ಹಾವೇರಿ: ಜಿಲ್ಲೆಯಲ್ಲಿ ಕೊರೊನಾ ಪೀಡಿತರ ಸಂಖ್ಯೆ ದಿನದಿಂದ ದಿನಕ್ಕೆ ಅಧಿಕವಾಗುತ್ತಿದೆ. ಕಳೆದ ಅಲೆಗಿಂತ ಈ ಅಲೆಯಲ್ಲಿ ಸೋಂಕಿತರು ಪ್ರಾಣ ಸಹ ಕಳೆದುಕೊಂಡಿದ್ದಾರೆ.
ಜಿಲ್ಲಾಡಳಿತ ಈ ಕುರಿತಂತೆ ಎಷ್ಟು ಜಾಗೃತಿ ಮೂಡಿಸಿದರೂ ಸಹ ಜನರು ಜಾಗೃತರಾಗುತ್ತಿಲ್ಲಾ. ಮಾರುಕಟ್ಟೆ ತರಕಾರಿ ಸೇರಿದಂತೆ ವಿವಿಧ ವಸ್ತುಗಳನ್ನು ಖರೀದಿಸಲು ಗ್ರಾಹಕರು ಮಾಸ್ಕ್ ಇಲ್ಲದೆ ಮನೆ ಹೊರಗೆ ಬರುತ್ತಿದ್ದಾರೆ.
ಮಾಸ್ಕ್ ಇದ್ದರೂ ಅದನ್ನ ಸರಿಯಾಗಿ ಹಾಕಿಕೊಳ್ಳದೇ ವ್ಯಾಪಾರ ವಹಿವಾಟು ನಡೆಸುತ್ತಿದ್ದಾರೆ. ಕ್ಯಾಮೆರಾ ಕಾಣುತ್ತಿದ್ದಂತೆ ಮಾಸ್ಕ್ ಸರಿಪಡಿಸಿಕೊಳ್ಳುತ್ತಾರೆ. ಹೀಗಾದರೆ ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳನ್ನ ಹೇಗೆ ನಿಯಂತ್ರಿಸಬೇಕು ಎಂದು ಅಧಿಕಾರಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಜಿಲ್ಲಾಡಳಿತ ಮಾಸ್ಕ್, ಸಾಮಾಜಿಕ ಅಂತರ ಸ್ಯಾನಿಟೈಜರ್ ಸೇರಿದಂತೆ ಕೊರೊನಾ ನಿಯಮಗಳನ್ನ ಪಾಲಿಸುವಂತೆ ಹಲವು ಬಾರಿ ಜಾಗೃತಿ ಮೂಡಿಸಿದೆ. ಆದರೊ ಸಹ ಜನರು ಮಾಸ್ಕ್ ಇಲ್ಲದೆ ಸಮಾಜಿಕ ಅಂತರವಿಲ್ಲದೆ ಓಡಾಡುವದು ವಹಿವಾಟು ನಡೆಸುತ್ತಿರುವುದು ಅಧಿಕಾರಿಗಳಿಲ್ಲಿ ಆತಂಕ ಮೂಡಿಸಿದೆ. ಅದರಲ್ಲೂ ಹಾವೇರಿ ಮಾರುಕಟ್ಟೆ ನಡೆಯುವ ದಿನಗಳಾದ ಗುರುವಾರ ಮತ್ತು ಸೋಮವಾರ ಗ್ರಾಹಕರು ಈ ರೀತಿ ವರ್ತಿಸುತ್ತಿದ್ದಾರೆ.