ETV Bharat / state

ನೆರೆ ಸಂತ್ರಸ್ತರಿಗೆ ರಾಜ್ಯ ಸರ್ಕಾರದಿಂದ ಸಿಹಿ ಸುದ್ದಿ... ಪರಿಹಾರ ಮೊತ್ತ ಹೆಚ್ಚಿಸಿ ಆದೇಶ - flood victims fund

ರಾಜ್ಯದಲ್ಲಿ ಪ್ರವಾಹದಿಂದ ತತ್ತರಿಸಿದ ಸಂತ್ರಸ್ತರಿಗೆ ಕೇಂದ್ರ ಸರ್ಕಾರದ ಮಾರ್ಗಸೂಚಿ ಪರಿಹಾರಕ್ಕಿಂತ ಹೆಚ್ಚುವರಿ ಮೊತ್ತವನ್ನು ಮಂಜೂರು ಮಾಡಲು ರಾಜ್ಯ ಸರ್ಕಾರ ಅನುಮತಿ ನೀಡಿದೆ.

ವಿಧಾನಸೌದ
ವಿಧಾನಸೌದ
author img

By

Published : Oct 21, 2020, 12:30 PM IST

ಬೆಂಗಳೂರು: ಪ್ರವಾಹದಿಂದ ತತ್ತರಿಸಿರುವ ರಾಜ್ಯದ ಸಂತ್ರಸ್ತರಿಗೆ ಕೇಂದ್ರ ಸರ್ಕಾರದ ಮಾರ್ಗಸೂಚಿಯಲ್ಲಿ ನಿಗದಿಪಡಿಸಿರುವ ಪರಿಹಾರದ ಜೊತೆ ಹೆಚ್ಚುವರಿ ಮೊತ್ತವನ್ನು ಸೇರಿಸಿ ಪರಿಹಾರ ಒದಗಿಸಲು ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ.

ಈ ಸಂಬಂಧ ರಾಜ್ಯ ಸಚಿವಾಲಯವು ಅಕ್ಟೋಬರ್‌ 20ರಂದು ಆದೇಶ ಹೊರಡಿಸಿದ್ದು, 2020ನೇ ಸಾಲಿನ ಆಗಸ್ಟ್ ಮತ್ತು ಸಪ್ಟೆಂಬರ್ ತಿಂಗಳಲ್ಲಿ ಪ್ರವಾಹದಿಂದ ಬಾಧಿತವಾದ ಗ್ರಾಮಗಳ ಸಂತ್ರಸ್ತರ ಬಟ್ಟೆ-ಬರೆ ಹಾಗೂ ದಿನ ಬಳಕೆ ವಸ್ತುಗಳಿಗಾಗಿ ಕೇಂದ್ರ ಸರ್ಕಾರವು ಎಸ್​​ಡಿಆರ್​ಎಫ್ ಹಾಗೂ ಎನ್​​ಡಿಆರ್​​ಎಫ್ ಮಾರ್ಗಸೂಚಿಯಲ್ಲಿ ಪ್ರತಿ ಕುಟುಂಬಕ್ಕೆ ನಿಗದಿಪಡಿಸಿರುವ ರೂ. 3,800 ಜೊತೆಗೆ ಹೆಚ್ಚುವರಿಯಾಗಿ ರಾಜ್ಯ ಸರ್ಕಾರದ ವತಿಯಿಂದ 6,200 ರೂ. ಸೇರಿ ಒಟ್ಟು 10,000 ರೂ. ಪರಿಹಾರವನ್ನು ಪ್ರತಿ ಕುಟುಂಬಕ್ಕೆ ನೀಡಲು ಮಂಜೂರಾತಿ ನೀಡಿದೆ.

ಪ್ರವಾಹದಿಂದ ಸಂಪೂರ್ಣ ಅಥವಾ ತೀವ್ರವಾಗಿ/ಭಾಗಶಃ ಹಾನಿಗೊಳಗಾದ ಮನೆಗಳ ಪುನರ್ ‌ನಿರ್ಮಾಣ/ದುರಸ್ತಿಗಾಗಿ ಕೇಂದ್ರ ಸರ್ಕಾರದ ಮಾರ್ಗಸೂಚಿಯಲ್ಲಿ ನಿಗದಿಪಡಿಸಿರುವ ಮೊತ್ತಕ್ಕಿಂತ ಹೆಚ್ಚುವರಿಯಾಗಿ ಈ ಕೆಳಗಿನಂತೆ ಪರಿಹಾರ ಒದಗಿಸಲು ರಾಜ್ಯ ಸರ್ಕಾರ ಮುಂದಾಗಿದೆ.

