸರಿಗೆ ತಾಲೂಕು ಮ್ಯಾಜಿಸ್ಟ್ರೇಟ್ ಮೇಲೆ ಹಲ್ಲೆಗೆ ಯತ್ನ ಮಾಡಿರುವವರನ್ನು ಬಿಟ್ಟೀದ್ದಿರಲ್ರಿ. ಯಾರಿಗೋ ಹೆದರಿಕೊಂಡು ಆಡಳಿತ ಮಾಡೋದೇನ್ರಿ. ತಕ್ಷಣ ಅವರನ್ನು ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಸೂಚಿಸಿದರು.

ಕೆಲ ಗ್ರಾಮಸ್ಥರು ಮಧ್ಯರಾತ್ರಿಯಲ್ಲಿ ಫೋನ್ ಮಾಡಿ ಏಕವಚನದಲ್ಲಿ ಬಾಯಿಗೆ ಬಂದಂತೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ ಎಂದು ಸಭೆಯಲ್ಲಿ ತಾಲೂಕು ವೈದ್ಯಾಧಿಕಾರಿ ಹಾಗೂ ಇಒ ತಮ್ಮ ಅಳಲು ತೋಡಿಕೊಂಡರು. ಅವಾಚ್ಯ ಶಬ್ದಗಳಿಂದ ನಿಂದಿಸುವರ ರೆಕಾರ್ಡ್​ ಮಾಡಿ ದೂರು ದಾಖಲಿಸಿ, ಪುಂಡಾಟಿಕೆ ಮಟ್ಟ ಹಾಕುವಂತೆ ಸಚಿವರು ಪೊಲೀಸರಿಗೆ ಸೂಚನೆ ನೀಡಿದರು.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.