ತುಮಕೂರು: ಮದುವೆಯಾದ ನಂತರ ನಮ್ಮ ಅತ್ತೆಯವರು ನನ್ನ ಪತಿ ಶಂಕರಪ್ಪನ ಮಾತನ್ನು ಕೇಳುತ್ತಿರಲಿಲ್ಲ. ಹೀಗಾಗಿ ಇದರಿಂದ ಮನನೊಂದು ಅವರು ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪತ್ನಿ ಮೇಘನಾ ತಿಳಿಸಿದ್ದಾರೆ. 5 ತಿಂಗಳ ಹಿಂದಷ್ಟೇ ತನಗಿಂತ 20 ವರ್ಷ ವಯಸ್ಸಿನ ಚಿಕ್ಕ ಯುವತಿಯನ್ನು ಮದುವೆಯಾಗಿ ಸಾಕಷ್ಟು ಸುದ್ದಿ ಮಾಡಿದ್ದ ಜಿಲ್ಲೆಯ ಕುಣಿಗಲ್ ತಾಲೂಕಿನ ಅಕ್ಕಿಮರಿ ಪಾಳ್ಯದ ಶಂಕರಪ್ಪ ಕೌಟುಂಬಿಕ ಕಲಹದಿಂದ ಬೇಸತ್ತು ಆತ್ಮಹತ್ಯೆಗೆ ಶರಣಾಗಿರುವ ಬಗ್ಗೆ ಪತ್ನಿ ಹೇಳಿಕೆ ನೀಡಿದ್ದಾರೆ.
5 ತಿಂಗಳು 15 ದಿನಗಳ ಹಿಂದೆ ಮದುವೆಯಾಗಿತ್ತು. ನಮ್ಮ ಅತ್ತೆ ಹೆಸರಿನಲ್ಲಿಯೇ ಎಲ್ಲಾ ಜಮೀನು ಇತ್ತು. ಹಾಗಾಗಿ ಇದರ ಬಗ್ಗೆ ನಾವು ಮಾತನಾಡಿರಲಿಲ್ಲ. ಹೀಗಾಗಿ ಬೆಂಗಳೂರಿಗೆ ತೆರಳಿ ನೆಮ್ಮದಿಯಿಂದ ಜೀವನ ಮಾಡೋಣ. ಯಾವುದಾರು ಫ್ಯಾಕ್ಟರಿಗೆ ಕೆಲಸಕ್ಕೆ ಸೇರಿಕೊಳ್ಳಿ. ನಾನು ಫ್ಯಾಕ್ಟರಿಗೆ ಹೋಗುತ್ತೇನೆ. ಆದರೆ ಜಮೀನು ಮಾರಿ ಬೆಂಗಳೂರಿಗೆ ಹೋಗೋಣ ಎಂದು ಹೇಳಿರಲಿಲ್ಲ ಎಂದು ಮೇಘನಾ ತಿಳಿಸಿದ್ದಾರೆ.
ಇನ್ನೊಂದೆಡೆ ರಂಗಮ್ಮ ಹೇಳಿಕೆ ಪ್ರಕಾರ, ಬೆಂಗಳೂರಿಗೆ ಹೋಗೋಣ ಎಂದು ಮೇಘನಾ ಒತ್ತಾಯಿಸುತ್ತಿದ್ದಳು. ಜಮೀನು ಶಂಕರಪ್ಪನ ಹೆಸರಿಗೆ ಮಾಡಿಸಿಕೊಡಿ ಎಂದು ಆಗ್ರಹಿಸುತ್ತಿದ್ದಳು. ನನ್ನ ಮಗ ಶಂಕ್ರಾ ಚೆನ್ನಾಗಿದ್ದ. ಆದ್ರೆ ಈಕೆ ಮದುವೆಯಾದ 3 ತಿಂಗಳಿಗೆ ಬೇರೆ ಹೋಗೋಣ ಎಂದು ಒತ್ತಾಯಿಸುತ್ತಿದ್ದಳು ಎಂದು ಶಂಕರಪ್ಪನ ತಾಯಿ ಆರೋಪಿಸಿದ್ದಾರೆ.
