ETV Bharat / state

ಮೈತ್ರಿ ಸರ್ಕಾರ ಗೊಂದಲದಲ್ಲಿದೆ- ಶಾಸಕ ಅರವಿಂದ ಲಿಂಬಾವಳಿ

ಸಮ್ಮಿಶ್ರ ಸರ್ಕಾರ ರಚನೆಯಾದ ದಿನದಿಂದಲೇ ಗೊಂದಲದಲ್ಲಿದೆ‌. ಮೈತ್ರಿ ಪಕ್ಷದಲ್ಲಿ ಹೊಂದಾಣಿಕೆ ಇಲ್ಲದೇ ನಡೆಸುತ್ತಿರುವ ಆಡಳಿತಕ್ಕೆ ರಾಜ್ಯದ ಜನರು ಅಷ್ಟೇ ಅಲ್ಲದೇ ಪಕ್ಷದ ಶಾಸಕರೂ ಬೇಸತ್ತು ಹೋಗಿದ್ದಾರೆ ಎಂದು ಅರವಿಂದ ಲಿಂಬಾವಳಿ ಹೇಳಿದರು.

author img

By

Published : May 14, 2019, 3:24 PM IST

Updated : May 14, 2019, 4:50 PM IST

ಅರವಿಂದ ಲಿಂಬಾವಳಿ

ಹುಬ್ಬಳ್ಳಿ : ಸಮ್ಮಿಶ್ರ ಸರ್ಕಾರ ರಚನೆಯಾದ ದಿನದಿಂದಲೇ ಗೊಂದಲದಲ್ಲಿದೆ‌. ಮೈತ್ರಿ ಪಕ್ಷದಲ್ಲಿ ಹೊಂದಾಣಿಕೆ ಇಲ್ಲದೇ ನಡೆಸುತ್ತಿರುವ ಆಡಳಿತಕ್ಕೆ ರಾಜ್ಯದ ಜನರು ಅಷ್ಟೇ ಅಲ್ಲ, ಆ ಎರಡೂ ಪಕ್ಷದ ಶಾಸಕರೂ ಬೇಸತ್ತು ಹೋಗಿದ್ದಾರೆ. ಇದು ಶಾಸಕರ ರಾಜೀನಾಮೆಗೆ ಕಾರಣವಾಗಿ ಮುಂದೆ ಬಿಜೆಪಿ ಸರ್ಕಾರ ರಚನೆ ಮಾಡಲು ಮುಂದಾಗುವುದು ಎಂದು ಅರವಿಂದ ಲಿಂಬಾವಳಿ ಹೇಳಿದರು.

ನಗರದಲ್ಲಿ ಇಂದು ಪತ್ರಿಕಾಗೋಷ್ಠಿ ಏರ್ಪಡಿಸಿ ಮಾತನಾಡಿದ ಅವರು, ಜೆಡಿಎಸ್-ಕಾಂಗ್ರೆಸ್ ಶಾಸಕರಲ್ಲಿಯೇ ಹೊಂದಾಣಿಕೆ ಇಲ್ಲ‌.‌ ಅವರ ಆಡಳಿತ ಅವರಿಗೆ ಬೇಸತ್ತು ಹೋಗಿದ್ದು, ಇದಕ್ಕೆ ತಾಜಾ ಉದಾಹರಣೆ ಕುಪೇಂದ್ರ ರೆಡ್ಡಿ ಮಾತುಗಳು ಎಂದರು. ಬರುವ ದಿನಗಳಲ್ಲಿ ಶಾಸಕರ ರಾಜೀನಾಮೆಯಿಂದ ರಾಜ್ಯವು ಉಪ ಚುನಾವಣೆ ಎದುರಿಸಬೇಕಾಗುತ್ತದೆ. ಆಗ ಆಡಳಿತ ಪಕ್ಷಗಳ ಸಂಖ್ಯೆ 104ಕ್ಕಿಂತ ಕಡಿಮೆ ಬಂದಾಗ ಬಿಜೆಪಿ ಸರ್ಕಾರ ರಚನೆ ಮಾಡಲು ಮುಂದಾಗುತ್ತೆ ಎಂದರು.

ಈಗಾಗಲೇ ಇಬ್ಬರು ಪಕ್ಷೇತರ ಅಭ್ಯರ್ಥಿಗಳು ನಮಗೆ ಬೆಂಬಲ ಕೊಟ್ಟಿದ್ದಾರೆ. ಬರುವ ದಿನಗಳಲ್ಲಿ ಮೈತ್ರಿ ಪಕ್ಷಗಳ ಶಾಸಕರೇ ರಾಜೀನಾಮೆ ಕೊಟ್ಟು ಹೊರ ಬರುತ್ತಾರೆ. ಬಿಜೆಪಿ ಮೈತ್ರಿ ಸರ್ಕಾರವನ್ನು ಬೀಳಿಸುವುದಿಲ್ಲ. ತಾನಾಗಿಯೇ ಬೀಳುತ್ತದೆ ಎಂದು ಭವಿಷ್ಯ ನುಡಿದರು.

