ತುಮಕೂರು: ಜಿಲ್ಲೆಯಲ್ಲಿ ನಿನ್ನೆ ಒಂದೇ ದಿನ ಬರೋಬ್ಬರಿ 260 ಮಂದಿ ಸೋಂಕಿತರು ಪತ್ತೆಯಾಗಿದ್ದಾರೆ. ಈ ಮೂಲಕ್ ಜಿಲ್ಲೆಯಲ್ಲಿ ಪ್ರಸ್ತುತ 1,725 ಮಂದಿ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.
103 ಮಂದಿ ಸೋಂಕಿತರು ತುಮಕೂರು ನಗರದಲ್ಲಿಯೇ ಕಂಡು ಬಂದಿದೆ. ಇನ್ನುಳಿದಂತೆ ತಿಪಟೂರು ತಾಲೂಕಿನಲ್ಲಿ 23, ಕುಣಿಗಲ್ ತಾಲೂಕಿನ ಲ್ಲಿ 22, ಮಧುಗಿರಿ ತಾಲೂಕಿನಲ್ಲಿ 21, ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ 20 ಮಂದಿಗೆ ಕೊರೊನಾ ಸೋಂಕು ತಗುಲಿದೆ.
ಆದ್ರೆ ಅದೃಷ್ಟವಶಾತ್ ಯಾರೂ ಕೂಡ ಮೃತಪಟ್ಟಿಲ್ಲ. ಇನ್ನುಳಿದಂತೆ 45 ವರ್ಷ ಮೇಲ್ಪಟ್ಟವರಿಗೆ ವ್ಯಾಕ್ಸಿನ್ ನೀಡುವ ಕಾರ್ಯ ಭರದಿಂದ ನಡೆದಿದೆ.