ತುಮಕೂರು: ಕಲ್ಪತರು ನಾಡು ತುಮಕೂರು ಜಿಲ್ಲೆಯಲ್ಲಿ ಇಂದು ನಾಲ್ವರು ಗರ್ಭಿಣಿಯರು, 60 ವರ್ಷ ಮೇಲ್ಪಟ್ಟ 38 ವೃದ್ಧರು ಸೇರಿದಂತೆ 266 ಮಂದಿಗೆ ಕೊರೊನಾ ತಗುಲಿದ್ದು, ಸೋಂಕಿತರ ಸಂಖ್ಯೆ 5,017ಕ್ಕೆ ಏರಿಕೆಯಾಗಿದೆ. ಸೋಂಕಿಗೆ ನಾಲ್ವರು ಬಲಿಯಾಗಿದ್ದಾರೆ.
ಇಂದು ತುಮಕೂರು ತಾಲೂಕಿನಲ್ಲಿ 110 ಮಂದಿಗೆ ಸೋಂಕು ತಗುಲಿದೆ, ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ 32 ಮಂದಿಗೆ, ತಿಪಟೂರು ತಾಲೂಕಿನಲ್ಲಿ 29 ಮಂದಿಗೆ, ಗುಬ್ಬಿ ತಾಲೂಕಿನಲ್ಲಿ 24 ಮಂದಿಗೆ, ಪಾವಗಡ ಮತ್ತು ಶಿರಾ ತಾಲೂಕಿನಲ್ಲಿ ತಲಾ 16 ಮಂದಿಗೆ, ಕೊರಟಗೆರೆ ತಾಲೂಕಿನಲ್ಲಿ 14 ಮಂದಿಗೆ, ತುರುವೇಕೆರೆ ತಾಲೂಕಿನಲ್ಲಿ 11ಮಂದಿಗೆ, ಮಧುಗಿರಿ ತಾಲೂಕಿನಲ್ಲಿ 9, ಕುಣಿಗಲ್ ತಾಲೂಕಿನಲ್ಲಿ ಐವರು ಸೇರಿದಂತೆ ಒಟ್ಟು 266 ಜನರಿಗೆ ಸೋಂಕು ತಗುಲಿದೆ.
ಇಂದು 174 ಮಂದಿ ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದುವರೆಗೂ 3,626 ಮಂದಿ ಗುಣಮುಖರಾಗಿದ್ದಾರೆ. 25 ರೋಗಿಗಳು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೂ 1,240 ಕೊರೊನಾ ರೋಗಿಗಳು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಜಿಲ್ಲೆಯಲ್ಲಿ ಇಂದು ನಾಲ್ವರು ಸೋಂಕಿನಿಂದ ಮೃತಪಟ್ಟಿದ್ದು, ಈವರೆಗೆ ಕೊರೊನಾದಿಂದ ಸಾವನ್ನಪ್ಪಿದವರ ಸಂಖ್ಯೆ 151ಕ್ಕೆ ಏರಿಕೆಯಾಗಿದೆ.