ETV Bharat / state

ಆ್ಯಕ್ಟ್​ ಆಫ್​ ಗಾಡ್​ ವ್ಯಾಖ್ಯಾನ: ಕೇಂದ್ರ ಸರ್ಕಾರದ ವಿರುದ್ಧ ಈಶ್ವರ್ ಖಂಡ್ರೆ ವಾಗ್ದಾಳಿ

author img

By

Published : Aug 31, 2020, 12:09 PM IST

ಆ್ಯಕ್ಟ್​​ ಆಫ್ ಗಾಡ್ ಕೊರೊನಾ ಬಿಕ್ಕಟ್ಟಿಗೆ ಕೇಂದ್ರ ಸರ್ಕಾರ ನೀಡಿರುವ ಹೊಸ ವ್ಯಾಖ್ಯಾನ. ಇದು ಕೇಂದ್ರ ಬಿಜೆಪಿ ಸರ್ಕಾರದ ನೈತಿಕ ದಿವಾಳಿತನಕ್ಕೆ ಸಾಕ್ಷಿಯಾಗಿದ್ದು, ಸರ್ಕಾರದ ಅವೈಜ್ಞಾನಿಕ ಯೋಚನಾ ಲಹರಿಗೆ ಹಿಡಿದ ಕೈಗನ್ನಡಿ ಎಂದು ಈಶ್ವರ್ ಖಂಡ್ರೆ ವಾಗ್ದಾಳಿ ನಡೆಸಿದ್ದಾರೆ.

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ
ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ

ಬೆಂಗಳೂರು: ಜಿಎಸ್​​ಟಿ ವಿಚಾರದಲ್ಲಿ ರಾಜ್ಯದ ಪಾಲು ನೀಡುವಲ್ಲಿ ಹಿಂದೇಟು ಹಾಕಿರುವ ಕೇಂದ್ರ ಸರ್ಕಾರದ ವಿರುದ್ಧ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಆ್ಯಕ್ಟ್​​​​ ಆಫ್ ಗಾಡ್ ಕೊರೊನಾ ಬಿಕ್ಕಟ್ಟಿಗೆ ಕೇಂದ್ರ ಸರ್ಕಾರ ನೀಡಿರುವ ಹೊಸ ವ್ಯಾಖ್ಯಾನ. ಇದು ಕೇಂದ್ರ ಬಿಜೆಪಿ ಸರ್ಕಾರದ ನೈತಿಕ ದಿವಾಳಿತನಕ್ಕೆ ಸಾಕ್ಷಿಯಾಗಿದ್ದು, ಸರ್ಕಾರದ ಅವೈಜ್ಞಾನಿಕ ಯೋಚನಾ ಲಹರಿಗೆ ಹಿಡಿದ ಕೈಗನ್ನಡಿ ಎಂದು ಹೇಳಿದ್ದಾರೆ.

ಪೂರ್ವ ಸಿದ್ಧತೆ ಮಾಡಿಕೊಳ್ಳದೆ ತರಾತುರಿಯಲ್ಲಿ ಲಾಕ್​​ಡೌನ್ ಹೇರಿ ದೇಶದ ಜನರನ್ನು ಸಂಕಷ್ಟಕ್ಕೆ ತಳ್ಳಿದ ಸರ್ಕಾರ, ತನ್ನ ಲೋಪ ಮುಚ್ಚಿಕೊಳ್ಳಲು ದೇವರನ್ನು ನಿಂದಿಸಲು ಹೊರಟಿದೆ. ನೋಟು ಅಮಾನ್ಯೀಕರಣ, ಆತುರದ ಜಿಎಸ್​​ಟಿ ಜಾರಿಯಂತಹ ಅಸಮರ್ಪಕ ಆರ್ಥಿಕ ನೀತಿಯಿಂದ ದೇಶದ ಹಣಕಾಸು ವ್ಯವಸ್ಥೆಯನ್ನೇ ಹಾಳು ಮಾಡಿದ ಕೇಂದ್ರ ಸರ್ಕಾರದ ಹಣಕಾಸು ಹೊಣೆ ಹೊತ್ತ ಸಚಿವೆ ನಿರ್ಮಲಾ ಸೀತಾರಾಮನ್ ಈಗ ತಮ್ಮ ಹೊಣೆಗಾರಿಕೆಯಿಂದ ನುಣುಚಿಕೊಳ್ಳಲು ಕೊರೊನಾ ಆ್ಯಕ್ಟ್​​ ಆಫ್ ಗಾಡ್ ಎಂದು ಹೇಳಿ ಕೈ ತೊಳೆದುಕೊಳ್ಳಲು ಹೊರಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಟ್ವೀಟ್

