ETV Bharat / state

ನೆರೆ ಸಂತ್ರಸ್ತರಿಗೆ ಸಂಗ್ರಹಿಸಿದ್ದ ಹಣವೇ ನಾಪತ್ತೆ: ಪುಟ್ಟ ಕಂದಮ್ಮಗಳ ಕಣ್ಣಲ್ಲಿ ಕಣ್ಣೀರು - ಶಾಲಾ ಮಕ್ಕಳು

ಕಳೆದ ವರ್ಷ ಕೊಡಗು ನೆರೆ ಸಂತ್ರಸ್ತರಿಗೆ ಸಹಾಯ ಹಸ್ತ ನೀಡಲೆಂದು ಯರಮರಸ್ ಕ್ಯಾಂಪ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ  ವಿದ್ಯಾರ್ಥಿಗಳು ಪುಟ್ಟ ಪುಟ್ಟ ಹೆಜ್ಜೆಯನ್ನಿಡುತ್ತಾ, ಮನೆ ಮನೆಗೆ ತಿರುಗಿ ನಿಧಿ ಸಂಗ್ರಹ ಮಾಡಿದ್ದರು. ಆದರೆ ಇದೀಗ ಆ ಹಣ ಕಾಣೆಯಾಗಿದೆ.

ಕೊಡಗು ನೆರೆ ಸಂತ್ರಸ್ತರಿಗಾಗಿ ಶಾಲಾ ಮಕ್ಕಳು ಸಂಗ್ರಹಿಸಿದ್ದ ಹಣ ನಾಪತ್ತೆ
author img

By

Published : Aug 30, 2019, 5:51 AM IST

Updated : Aug 30, 2019, 5:21 PM IST

ರಾಯಚೂರು: ಕಳೆದ ವರ್ಷ‌ ಕೊಡಗಿನಲ್ಲಿ‌ ಉಂಟಾಗಿದ್ದ ನೆರೆ ಹಾವಳಿಯಿಂದಾಗಿ ಮನೆ-ಮಠ ಕಳೆದುಕೊಂಡ ಸಂತ್ರಸ್ತರಿಗಾಗಿ ರಾಯಚೂರಿನ ಯರಮರಸ್ ಕ್ಯಾಂಪ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಹಣ ಸಂಗ್ರಹಿಸಿದ್ದರು. ಆದರೆ, ಆ ಹಣ ಸಂತ್ರಸ್ತರಿಗೆ ಸೇರದೇ ಶಾಲೆಯ ಮುಖ್ಯಗುರು ಅವರ ಜೇಬಿಗೆ ಸೇರಿದೆ ಎಂಬ ಆರೋಪ ಕೇಳಿಬರುತ್ತಿದೆ.

ಕಳೆದ ವರ್ಷ ಕೊಡಗು ನೆರೆ ಸಂತ್ರಸ್ತರಿಗೆ ಸಹಾಯ ಹಸ್ತ ನೀಡಲು ಅನೇಕ ದಾನಿಗಳು, ಸಂಘ ಸಂಸ್ಥೆಗಳು ಮುಂದಾಗಿದ್ದರು. ಇವರ ಜೊತೆಯಲ್ಲಿ ಯರಮರಸ್ ಕ್ಯಾಂಪ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಪುಟ್ಟ ಪುಟ್ಟ ಹೆಜ್ಜೆಯನ್ನಿಡುತ್ತಾ, ಮನೆ ಮನೆಗೆ ತಿರುಗಿ ನಿಧಿ ಸಂಗ್ರಹ ಮಾಡಿದ್ದರು. ಅಂದಾಜು 50 ಸಾವಿರ ರೂ. ಸಂಗ್ರಹಿಸಿ ಮುಖ್ಯಶಿಕ್ಷಕಿ ಸರಸ್ವತಿ ಅವರ ಕೈಗೆ ನೀಡಿದ್ದಾರೆ. ಆದರೆ ಶಿಕ್ಷಕಿ ಹಣವನ್ನು ಸಂತ್ರಸ್ತರಿಗೆ ನೀಡದೆ ತಾವೇ ಬಳಸಿಕೊಂಡಿದ್ದಾರೆ ಎಂಬ ಆರೋಪ ಈಗ ಕೇಳಿಬಂದಿದೆ.

