ETV Bharat / state

ನಿಯಂತ್ರಣ ಸಲುವಾಗಿ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಧನ್ವಂತರಿ ಜಪ ಮತ್ತು ಕ್ರಿಮಿಹರ ಸೂಕ್ತ ಜಪ ಸಹಿತ ಹೋಮ

ದೇಶದಲ್ಲಿ ಕೊರೊನಾ ಮಹಾಮಾರಿ ನಿಯಂತ್ರಣಕ್ಕೆ ಬರಬೇಕು ಎಂಬ ಸಂಕಲ್ಪದೊಂದಿಗೆ ಮತ್ತು ಲೋಕ ಕಲ್ಯಾಣಾರ್ಥವಾಗಿ ವಿಶೇಷ ಪೂಜೆಯನ್ನು ದೇಗುಲದ ಅರ್ಚಕರ ನೇತೃತ್ವದಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಆರಂಭಿಸಲಾಗಿದೆ.

Special pooje held in kukkesubramaniam temple

author img

By

Published : May 6, 2021, 3:40 PM IST

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದೇಗುಲದಲ್ಲಿ ಕೊರೊನಾ ಸಂಕಷ್ಟ ನಿವಾರಣೆಗಾಗಿ ಮತ್ತು ಲೋಕ ಕಲ್ಯಾಣಾರ್ಥವಾಗಿ ವಿಶೇಷ ಪೂಜೆಗಳು ನಡೆಯುತ್ತಿದ್ದು, ಕೊನೆಯ ದಿನಗಳಲ್ಲಿ ಹೋಮಗಳು ನಡೆಯಲಿವೆ.

ದೇಶದಲ್ಲಿ ಕೊರೊನಾ ಮಹಾಮಾರಿ ನಿಯಂತ್ರಣಕ್ಕೆ ಬರಬೇಕೆಂಬ ಸಂಕಲ್ಪದೊಂದಿಗೆ ಮತ್ತು ಲೋಕ ಕಲ್ಯಾಣಾರ್ಥವಾಗಿ ವಿಶೇಷ ಪೂಜೆಯನ್ನು ದೇಗುಲದ ಅರ್ಚಕರ ನೇತೃತ್ವದಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಆರಂಭಿಸಲಾಗಿದೆ.

ಶ್ರೀ ಧನ್ವಂತರಿ ಜಪ ಮತ್ತು ಕ್ರಿಮಿಹರ ಸೂಕ್ತ ಜಪ ಸಹಿತ ಹೋಮ ನೆರವೇರಿಸಲಾಗುತ್ತಿದ್ದು, ಇದು ಮೇ.4 ರಿಂದ ಮೇ.13 ರ ವರೆಗೆ ನಡೆಯಲಿದೆ.

ಈ ಬಗ್ಗೆ ಈಟಿವಿ ಭಾರತಕ್ಕೆ ಮಾಹಿತಿ ನೀಡಿದ ದೇವಸ್ಥಾನದ ಕಾರ್ಯ ನಿರ್ವಾಹಣಾಧಿಕಾರಿ ಡಾ.ನಿಂಗಯ್ಯ ಅವರು ಕರ್ನಾಟಕ ಧಾರ್ಮಿಕ ಧತ್ತಿ ಇಲಾಖೆಯ ಆಯುಕ್ತರ ಮತ್ತು ದೇವಸ್ಥಾನದ ವ್ಯವಸ್ಧಾಪನಾ ಸಮಿತಿಯ ಅನುಮತಿ ಪಡೆದು, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಅರ್ಚಕರ ನೇತೃತ್ವದಲ್ಲಿ ಈ ವಿಶೇಷ ಪೂಜೆ ನೆರವೇರಿಸಲಾಗುತ್ತಿದೆ. ಯಾವುದೇ ರೀತಿಯಲ್ಲಿ ಹೊರಗಿನ ಜನರಿಗೆ ಈ ವಿಶೇಷ ಪೂಜೆಯಲ್ಲಿ ಅವಕಾಶವನ್ನು ಕಲ್ಪಿಸಲಾಗಿಲ್ಲ.

ದೇವಸ್ಥಾನದ ಅರ್ಚಕರು ಹಾಗೂ ಸಹಕರ್ಮಿಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಮೇ 12 ನೇ ತಾರೀಕಿನಂದು ಧನ್ವಂತರಿ ಹೋಮ ಮತ್ತು ಮೆ.13ನೇ ತಾರೀಕಿನಂದು ಕ್ರಿಮಿಹರ ಸೂಕ್ತ ಹೋಮ ನೆರವೇರಲಿದೆ. ಉಳಿದ ದಿನಗಳಲ್ಲಿ ವಿಶೇಷ ಜಪ ಮತ್ತು ಕೊರೊನಾ ಸಂಕಷ್ಟ ನಿವಾರಣೆಗಾಗಿ ವಿಶೇಷ ಪ್ರಾರ್ಥನೆಗಳು ನಡೆಯಲಿದೆ ಎಂದು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.