ETV Bharat / state

ಹಾಸನ ನಗರಸಭೆ ವ್ಯಾಪ್ತಿಗೆ ಹೊಸದಾಗಿ 25 ಗ್ರಾಮಗಳು ಸೇರ್ಪಡೆ - 25 new villages to be added to Hassan Municipality

ಸತ್ಯಮಂಗಲ, ಹರಳಹಳ್ಳಿ, ತೇಜೂರು, ಟಿ.ಕಾಟಿಹಳ್ಳಿ, ಭೂವನಹಳ್ಳಿ ಮಣಚನಹಳ್ಳಿ, ಕಂದಲಿ, ತಟ್ಟೆಕೆರೆ ಹಾಗೂ ಹನುಂತಪುರ ಗ್ರಾಮ ಪಂಚಾಯತಿಗಳ ಒಟ್ಟು 25 ಗ್ರಾಮಗಳನ್ನು ಹಾಸನ ನಗರಸಭೆ ವ್ಯಾಪ್ತಿಗೆ ಸೇರ್ಪಡೆ ಮಾಡಲು ಸಚಿವ ಸಂಪುಟ ಅನುಮೋದನೆ ನೀಡಿದೆ.

Hassan
Hassan
author img

By

Published : Oct 1, 2020, 5:06 PM IST

ಹಾಸನ: ಹಾಸನ ನಗರಸಭೆ ವ್ಯಾಪ್ತಿಗೆ ಇನ್ನೂ 25 ಗ್ರಾಮಗಳನ್ನು ಸೇರ್ಪಡೆ ಮಾಡಲು ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ.

ಪೌರಾಡಳಿತ ಸಚಿವ ಡಾ. ನಾರಾಯಣ ಗೌಡ ಅವರು ಈ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ, ವಿಷಯವನ್ನು ಸಂಪುಟದ ಮುಂದೆ ಇಟ್ಟು ಅನುಮೋದನೆ ಪಡೆದುಕೊಂಡಿದ್ದಾರೆ.

1995 ರಲ್ಲಿ ಘೋಷಣೆಯಾದ ಹಾಸನ ನಗರಸಭೆ ವ್ಯಾಪ್ತಿಯಲ್ಲಿ ಪ್ರಸ್ತುತ 1.56 ಲಕ್ಷ ಜನಸಂಖ್ಯೆ ಇದೆ. ಈಗ ಇನ್ನೂ 25 ಗ್ರಾಮಗಳನ್ನ ಸೇರ್ಪಡೆ ಮಾಡುವುದರಿಂದ 2.26 ಲಕ್ಷ ಜನಸಂಖ್ಯೆ ಆಗಲಿದೆ. ಈ ಬಗ್ಗೆ ಹಾಸನ ಶಾಸಕ ಪ್ರೀತಂ ಗೌಡ ಅವರು ಸಚಿವ ಡಾ. ನಾರಾಯಣ ಗೌಡ ಅವರಲ್ಲಿ ಮನವಿ ಮಾಡಿದ್ದರು.

ಈ ಹಿನ್ನೆಲೆಯಲ್ಲಿ 25 ಗ್ರಾಮಗಳನ್ನು ನಗರಸಭೆ ವ್ಯಾಪ್ತಿಗೆ ಸೇರಿಸಲು ಸಚಿವರು ನಡೆಸಿದ ಪ್ರಯತ್ನ ಸಫಲವಾಗಿದೆ. ಸತ್ಯಮಂಗಲ, ಹರಳಹಳ್ಳಿ, ತೇಜೂರು, ಟಿ.ಕಾಟಿಹಳ್ಳಿ, ಭೂವನಹಳ್ಳಿ ಮಣಚನಹಳ್ಳಿ, ಕಂದಲಿ, ತಟ್ಟೆಕೆರೆ ಹಾಗೂ ಹನುಂತಪುರ ಗ್ರಾಮ ಪಂಚಾಯತಿಗಳ ಒಟ್ಟು 25 ಗ್ರಾಮಗಳನ್ನು ಹಾಸನ ನಗರಸಭೆ ವ್ಯಾಪ್ತಿಗೆ ಸೇರ್ಪಡೆ ಮಾಡಲು ಪ್ರಸ್ತಾಪಿಸಲಾಗಿದ್ದು, ಸಚಿವ ಸಂಪುಟ ಇದಕ್ಕೆ ಅನುಮೋದನೆ ನೀಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.