ಕೊಡಗು ನೆರೆ ಸಂತ್ರಸ್ತರಿಗಾಗಿ ಶಾಲಾ ಮಕ್ಕಳು ಸಂಗ್ರಹಿಸಿದ್ದ ಹಣ ನಾಪತ್ತೆ

ಬೀದಿ ಬೀದಿ ಅಲೆದಾಡಿ ಪುಟ್ಟ ಕೈಗಳಿಂದ ಹಣ ಸಂಗ್ರಹಿಸಿದ ವಿದ್ಯಾರ್ಥಿಗಳಿಗೆ ಇದರಿಂದ ತೀವ್ರ ದುಃಖವಾಗಿದೆ. ಒಂದು ವೇಳೆ ಹಣ ಕಳೆದು ಹೋಗಿದ್ದರೆ ಜವಾಬ್ದಾರಿ ಹೊತ್ತ ಸರಸ್ವತಿ ಅವರು ಪೊಲೀಸ್ ಠಾಣೆಯಲ್ಲಿ ದೂರು ನೀಡಬೇಕಿತ್ತು ಅಥವಾ ಕ್ಷೇತ್ರ ಶಿಕ್ಷಣಾಧಿಕಾರಿಗಳ ಗಮನಕ್ಕೆ ತರಬೇಕಿತ್ತು ಇದಾವುದನ್ನೂ ಮಾಡದ ಹಿನ್ನೆಲೆ ಶಿಕ್ಷಕಿಯೇ ಹಣ ಗುಳುಂ ಮಾಡಿದ್ದಾರೆ ಎಂದು ಪೋಷಕರು ಹೇಳುತ್ತಿದ್ದಾರೆ.

ಈ ಕುರಿತು ಪಾಲಕರು, ಜಿ.ಪಂ. ಸಿಇಓ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ ತನಿಖೆ ನಡೆಸಿ ಸತ್ಯಾಂಶ ಹೊರಬರಬೇಕು ಎಂದು ಒತ್ತಾಯಿಸಿದರೂ ಪ್ರಯೋಜನವಾಗಿಲ್ಲ.

Intro:ಕಳೆದ ವರ್ಷ ಜೂನ್,ಜುಲೈ ನಲ್ಲಿ‌ ಕೊಡಗಿನಲ್ಲಿ‌ ಉಂಟಾಗಿದ್ದ ನೆರೆ ಹಾವಳಿಯಿಂದಾಗಿ ಮನೆ ಮಠ ಕಳೆದುಕೊಂಡ ಸಂತ್ರಸ್ತರಿಗಾಗಿ ರಾಯಚೂರಿನ ಯರಮರಸ್ ಕ್ಯಾಂಪ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಹಣ ಸಂಗ್ರಹಿಸಿದ್ದರು ಆದರೆ ಆ ಹಣ ಸಂತ್ರಸ್ತರಿಗೆ ಸೇರದೇ ಶಾಲೆಯ ಮುಖ್ಯಗುರು ಅವರ ಜೇಬಿಗೆ ಸೇರಿದೆ ಎಂಬ ಆರೋಪ ಕೇಳಿಬರುತ್ತಿದೆ.

