ಶಿವಮೊಗ್ಗ : ಕಾಲು ಕೆರೆದು ಗಡಿ ಆಕ್ರಮಣ ಮಾಡಿ ಭಾರತದ ಮೇಲೆ ಯೋಧರನ್ನು ಹತ್ಯೆ ಮಾಡಿದ ಚೀನಾ ಧೋರಣೆ ಖಂಡಿಸಿ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಯಿತು.
ನಗರದ ಶಿವಪ್ಪನಾಯಕ ವೃತ್ತದಲ್ಲಿ ಯುವ ಕಾಂಗ್ರೆಸ್ ವಿನೂತನ ರೀತಿ ಪ್ರತಿಭಟಿಸಿ, ಚೀನಾ ಅಧ್ಯಕ್ಷ ಕ್ಸಿ ಜಿಂಗ್ ಪಿಂಗ್‌ಗೆ ಅಣಕವಾಗಿ ನೇಣಿಗೆ ಹಾಕುವ ಮೂಲಕ ಚೀನಾದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿತು.
ಚೀನಾ ಗಡಿ ತಗಾದೆ ತೆಗೆಯುತ್ತಾ ನೆರೆ ದೇಶ ಭಾರತದೊಂದಿಗೆ ಯಾವಾಗಲೂ ಜಗಳ ಮಾಡುತ್ತಿರುತ್ತದೆ. ಇತ್ತೀಚಿಗೆ ಗಾಲ್ವಾನ್ ಗಡಿ ಭಾಗದಲ್ಲಿ ಭಾರತೀಯ ಯೋಧರನ್ನು ಕಲ್ಲು ಮತ್ತು ಕಬ್ಬಿಣದ ರಾಡುಗಳಿಂದ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾರೆ. ಇದು ಖಂಡನೀಯವಾಗಿದೆ. ಹೀಗಾಗಿ ಕೇಂದ್ರ ಸರ್ಕಾರ ಚೀನಾ ದೇಶದ ಮೇಲೆ ಯುದ್ಧ ಘೋಷಿಸಬೇಕು. ಪ್ರಧಾನಿ ಜೊತೆ ಕಾಂಗ್ರೆಸ್ ಸದಾಕಾಲ ಇರುತ್ತದೆ ಎಂದು ಇದೇ ವೇಳೆ ಯುವ ಕಾಂಗ್ರೆಸ್ ನ ಮುಖಂಡ ಗಿರೀಶ್ ತಿಳಿಸಿದರು.
ಚೀನಾ ಅಧ್ಯಕ್ಷ ಕ್ಸಿ ಜಿಂಗ್ ಪಿಂಗ್‌ನನ್ನು ಭಾರತೀಯ ನಾರಿಯರ ಕೈಯಲ್ಲಿ ನೇಣು ಹಾಕಿಸುವ ಮೂಲಕ ಚೀನಾಕ್ಕೆ ತಕ್ಕ ಪಾಠ ಕಲಿಸಬೇಕು ಎಂದ ಅವರು, ಈ ವೇಳೆ ದೇಶದ ಎಲ್ಲ ಪ್ರಜೆಗಳು ಚೀನಾ ವಸ್ತುಗಳನ್ನು ಬಹಿಷ್ಕಾರ ಮಾಡಬೇಕು ಎಂದು ಆಗ್ರಹಿಸಿದರು.