ರಾಜ್ಯ ಸರ್ಕಾರದ ಆದೇಶದ ಪ್ರಕಾರ ಶೇ. 75ಕ್ಕಿಂತ ಹೆಚ್ಚು ಸಂಪೂರ್ಣ ಮನೆ ಹಾನಿಯಾಗಿದ್ದರೆ ಅದನ್ನು 'ಎ' ವರ್ಗಕ್ಕೆ ಸೇರ್ಪಡೆ ಮಾಡಲಾಗಿದ್ದು, 95,100 ರೂ. ಮಾರ್ಗಸೂಚಿ ಪರಿಹಾರ ನಿಗದಿಪಡಿಸಲಾಗಿದೆ. ಇದಕ್ಕೆ ಪರಿಷ್ಕೃತ ಪರಿಹಾರವಾಗಿ 5 ಲಕ್ಷ ರೂ.ಗೆ ಏರಿಸಲಾಗಿದೆ. ಶೇ. 25ರಿಂದ 75ರಷ್ಟು ಭಾಗಶಃ ಮನೆ ಹಾನಿಯಾಗಿದ್ದಲ್ಲಿ ಅದನ್ನು ಸಂಪೂರ್ಣವಾಗಿ ಕೆಡವಿ ನಿರ್ಮಿಸುವುದನ್ನು 'ಬಿ' ವರ್ಗಕ್ಕೆ ಸೇರಿಸಲಾಗಿದೆ. ಇದರ ಮಾರ್ಗಸೂಚಿ ಪರಿಹಾರ ಮೊತ್ತ 95,100 ರೂ. ಇದ್ದು, ಪರಿಷ್ಕೃತ ಪರಿಹಾರವಾಗಿ 5 ಲಕ್ಷ ರೂ.ಗೆ ಏರಿಸಲಾಗಿದೆ.

ಶೇ. 25ರಿಂದ 75ರಷ್ಟು ಭಾಗಶಹ ಮನೆ ಹಾನಿಯಾಗಿ ದುರಸ್ತಿಗೆ ಒಳಪಡಿಸುವ ಕಾರ್ಯವನ್ನು ಕೂಡ 'ಬಿ' ವರ್ಗಕ್ಕೆ ಸೇರಿಸಲಾಗಿದೆ. ಇದರ ಮಾರ್ಗಸೂಚಿ ಪರಿಹಾರ ಮೊತ್ತ 95,100 ರೂ. ಇದೆ. ಪರಿಷ್ಕೃತ ಪರಿಹಾರವಾಗಿ 3 ಲಕ್ಷ ರೂ.ಗೆ ಏರಿಸಲಾಗಿದೆ. ಜೊತೆಗೆ ಶೇ. 15ರಿಂದ 25ರಷ್ಟು ಅಲ್ಪ ಸ್ವಲ್ಪ ಮನೆ ಹಾನಿ ಆಗಿದ್ದರೆ ಅದನ್ನು 'ಸಿ' ವರ್ಗಕ್ಕೆ ಸೇರಿಸಲಾಗಿದ್ದು, ಮಾರ್ಗಸೂಚಿ ಪರಿಹಾರ ಮೊತ್ತ 5,200 ಇದ್ದರೆ, ಹೆಚ್ಚುವರಿ ಪರಿಹಾರ 50 ಸಾವಿರ ರೂ. ನೀಡುವುದಾಗಿ ಸರ್ಕಾರದ ಆದೇಶದಲ್ಲಿ ವಿವರಿಸಲಾಗಿದೆ.

ನೆರೆ ಹಾವಳಿಯಿಂದ ಹಾನಿಗೀಡಾದ ಮನೆಗಳ ಪುನರ್ ನಿರ್ಮಾಣ/ದುರಸ್ತಿ ಕಾರ್ಯ ಹಾಗೂ ಪ್ರವಾಹದಿಂದ ಮನೆಯಲ್ಲಿದ್ದ ಗೃಹೋಪಯೋಗಿ ವಸ್ತುಗಳನ್ನು ಕಳೆದುಕೊಂಡ ಸಂತ್ರಸ್ತರ ಪರಿಹಾರ ಕಾರ್ಯಗಳಿಗೆ ಅನ್ವಯಿಸಲು ಆಗಸ್ಟ್ 7ರ ಆದೇಶವನ್ನು ಯಥಾವತ್ತಾಗಿ ಮುಂದುವರೆಸಲು ಸರ್ಕಾರವು ಮಂಜೂರಾತಿ ನೀಡಿದೆ ಎಂದು ರಾಜ್ಯಪಾಲರ ಆದೇಶದ ಅನುಸಾರ ಸರ್ಕಾರದ ಕಂದಾಯ ಇಲಾಖೆ ಅಧೀನ ಕಾರ್ಯದರ್ಶಿ ನಾಗರಾಜು ಎಸ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.