ETV Bharat / state

ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ; ಎಸ್​ಎಸ್​ಎಲ್​ಸಿ ಗಣಿತ ಪರೀಕ್ಷೆಗೆ 1,798 ವಿದ್ಯಾರ್ಥಿಗಳು ಗೈರು

ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಇಂದು ನಡೆದ ಗಣಿತ ಪರೀಕ್ಷೆಗೆ ಒಟ್ಟು 1,798 ವಿದ್ಯಾರ್ಥಿಗಳು ಗೈರಾಗಿದ್ದಾರೆ.

Exam
Exam
author img

By

Published : Jun 27, 2020, 8:21 PM IST

ಚಿಕ್ಕೋಡಿ: ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಇಂದು ನಡೆದ ಗಣಿತ ಪರೀಕ್ಷೆಗೆ 40,909 ವಿದ್ಯಾರ್ಥಿಗಳ ಪೈಕಿ 39,111 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು,1,798 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ ಎಂದು ಡಿಡಿಪಿಐ ಗಜಾನನ ಮನ್ನಿಕೇರಿ ಈಟಿವಿ ಭಾರತಗೆ ತಿಳಿಸಿದ್ದಾರೆ.

ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಮಾರ್ಗಸೂಚಿಯನ್ನು ಚಾಚೂ ತಪ್ಪದೇ ಪಾಲಿಸುವ ಮೂಲಕ ಪರೀಕ್ಷೆಯನ್ನು ಕಟ್ಟುನಿಟ್ಟಾಗಿ ನಡೆಸಲಾಗಿದ್ದು. ಯಾವ ವಿದ್ಯಾರ್ಥಿ ಕೂಡಾ ಗಣಿತ ವಿಷಯದಲ್ಲಿ ಡಿಬಾರ್​ ಆಗಿಲ್ಲ.

ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಎಂಟು ವಲಯಗಳಿದ್ದು ಅಥಣಿ -166, ಕಾಗವಾಡ - 49, ಚಿಕ್ಕೋಡಿ -391, ನಿಪ್ಪಾಣಿ -129, ಗೋಕಾಕ -116, ಮೂಡಲಗಿ - 253, ಹುಕ್ಕೇರಿ - 196, ರಾಯಬಾಗ - 498 ಹೀಗೆ ಒಟ್ಟು 1,798 ವಿದ್ಯಾರ್ಥಿಗಳು ಗೈರಾಗಿದ್ದಾರೆ.

ಕಂಟೈನ್​ಮೆಂಟ್​ ಝೋನ್​ ಹುಕ್ಕೇರಿ ತಾಲ್ಲೂಕಿನಲ್ಲಿ 20 ವಿದ್ಯಾರ್ಥಿಗಳು ಹಾಜರಾಗಿದ್ದಾರೆ ಹಾಗೂ ಮಹಾರಾಷ್ಟ್ರದಿಂದ 51 ವಿದ್ಯಾರ್ಥಿಗಳು ಹಾಜರಾಗಿದ್ದಾರೆ. ಇವತ್ತು ಎಸ್ಎಸ್ಎಲ್‌ಸಿ ಎರಡನೇ ಪರೀಕ್ಷೆ ಆಗಿದ್ದರಿಂದ ವಿದ್ಯಾರ್ಥಿಗಳಲ್ಲಿ ಸ್ಪಲ್ಪ ಮಟ್ಟಿಗೆ ಹೆದರಿಕೆ ಕಡಿಮೆಯಾಗಿದ್ದು ನಿರಾಳದಿಂದ ಪರೀಕ್ಷೆ ಬರೆದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.