ತುಮಕೂರು: ಜಿಲ್ಲೆಯಲ್ಲಿ ಪಡಿತರ ವಿತರಣೆ ಆರಂಭಿಸಲಾಗಿದ್ದು, ಬೆಳಗ್ಗೆಯಿಂದ ಸಾಮಾಜಿಕ ಅಂತರ ಕಾಯ್ದುಕೊಂಡರು. ಎರಡು ತಿಂಗಳ ಪಡಿತರವನ್ನು ಏಕ ಕಾಲದಲ್ಲಿ ವಿತರಣೆ ಮಾಡಲಾಗುತ್ತಿದೆ.
ಜಿಲ್ಲೆಯ ಕುಣಿಗಲ್ ತಾಲೂಕಿನ ಯಡಿಯೂರು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ವಿತರಣೆ ಮಾಡಲಾಗುತ್ತಿದ್ದ ಪಡಿತರವನ್ನು ಪಡೆಯಲು ಬಿಸಿಲಿನ ನಡುವೆಯೂ ಶಿಸ್ತಿನಿಂದ ಜನರು ಸರತಿ ಸಾಲಿನಲ್ಲಿ ನಿಂತಿದ್ದು ಕಂಡುಬಂದಿತು.
ಬೀರಗಾನಹಳ್ಳಿ, ಜಲದಿಗೆರೆ, ಚಾಕೇನಹಳ್ಳಿ, ತಟ್ಟೆಕೆರೆ ಗ್ರಾಮದ ಪಡಿತರದಾರರಿಗೆ ರೇಷನ್ ವಿತರಣೆ ಮಾಡಲಾಗುತ್ತಿದ್ದು, ಪ್ರತಿ ಹಳ್ಳಿಯ ಕಾರ್ಡ್ ದಾರರಿಗೂ ಒಂದೊಂದು ದಿನ ಸಮಯ ನಿಗದಿ ಪಡಿಸಿ ಪಡಿತರ ವಿತರಣೆ ಮಾಡಲಾಗುತ್ತಿದೆ.