ETV Bharat / state

ಯುನೆಸ್ಕೋ ಜೀವ ವಿಜ್ಞಾನ ಪೀಠಕ್ಕೆ ಡಾ. ಕುಶಾಲ‌ ದಾಸ್ ನೇಮಕ

author img

By

Published : Jul 23, 2020, 11:42 AM IST

ಯುನೆಸ್ಕೋ ಜೀವ ವಿಜ್ಞಾನ ಪೀಠದ ಮುಖ್ಯಸ್ಥರಾಗಿ ಬಿಎಲ್ ಡಿಇ ಡೀಮ್ಡ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಕುಶಾಲ ದಾಸ್ ನೇಮಕಗೊಂಡಿದ್ದಾರೆ.

Dr. Kushaldas
Dr. Kushaldas

ವಿಜಯಪುರ: ಯುನೆಸ್ಕೋ ಜೀವ ವಿಜ್ಞಾನ ಪೀಠದ ಮುಖ್ಯಸ್ಥರಾಗಿ ಬಿಎಲ್ ಡಿಇ ಡೀಮ್ಡ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಕುಶಾಲ ದಾಸ್ ನೇಮಕವಾಗಿದ್ದಾರೆ.

ಈ ಜೀವ ವಿಜ್ಞಾನ ಪೀಠ ಅಮೆರಿಕ, ಇಂಗ್ಲೆಂಡ್ ಸೇರಿದಂತೆ 18 ದೇಶಗಳ ವಿವಿಧ ವಿವಿ ಗಳಿಗೆ ಸ್ನಾತಕೋತ್ತರ ಮತ್ತು ಪಿಹೆಚ್ ಡಿ ಪಠ್ಯಕ್ರಮವನ್ನು ಸಿದ್ಧಪಡಿಸುವುದು ಸೇರಿದಂತೆ ಜೀವ ವಿಜ್ಞಾನ ಕ್ಷೇತ್ರದಲ್ಲಿ ಯುನೆಸ್ಕೋ ಕೈಗೊಳ್ಳಬೇಕಾದ ಹಲವು ಕ್ರಮಗಳನ್ನು ನೋಡಿಕೊಳ್ಳಲಿದೆ.

ಈ ಹುದ್ದೆಗೆ ನೇಮಕಗೊಂಡ ಏಷ್ಯಾದ ಮೊದಲ ವ್ಯಕ್ತಿ ಡಾ. ಕುಶಾಲ ದಾಸ ಆಗಿದ್ದು, ಪಠ್ಯಕ್ರಮದ ಜೊತೆಗೆ ಸಾರ್ವಜನಿಕ ಆರೋಗ್ಯ ಮತ್ತು ಪರಿಸರ ಸಮಸ್ಯೆಗಳನ್ನು ಪರಿಹರಿಸಲು ಈ ಪೀಠ ಮಾರ್ಗದರ್ಶನ ಮಾಡಲಿದೆ.

ಡಾ.ಕುಶಾಲ ದಾಸ ನೇಮಕ ಭಾರತೀಯ ವಿಜ್ಞಾನಿಯೊಬ್ಬರಿಗೆ ನೀಡಿದ ಗೌರವವಾಗಿದೆ ಎಂದು ಬಿಎಲ್ ಡಿಇ ಅಧ್ಯಕ್ಷ ಎಂ.ಬಿ. ಪಾಟೀಲ, ಡೀಮ್ಡ್ ಉಪಕುಪತಿ ಡಾ.ಎಂ.ಎಸ್. ಬಿರಾದಾರ ಅಭಿನಂದಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.