Intro:ಹುಬ್ಬಳಿBody:ಸ್ಲಗ್:ಮೈತ್ರಿ ಸರಕಾರ ಗೊಂದಲಲ್ಲಿದೆ.ಅರವಿಂದ ಲಿಂಬಾವಳಿ.

ಹುಬ್ಬಳ್ಳಿ:-ಕಳೆದ ಒಂದು ವರ್ಷದಿಂದ ಸಮ್ಮಿಶ್ರ ಸರ್ಕಾರ ರಚನೆಯಾದ ದಿನದಿಂದಲೇ ಗೊಂದಲದಲ್ಲಿದೆ‌. ಮೈತ್ರಿ ಪಕ್ಷದಲ್ಲಿ ಹೊಂದಾಣಿಕೆ ಇಲ್ಲದೇ ನಡೆಸುತ್ತಿರುವ ಆಡಳಿತಕ್ಕೆ ರಾಜ್ಯದ ಜನರು ಅಷ್ಟೇ ಅಲ್ಲದೇ ಪಕ್ಷದ ಶಾಸಕರು ಬೇಸತ್ತು ಹೋಗಿದ್ದಾರೆ ಇದು ಶಾಸಕರ ರಾಜೀನಾಮೆಗೆ ಕಾರಣವಾಗಿ ಮುಂದೆ ಬಿಜೆಪಿ ಸರ್ಕಾರ ರಚನೆ ಮಾಡಲು ಮುಂದಾಗುವುದು ಎಂದು ಅರವಿಂದ ಲಿಂಬಾವಳಿ ಹೇಳಿದರು.ನಗರದಲ್ಲಿಂದು ಪತ್ರಿಕಾಗೋಷ್ಠಿ ಏರ್ಪಡಿಸಿ ಮಾತನಾಡಿದ ಅವರು, ಜೆಡಿಎಸ್- ಕಾಂಗ್ರೆಸ್ ಶಾಸಕರಲ್ಲಿಯೇ ಹೊಂದಾಣಿಕೆ ಇಲ್ಲ‌.‌ ಅವರ ಆಡಳಿತ ಅವರಿಗೆ ಬೇಸತ್ತು ಹೋಗಿದ್ದು ಇದಕ್ಕೆ ತಾಜಾ ಉದಾಹರಣೆ ಕುಪೇಂದ್ರ ರೆಡ್ಡಿ ಮಾತುಗಳು. ಬರುವ ದಿನಗಳಲ್ಲಿ ಶಾಸಕರ ರಾಜೀನಾಮೆಯಿಂದ ರಾಜ್ಯವು ಮತ್ತಷ್ಟು ಉಪಚುನಾವಣೆ ಎದುರಿಸಬೇಕಾಗುತ್ತದೆ. ಆಗ ಆಡಳಿತ ಪಕ್ಷಗಳ ಸಂಖ್ಯೆ ೧೦೪ ಕ್ಕಿಂತ ಕಡಿಮೆ ಬಂದಾಗ ಬಿಜೆಪಿ ಸರ್ಕಾರ ರಚನೆ ಮಾಡಲು ಮುಂದಾಗುವುದು. ಹೀಗಾಗಿಯೇ ಎರಡು ಉಪಚುನಾವಣೆಯಲ್ಲಿ ಜನರು ಬಿಜೆಪಿಯನ್ನು ಗೆಲ್ಲಿಸಿ ೧೦೬ ಕ್ಕೆ ಏರಿಸಿ ಎಂದು ಮನವಿ ಮಾಡುತ್ತಿದ್ದೇವೆ. ಈಗಾಗಲೇ ಇಬ್ಬರು ಪಕ್ಷೇತರ ಅಭ್ಯರ್ಥಿಗಳು ಬೆಂಬಲ ಕೊಟ್ಟಿದ್ದಾರೆ. ಇನ್ನೂ ಬರುವ ದಿನಗಳಲ್ಲಿ ಮೈತ್ರಿ ಪಕ್ಷಗಳ ಶಾಸಕರೇ ರಾಜೀನಾಮೆ ಕೊಟ್ಟು ಹೊರಬರುತ್ತಾರೆ. ಬಿಜೆಪಿ ಸರ್ಕಾರ ಬೀಳಿಸುವುದಿಲ್ಲ. ತಾವೇ ಬೀಳುವ ಸರ್ಕಾರ ಸರ್ಕಾರದ ಮೇಲೆ ಪ್ರಯತ್ನ ಮಾಡಬೇಡಿ ಅಂತಾ ವರಿಷ್ಠರು ಹೇಳಿದ್ದಾರೆ. ಹೀಗಾಗಿ ಮೈತ್ರಿ ಸರ್ಕಾರ ಬಿದ್ದಾಗ ಬಿಜೆಪಿ ಸರ್ಕಾರ ರಚನೆ ಮಾಡುವ ಪ್ರಯತ್ನ ಮಾಡಲಿದೆ ಎಂದರು.ಡಿಕೆಶಿ ವಾಮ ಮಾರ್ಗ ಬಳಕೆ:ಉಪಚುನಾವಣೆಯಲ್ಲಿ ಕಾಂಗ್ರೆಸ್ ವಾಮ ಮಾರ್ಗ ಬಳಸಿ ಗೆಲುವು ಸಾಧಿಸಲು ಮುಂದಾಗಿದೆ. ಸಚಿವ ಡಿ.ಕೆ.