Body:ಕೊಡಗಿನಲ್ಲಿ ಉಂಟಾಗಿದ್ದ ನೆರೆ ಹಾವಳಿಯಿಂದ ಅನೇಕರು ನಿರ್ಗತಿಕ ರಾಗಿದ್ದರು ಅವರಿಗೆ ಸಹಾಯ ಹಸ್ತ ನೀಡಲು ಅನೇಕ ದಾನಿಗಳು,ಸಂಘ ಸಂಸ್ಥೆಗಳು ಮುಂದಾಗಿದ್ದರು ಇವರ ಜೊತೆಯಲ್ಲಿ ರಾಯಚೂರಿನ ಯರಮರಸ್ ಕ್ಯಾಂಪ್ ಶಾಲೆಯ ಹಿ.ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಪುಟ್ಟ ಪುಟ್ಟ ಹೆಜ್ಜೆಯನ್ನಿಡುತ್ತಾ ಮನೆ ಮನೆಗೆ ತಿರುಗಿ ನಿಧಿ ಸಂಗ್ರಹ ಮಾಡಿದ್ದರು ಸುಮಾರು ರೂ.ಸಾವಿರ ರೂ.ಸಂಗ್ರಹಿಸಿ ಮುಖ್ಯಗುರು ಸರಸ್ವತಿ ಅವರ ಕೈಗೆ ನೀಡಿದ್ದಾರೆ ಇದಕ್ಕೆ ಒಂದು ದಿನ ನಿಗದಿ ಮಾಡಿ ಚೆಕ್ ರೂಪದಲ್ಲಿ ಜಿಲ್ಲಾಡಳಿತದ ಮುಖಾಂತರ ಕೊಡಗು ಸಂತ್ರಸ್ಥರಿಗೆ ರವಾನಿಸುವ ಕಾರ್ಯ ಕ್ಕೆ ಮುಂದಾಗಿದ್ದರು ಆದ್ರೆ ಇವತ್ತು ನಾಳೆ ಅಂತ ದಿನ ದೂಡುತ್ತಾ ಇದ್ದ ಮುಖ್ಯ ಗುರು ಕೊನೆಗೆ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಸಂಗ್ರಹಿಸಿದ ಹಣದ ಬಗ್ಗೆ ಕೇಳಿದಾಗ ಹಣದ ಡಬ್ಬಿ ಕಳ್ಳತನವಾಗಿದೆ ಎಂದು ಕಥೆ ಕಟ್ಟಿದ್ದಾರೆ ಶಾಲೆಯ ಮುಖ್ಯ ಗುರು ಸರಸ್ವತಿ ಅವರು.
ತರಗತಿಗಳ ಮಧ್ಯೆ ಬೀದಿ ಬೀದಿ ಅಲೆದಾಡಿ ಪುಟ್ಟ ಕೈಗಳಿಂದ ಹಣ ಸಂಗ್ರಹಿಸಿದ ವಿದ್ಯಾರ್ಥಿಗಳಿಗೆ ಇದರಿಂದ ತೀವ್ರ ದುಃಖವಾಗಿ ಗೋಳೂ ಎಂದು ಅತ್ತು ಕಣ್ಣು ಕೆಂಪಾಗಿಸಿಕೊಂಡಿದ್ದರು.
ಆದ್ರೆ ಒಂದು ವೇಳೆ ಹಣ ಕಳೆದು ಹೋದರೆ ಜವಾಬ್ದಾರಿ ಹೊತ್ತ ಮುಖ್ಯ ಗುರು ಸರಸ್ವತಿ ಅವರು ಪೊಲೀಸ್ ಠಾಣೆಯಲ್ಲಿ ದೂರು ಸಹ ನೀಡಲಿಲ್ಲ ಹಾಗೂ ಈ ವಿಷಯದ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಗಮನ ಕ್ಕೂ ತಂದಿಲ್ಲ ಇದರಿಂದ ಭಾರಿ ಅನುಮಾನ ವ್ಯಕ್ತವಾಗಿದ್ದು ಶಿಕ್ಷಕರ ಹಾಗೂ ವಿದ್ಯಾರ್ಥಿಗಳ ಪ್ರಕಾರ ಇದು ಕಳ್ಳತನವಲ್ಲ ಮುಖ್ಯ ಗುರುಗಳ ಬೇಜವಾಬ್ದಾರಿ ಹಾಗೂ ಅವರೇ ಹಣ ದುರುಪಯೋಗ ಪಡೆದುಕೊಂಡಿದ್ದಾರೆ ಎಂಬ ಆರೋಪ ಮಾಡ್ತಿದಾರೆ.
ಈ ಕುರಿತು ಪಾಲಕರು ಜಿ.ಪಂ.ಸಿಇಓ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ ತನಿಖೆ ನಡೆಸಿ ಸತ್ಯಾಂಶ ಹೊರಬರಬೇಕು ಎಂದು ಒತ್ತಾಯಿಸಿದರೂ ಪ್ರಯೋಜನವಾಗಿಲ್ಲ ಈಗಲಾದ್ರೂ ಎಚ್ಚೆತ್ತು ಶಿಕ್ಷಣಾಧಿಕಾರಿ ಈ ಬಗ್ಗೆ ತನಿಖೆ ನಡೆಸಿ ಮುಖ್ಯಗುರುಗಳು ತಪ್ಪೆಸಗಿದ್ದಲ್ಲಿ ಕ್ರಮ ಜರುಗಿಸಬೇಕಾಗಿದೆ ಇಲ್ಲದೇ ಹೋದಲ್ಲಿ ಚಳಿ, ಬಿಸಿಲೆನ್ನದೇ ಮನೆಮನೆ ತಿರುಗಾಡಿ ಹಣ ಸಂಗ್ರಹಿಸಿದ ಶ್ರಮಕ್ಕೂ ಬೆಲೆ ಇಲ್ಲದಂತಾಗುತ್ತದೆ ಎನ್ನುವುದು ಪಾಲಕರ ಒತ್ತಾಯ.

Conclusion:
Last Updated : Aug 30, 2019, 5:21 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.