ಸರ್ಕಾರ ಮುಂದಾಲೋಚನೆ ಇಲ್ಲದೆ ಲಾಕ್​​ಡೌನ್ ಮಾಡಿ ವಲಸೆ ಕಾರ್ಮಿಕರು ಮೈಲಿಗಟ್ಟಲೆ ಬರಿಗಾಲಲ್ಲಿ ನಡೆಯುವಂತೆ ಮಾಡಿತು. ಸರ್ಕಾರಿ ಬಸ್​​ನಲ್ಲಿ 3 ಪಟ್ಟು ದರ ಕೊಟ್ಟು ಪ್ರಯಾಣಿಸುವಂತೆ ತಾಕೀತು ಮಾಡಿದ ಸರ್ಕಾರ, ನೀರ ಮೇಲಿನ ಗುಳ್ಳೆಯಂತೆ 20 ಲಕ್ಷ ಕೋಟಿ ರೂ.ಗಳ ಪ್ಯಾಕೇಜ್ ಪ್ರಕಟಿಸಿ ಈಗ ತನ್ನೆಲ್ಲಾ ತಪ್ಪು ಮುಚ್ಚಿಕೊಳ್ಳಲು ಆ್ಯಕ್ಟ್​​ ಆಫ್ ಗಾಡ್ ಎನ್ನುವುದು ಹಾಸ್ಯಾಸ್ಪದವಲ್ಲದೇ ಮತ್ತೇನು ಎಂದು ಪ್ರಶ್ನಿಸಿದ್ದಾರೆ.

ಅಧಿಕಾರಿಗಳನ್ನು ನೇಮಿಸಿ ಕೆಪಿಎಸ್​​ಸಿ ಉನ್ನತ ಹುದ್ದೆಗಳಿಗೆ 2011ರ ತಂಡದ ಆಯ್ಕೆ ಪಟ್ಟಿಯನ್ನು 2013ರಲ್ಲಿ ಪ್ರಕಟಿಸಿದ್ದರೂ ಈವರೆಗೆ ನೇಮಕಾತಿ ಆಗಿಲ್ಲ. ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಆಯಕಟ್ಟಿನ ಸ್ಥಾನದಲ್ಲಿ ಅಧಿಕಾರಿಗಳ ಕೊರತೆಯಿಂದ ಆಗುತ್ತಿರುವ ತೊಂದರೆಯೂ ಈ ನೇಮಕಾತಿಯಿಂದ ಬಗೆಹರಿಯುತ್ತದೆ. ಸರ್ಕಾರ ಸದನದಲ್ಲಿ ಭರವಸೆ ನೀಡಿದಂತೆ ಕೂಡಲೇ ನೇಮಕಾತಿ ಪತ್ರ ನೀಡಿ, ಸ್ಥಳ ನಿಯೋಜನೆ ಮಾಡಲು ಒತ್ತಾಯಿಸುತ್ತೇನೆ ಎಂದಿದ್ದಾರೆ.

ಪ್ರತೀ ಜಿಲ್ಲೆಗೊಂದು ಪ್ಲಾಸ್ಮಾ ಬ್ಯಾಂಕ್ ಆರಂಭಿಸಿ, ಕೊರೊನಾ ಸೋಂಕಿತರ ಜೀವ ಉಳಿಸಿ. ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಮತ್ತು ಮರಣ ಪ್ರಮಾಣ ಹೆಚ್ಚಾಗುತ್ತಿರುವ ಹಿನ್ನೆಲೆ ತಕ್ಷಣವೇ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರದಲ್ಲಿ ಪ್ಲಾಸ್ಮಾ ಬ್ಯಾಂಕ್ ಸ್ಥಾಪಿಸಿ, ರೋಗಿಗಳ ಜೀವ ಉಳಿಸುವಂತೆ ಒತ್ತಾಯಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.