ಘಟನೆ: ಶಂಕರಪ್ಪ ತನ್ನ ಗ್ರಾಮದ ಹೊಲವೊಂದರಲ್ಲಿ ಎರಡು ದಿನಗಳ ಹಿಂದೆ ಮರಕ್ಕೆ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. 2021ರ ಅಕ್ಟೋಬರ್ನಲ್ಲಿ ಸಂತೆಮಾವತ್ತೂರು ಗ್ರಾಮದ ಮೇಘನಾ ಎಂಬ ಯುವತಿಯನ್ನು ಅಕ್ಕಿಮರಿ ಪಾಳ್ಯದ ಶಂಕರಣ್ಣ ಮದುವೆಯಾಗಿದ್ದರು. ವಿವಾಹದ ಸಂದರ್ಭ ವಿವಾಹದ ಸಂದರ್ಭ 45 ವರ್ಷ ವಯಸ್ಸಿನವನಾದರೂ ಶಂಕರಪ್ಪ ಅವರಿಗೆ ಮದುವೆ ಆಗಿರಲಿಲ್ಲ. ಇದನ್ನು ಮನಗಂಡಿದ್ದ ಮೇಘನಾ ತನ್ನನ್ನು ಮದುವೆಯಾಗುವಂತೆ ಪ್ರಸ್ತಾಪ ಇರಿಸಿದ್ದಳಂತೆ. ಇದಕ್ಕೆ ಒಪ್ಪಿದ ಶಂಕರಪ್ಪ ಗ್ರಾಮದ ದೇವಾಲಯದಲ್ಲಿ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈ ಮದುವೆ ಸಾಕಷ್ಟು ಚರ್ಚೆಗೂ ಗ್ರಾಸವಾಗಿತ್ತಲ್ಲದೆ, ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿತ್ತು.
ಹುಲಿಯೂರುದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು: ವಿವಾಹದ ಸಂದರ್ಭ ಇನ್ನೊಂದೆಡೆ ಮೇಘನಾಗೆ ಈ ಹಿಂದೆ ಬೇರೊಬ್ಬರ ಜೊತೆ ಮದುವೆಯಾಗಿತ್ತು. ಕಳೆದ ಎರಡು ವರ್ಷದಿಂದ ಪತಿ ಕಾಣೆಯಾಗಿದ್ದು, ಪತ್ನಿಯನ್ನು ನೋಡಲು ಬಂದಿರಲಿಲ್ಲ. ಇದರಿಂದ ಬೇಸತ್ತ ಮೇಘನಾ ಶಂಕರಪ್ಪ ಅವರನ್ನು ವರಿಸಿದ್ದಳು. ಆದರೆ, ಅನೇಕ ದಿನಗಳಿಂದ ಅತ್ತೆ-ಸೊಸೆ ನಡುವೆ ನಿರಂತರ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಮುಖ್ಯವಾಗಿ ಶಂಕರಪ್ಪನ ಅವರ ಹೆಸರಿನಲ್ಲಿ ಇದ್ದ 2.5 ಎಕರೆ ಜಮೀನನ್ನು ಮಾರಾಟ ಮಾಡುವಂತೆ ಮೇಘನಾ ಒತ್ತಾಯಿಸಿದ್ದರು ಎನ್ನಲಾಗ್ತಿದೆ. ಆದರೆ, ಇದಕ್ಕೆ ಅತ್ತೆ ಒಪ್ಪಿರಲಿಲ್ಲ. ಇದೇ ಕಾರಣದಿಂದ ಬೇಸತ್ತು ಶಂಕರಪ್ಪ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಲಾಗ್ತಿದೆ. ಈ ಸಂಬಂಧ ಹುಲಿಯೂರುದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಮೈಸೂರಿನಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿ ಸಾವು: ನೊಂದ ತಾಯಿಯ ಆಕ್ರಂದನ