ETV Bharat / state

ಬೆಳಗಾವಿಯ ಸಾಂಬ್ರಾ ಏರ್​ಪೋರ್ಟ್​ನಲ್ಲಿ ಸೈನಿಕನ ಬಳಿ ಜೀವಂತ ಗುಂಡು ಪತ್ತೆ: ಸುಬೇದಾರ್ ಪೊಲೀಸ್ ವಶಕ್ಕೆ - Am 47 bullet found news

ಸೈನಿಕನೊಬ್ಬನ ಬಳಿ ಎಕೆ-47 ಗನ್‌ಗೆ ಬಳಸುವ ಒಂದು ಜೀವಂತ ಗುಂಡು ಪತ್ತೆಯಾದ ಘಟನೆ ನಗರದ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಇಂದು ನಡೆದಿದೆ.

Airport
Airport
author img

By

Published : Sep 13, 2020, 12:32 PM IST

ಬೆಳಗಾವಿ: ಜೀವಂತ ಗುಂಡು ಸಮೇತ ಪ್ರಯಾಣ ಬೆಳೆಸುತ್ತಿದ್ದ ಯೋಧನನ್ನು ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದ ಭದ್ರತಾ ಪಡೆಯ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ವಿಮಾನ ನಿಲ್ದಾಣದ ಕೆಎಸ್ಐಎಸ್ಎಫ್ ಅಧಿಕಾರಿಗಳು ತಪಾಸಣೆ ನಡೆಸುವ ವೇಳೆ ಸುಬೇದಾರ್ ಅರುಣ್ ಭೋಸಲೆ‌ ಬಳಿ ಒಂದು ಎಕೆ 47 ಜೀವಂತ ಗುಂಡು ಪತ್ತೆಯಾಗಿದೆ. ಜೊತೆಗೆ ಒಂದು ಇನ್ಸಾಸ್ ಫೈರ್ಡ್ ಎಂಪ್ಟಿ ಕೇಸ್ ಸಹ ದೊರೆತಿದೆ.

ಸುಬೇದಾರ್ ಅರುಣ್ ಭೋಸಲೆ‌ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸೈನಿಕನನ್ನು ಪೊಲೀಸರು ಎಂಎಲ್‌ಐಆರ್‌ಸಿ ವಶಕ್ಕೆ ನೀಡಿದ್ದಾರೆ‌.

ಬೆಳಗಾವಿಯ ಮರಾಠಾ ಲಘು ಪದಾತಿ ದಳದ ಅಧಿಕಾರಿಗಳು ಸೈನಿಕನನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಈ ಕುರಿತು ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.