ಶಿವಕುಮಾರ ಬಿಜೆಪಿ ಕಾರ್ಯಕರ್ತರಿಗೆ ಬೆದರಿಕೆ ಹಾಕುವ ಕೆಲಸ ಮಾಡುತ್ತಿದ್ದು, ಪಕ್ಷದ ಮೂರನ್ನೆ - ನಾಲ್ಕನೇ ಹಂತದ ಮುಖಂಡರನ್ನು ಸಂಪರ್ಕಿಸಿ ಹಣದ ಆಮಿಷ ಒಡ್ಡುತ್ತಿದ್ದಾರೆ. ಈ ಹಿಂದೆ ಗುಂಡ್ಲುಪೇಟೆಯಲ್ಲಿ ವಾಹನದ ಟೈರ್ ಗಳಲ್ಲಿ ಹಣತಂದು ಹಂಚಿ ಅದಕ್ಕೆ ಆಡಳಿತದ ರಕ್ಷಣೆ ಕೊಟ್ಟಿದ್ದರು. ಅದೇ ಮಾದರಿಯಲ್ಲಿ ಕುಂದಗೋಳದಲ್ಲೂ ಉಪಚುನಾವಣೆ ಮಾಡುತ್ತಿದ್ದಾರೆ ಎಂದು ಗಂಭೀರವಾಗಿ ಆರೋಪ ಮಾಡಿದ ಅರವಿಂದ ಲಿಂಬಾವಳಿ ಪಾರದರ್ಶಕವಾಗಿ ಚುನಾವಣೆ ನಡೆಸುವುದನ್ನು ಡಿಕೆಶಿ ಗೆ ಹೇಳಿಕೊಡಬೇಕು ಎಂದರು.ಬೇನಾಮಿ ಆಸ್ತಿ ಮಾಡಿ ಕೇಸ್ ಎದುರಿಸುತ್ತಿರುವ ಡಿಕೆಶಿ ಬಿಎಸ್ ಯಡಿಯೂರಪ್ಪ ಮೇಲೆ ಗುತ್ತಿಗೆದಾರರಿಂದ ಹಣ ಕೇಳುತ್ತಿದ್ದಾರೆ ಎಂದು ಆರೋಪ ಮಾಡುತ್ತಿದ್ದಾರೆ.‌ಆದರೆ ಬಿಜೆಪಿ ಪಾರದರ್ಶಕವಾಗಿ ಚುನಾವಣೆ ಮಾಡುತ್ತಿದ್ದು, ಡಿ.ಕೆ.ಶಿವಕುಮಾರ ಮೇಲೆ ಐಟಿ ದಾಳಿ ಮಾಡಿದರು ಅವರು ಬದಲಾಗಲಿಲ್ಲ ಎಂದರು.ವೇಣುಗೋಪಾಲ ಅವರು ಬಿಜೆಪಿಯ ೨೦ ಶಾಸಕರು ಕಾಂಗ್ರೆಸ್ ನ ಜೊತೆ ಸಂಪರ್ಕದಲ್ಲಿ ಇದ್ದಾರೆ ಎಂದು ಹೇಳುತ್ತಿದ್ದಾರೆ. ಅವರು ಕಾಂಗ್ರೆಸ್ ಗೆ ಬಂದರು ಕಾಂಗ್ರೆಸ್ ಸರ್ಕಾರ ರಚನೆ ಆಗಲ್ಲಾ. ಅವರು ಮತ್ತೆ ಜೆಡಿಎಸ್ ಶಾಸಕರನ್ನು ಇಟ್ಟುಕೊಂಡೆ ಸರ್ಕಾರ ರಚನೆ ಮಾಡಬೇಕು. ಹಾಗಾದರೆ ಮುಂದೆ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ, ಕುಮಾರಸ್ವಾಮಿ ಇವರಲ್ಲಿ ಯಾರನ್ನು ಮುಖ್ಯಮಂತ್ರಿ ಮಾಡುತ್ತಾರೆ. ಬಿಜೆಪಿಯ ಶಾಸಕರು ಜೆಡಿಎಸ್- ಕಾಂಗ್ರೆಸ್ ನ ಸಂಪರ್ಕದಲ್ಲಿ ಇಲ್ಲಾ ಮೊದಲು ಕಾಂಗ್ರೆಸ್ ತನ್ನ ಶಾಸಕರನ್ನು ಸಮಾಧಾನ ಮಾಡಲಿ ಎಂದು ವ್ಯಂಗ್ಯವಾಡಿದರು.

_________________________

ಹುಬ್ಬಳ್ಳಿ: ಸ್ಟ್ರಿಂಜರ

ಯಲ್ಲಪ್ಪ‌ ಕುಂದಗೋಳConclusion:ಯಲ್ಲಪ್ಪ ಕುಂದಗೊಳ
Last Updated : May 14, 2019, 4:50 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.